ವಾಷಿಂಗ್ಟನ್: ಉಕ್ರೇನ್, ರಷ್ಯಾ ನಡುವಿನ ಯುದ್ಧ ಮುಂದುವರಿದಿರುವ ನಡುವೆಯೇ ಕಡಿಮೆ ದರದಲ್ಲಿ ಕಚ್ಛಾ ತೈಲವನ್ನು ಭಾರತಕ್ಕೆ ನೀಡುವುದಾಗಿ ರಷ್ಯಾ ನೀಡಿರುವ ಆಫರ್ ನಿಂದ ಅಮೆರಿಕ ಹೇರಿರುವ ನಿರ್ಬಂಧದ ಉಲ್ಲಂಘನೆಯಾಗುವುದಿಲ್ಲ ಎಂದು ಶ್ವೇತಭವನ ಸ್ಪಷ್ಟಪಡಿಸಿದೆ.
ಇದನ್ನೂ ಓದಿ:ಪರಿಸರ ಅಧಿಕಾರಿ ಮನೆ, ಕಚೇರಿ ಮೇಲೆ ಎಸಿಬಿ ದಾಳಿ: ಅಪಾರ ಪ್ರಮಾಣ ಆಸ್ತಿ ಪತ್ತೆ
ರಷ್ಯಾದ ಮೇಲೆ ಅಮೆರಿಕ ವಿಧಿಸಿರುವ ನಿರ್ಬಂಧದ ಸಂದೇಶ ಎಲ್ಲಾ ದೇಶಗಳಿಗೆ ಅನ್ವಯವಾಗಲಿದೆ ಎಂದು ಶ್ವೇತ ಭವನದ ಮಾಧ್ಯಮ ಕಾರ್ಯದರ್ಶಿ ಜೇನ್ ಪ್ಸಾಕಿ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಕಚ್ಛಾ ತೈಲವನ್ನು ಕಡಿತದ ದರದಲ್ಲಿ ನೀಡುವುದಾಗಿ ರಷ್ಯಾ ಭಾರತಕ್ಕೆ ನೀಡಿರುವ ಆಫರ್ ಅನ್ನು ಭಾರತ ಪರಿಗಣಿಸುವ ಸಾಧ್ಯತೆ ಇದೆಯೇ ಎಂಬ ಪ್ರಶ್ನೆಗೆ, ಇದು ನಿರ್ಬಂಧವನ್ನು ಉಲ್ಲಂಘಿಸಲಿದೆ ಎಂಬುದನ್ನು ನಾನು ನಂಬಲಾರೆ ಎಂದು ಹೇಳಿದರು.
ಉಕ್ರೇನ್ ಮೇಲಿನ ರಷ್ಯಾದ ಆಕ್ರಮಣವನ್ನು ಭಾರತ ಬೆಂಬಲಿಸುವುದಿಲ್ಲ. ಉಭಯ ದೇಶಗಳು ಮಾತುಕತೆಯ ಮೂಲಕವೇ ಸಮಸ್ಯೆಯನ್ನು ಬಗೆಹರಿಸಬೇಕೆಂದು ಭಾರತ ಒತ್ತಾಯಿಸಿದೆ. ಏತನ್ಮಧ್ಯೆ ಎಲ್ಲಾ ಯುನೈಟೆಡ್ ನೇಷನ್ಸ್ ರಷ್ಯಾದ ವಿರುದ್ಧ ನಿರ್ಣಯ ಕೈಗೊಂಡಿರುವುದಾಗಿ ಜೇನ್ ಈ ಸಂದರ್ಭದಲ್ಲಿ ತಿಳಿಸಿದ್ದಾರೆ.