Advertisement

ಉಗ್ರ ನಿಗ್ರಹಕ್ಕೆ ಭಾರತ ಸಹಯೋಗ:ನಿಕ್ಕಿ ಹ್ಯಾಲಿ

10:19 AM Oct 19, 2017 | |

ವಾಷಿಂಗ್ಟನ್‌: ಪಾಕಿಸ್ಥಾನದ ಮೇಲೆ ಒಂದು ಕಣ್ಣಿಟ್ಟು, ಆ ರಾಷ್ಟ್ರ ಉಗ್ರಗಾಮಿಗಳ ಸ್ವರ್ಗ ಎಂಬುದನ್ನು ನಿರೂಪಿಸಲು ಭಾರತ ಅಮೆರಿಕಕ್ಕೆ ನೆರವಾಗಬಲ್ಲದು ಎಂದು ವಿಶ್ವ ಸಂಸ್ಥೆಯಲ್ಲಿ ಅಮೆರಿಕದ ರಾಯಭಾರಿಯಾಗಿ ರುವ ನಿಕ್ಕಿ ಹ್ಯಾಲಿ ಅಭಿಪ್ರಾಯ ಪಟ್ಟಿದ್ದಾರೆ.

Advertisement

ಭಯೋತ್ಪಾದನೆ ನಿಗ್ರಹಕ್ಕಾಗಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ರೂಪಿಸಿದ ನೀತಿ ಯಲ್ಲಿ ಭಾರತದ ಸಹಯೋಗ ಪಡೆಯುವ ಪ್ರಸ್ತಾವವೂ ಪ್ರಮುಖವಾಗಿದೆ. ಉಗ್ರರ ಅಡಗುದಾಣಗಳನ್ನು ನಾಶಗೊಳಿಸಿ, ಅವರ ಹುಟ್ಟಡಗಿಸಲು, ಅಣ್ವಸ್ತ್ರಗಳನ್ನು ಉಗ್ರರ ಕೈಗೆ ಸಿಗದಂತೆ ಕಾಪಾಡಲು ತನ್ನ ಸೇನೆ, ಆರ್ಥಿಕತೆ ಸಹಿತ ಎಲ್ಲವನ್ನೂ ಬಳಸಲು ಅಮೆರಿಕ ನಿರ್ಧ ರಿಸಿದೆ ಎಂದೂ ಹ್ಯಾಲಿ ತಿಳಿಸಿದ್ದಾರೆ.

ಅಫ‌ಘಾನಿಸ್ಥಾನದ ಪುನರುತ್ಥಾನ ಹಾಗೂ ಆರ್ಥಿಕ ಸ್ಥಿರತೆಗೆ ಭಾರತ ಗಣನೀಯ ಸಹಕಾರ ನೀಡಿದ್ದು, ಭಾರತದ ಜತೆಗೆ ಆರ್ಥಿಕ ಹಾಗೂ ರಕ್ಷಣಾ ಪಾಲುದಾರಿಕೆಯನ್ನು ವೃದ್ಧಿಸಿಕೊಳ್ಳಲು ಅಮೆರಿಕ ಉತ್ಸುಕವಾಗಿದೆ. ಪಾಕಿಸ್ತಾನ ಉಗ್ರ ರಿಗೆ ನೆಲೆ ಒದಗಿಸುತ್ತಿರುವ ಬಗ್ಗೆ ಟ್ರಂಪ್‌ ಕಠಿನ ನಿಲುವು ತಾಳಿದ್ದಾರೆ. ಉಗ್ರರಿಗೆ ಆಶ್ರಯ ಕೊಡು ವುದನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದರು.

ವರ್ಷಾಂತ್ಯಕ್ಕೆ ತಾವು ಭಾರತ ಪ್ರವಾಸ ಕೈಗೊಳ್ಳುವುದಾಗಿ ತಿಳಿಸಿದ ಹ್ಯಾಲಿ, ಭಾರತ ಭಯೋತ್ಪಾದನೆಯ ನೋವನ್ನು ಸಾಕಷ್ಟು ಅನುಭವಿಸಿದ್ದು, ಅದರ ಮೂಲೋತ್ಪಾಟನೆಗೆ ಸಜ್ಜಾಗಿದೆ. ಜಗತ್ತಿನಲ್ಲಿ ಅಣ್ವಸ್ತ್ರ ಹೊಂದಿರುವ ರಾಷ್ಟ್ರಗಳು ಉತ್ತರ ಕೊರಿಯಾದಂತೆ ವರ್ತಿಸ ಬಾರದು ಎಂಬುದನ್ನು ಜಗತ್ತಿಗೆ ನಾವು ತೋರಿಸಲು ಬಯಸುತ್ತೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next