Advertisement

ಜಾಗತಿಕ ಶಾಂತಿಯಲ್ಲಿ ಭಾರತದ ಪಾತ್ರ: ಪ್ರಧಾನಿ ಮೋದಿ

06:00 AM Jul 03, 2018 | Team Udayavani |

ಹೊಸದಿಲ್ಲಿ: ಪ್ರಸ್ತುತ ಅಸ್ಥಿರ ವಿಶ್ವದಲ್ಲಿ ಜಾಗತಿಕವಾಗಿ ಶಾಂತಿ, ಅಭ್ಯುದಯಕ್ಕಾಗಿ ಭಾರತ ಮಹತ್ವದ ಪಾತ್ರ ವಹಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು. ದಿಲ್ಲಿಯಲ್ಲಿ ಮೂರು ದಿನಗಳ ಕಾಲ ನಡೆಯುತ್ತಿರುವ ವಿದೇಶಿ ರಾಯಭಾರಿಗಳ ಸಮ್ಮೇಳನದ ಸಮಾರೋಪದಲ್ಲಿ ಅವರು ಮಾತನಾಡಿದರು. ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್‌ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅಧಿಕಾರವಹಿಸಿಕೊಂಡ ಬಳಿಕ ಭಾರತದ ಜಾಗತಿಕ ಘನತೆ, ಪಾರ್ಶ್ವನೋಟ ಪರಿಣಾಮಕಾರಿಯಾಗಿ ಸಾಗಿದೆ ಎಂದು ಬಣ್ಣಿಸಿದರು. ಸಮ್ಮೇಳನದಲ್ಲಿ ವಿದೇಶಾಂಗ ನೀತಿ ಆದ್ಯತೆ, ಭಾರತದ ಧ್ಯೇಯೋದ್ದೇಶಗಳ ಕುರಿತು ಚರ್ಚಿಸಲಾಯಿತು. ಇದೇ ವೇಳೆ ವಿದೇಶಾಂಗ ಖಾತೆ ಸಹಾಯಕ ಸಚಿವರಾದ ವಿ.ಕೆ.ಸಿಂಗ್‌ ಹಾಗೂ ಎಂ.ಜೆ. ಅಕºರ್‌ ಉಪಸ್ಥಿತರಿದ್ದರು. ಬಳಿಕ ವಿದೇಶಿ ರಾಯಭಾರಿಗಳು ರಾಷ್ಟಪತಿ ಭವನದಲ್ಲಿ ರಾಷ್ಟ್ರಪತಿ ಕೋವಿಂದ್‌ ಅವರನ್ನು ಭೇಟಿ ಮಾಡಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next