Advertisement

I.N.D.I.A: ಕೆಲ ಟಿವಿ ನಿರೂಪಕರನ್ನು ಬಹಿಷ್ಕರಿಸುತ್ತ ಐಎನ್‌ಡಿಐಎ?

08:43 PM Sep 07, 2023 | Team Udayavani |

ನವದೆಹಲಿ: ಕೆಲ ಟಿವಿ ಚಾನೆಲ್‌ಗ‌ಳ ಕೆಲವು ನಿರೂಪಕರನ್ನು ಬಹಿಷ್ಕರಿಸಲು ಪ್ರತಿಪಕ್ಷಗಳ ಒಕ್ಕೂಟ ಐಎನ್‌ಡಿಐಎ ಮುಂದಾಗಿದೆ. ಅಲ್ಲದೇ ಈ ನಿರೂಪಕರು ನಡೆಸಿಕೊಡುವ ಸಂವಾದ, ಚರ್ಚೆ ಕಾರ್ಯಕ್ರಮಗಳಲ್ಲಿ ಭಾಗವಹಿಸದೇ ಇರಲು ಐಎನ್‌ಡಿಐಎ ನಾಯಕರು ತೀರ್ಮಾನಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

Advertisement

ಸೆ.8ರಂದು ಐಎನ್‌ಡಿಐಎ ಮಾಧ್ಯಮ ಸಮಿತಿ ಸದಸ್ಯರು ಸಭೆ ಸೇರಲಿದ್ದು, ಈ ವೇಳೆ ಬಹಿಷ್ಕರಿಸಲಾಗುವ ನಿರೂಪಕರ ಪಟ್ಟಿಯನ್ನು ಸಿದ್ಧಪಡಿಸಲಾಗುತ್ತದೆ. “ಯಾವುದೇ ಚಾನೆಲ್‌ ಅನ್ನು ಬಹಿಷ್ಕರಿಸುವುದಿಲ್ಲ. ತಮ್ಮ ಟಿವಿ ಕಾರ್ಯಕ್ರಮಗಳಲ್ಲಿ ನಿರ್ದಿಷ್ಟ ನಿರೂಪಣೆ ಹೇರಲು ಪ್ರಯತ್ನಿಸುವ ಕೆಲವು ನಿರೂಪಕರನ್ನು ಬಹಿಷ್ಕರಿಸಲಾಗುವುದು. ಪಟ್ಟಿಯಲ್ಲಿ 8-9 ನಿರೂಪಕರಿರಬಹುದು’ ಎಂದು ಐಎನ್‌ಡಿಐಎ ಒಕ್ಕೂಟದ ನಾಯಕರೊಬ್ಬರು ತಿಳಿಸಿದ್ದಾರೆ.

“ವಿರೋಧ ಪಕ್ಷಗಳ ಹಿತಾಸಕ್ತಿಗಳಿಗೆ ವಿರುದ್ಧವಾದ ಹಾಗೂ ಆಡಳಿತರೂಢ ಬಿಜೆಪಿ ಪರವಾಗಿ ಕಾರ್ಯನಿರ್ವಹಿಸುವ ಮತ್ತು ಈ ನಿಟ್ಟಿನಲ್ಲಿ ನಿರ್ದಿಷ್ಟ ನಿರೂಪಣೆ ಹೇರಲು ಪ್ರಯತ್ನಿಸುವ ನಿರೂಪಕರು ಈ ಪಟ್ಟಿಯಲ್ಲಿ ಇರಲಿದ್ದಾರೆ. 2024ರ ಲೋಕಸಭೆ ಚುನಾವಣೆ ಪೂರ್ಣಗೊಳ್ಳುವವರೆಗೂ ಐಎನ್‌ಡಿಐಎ ನಾಯಕರು ಇವರ ಟಿವಿ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದಿಲ್ಲ. ಹಿಂದಿ ಮತ್ತು ಇಂಗ್ಲಿಷ್‌ ಚಾನೆಲ್‌ಗ‌ಳ ನಿರೂಪಕರು ಈ ಪಟ್ಟಿಯಲ್ಲಿ ಇರಲಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ. ಐಎನ್‌ಡಿಐಎ ಮಾಧ್ಯಮ ಸಮಿತಿಯಲ್ಲಿ ಕಾಂಗ್ರೆಸ್‌ ನಾಯಕ ಜೈರಾಮ್‌ ರಮೇಶ್‌, ಆಪ್‌ನ ರಾಘವ್‌ ಚಡ್ಡಾ, ಆರ್‌ಜೆಡಿಯ ಮನೋಜ್‌ ಜಾ ಸೇರಿದಂತೆ ಕೆಲವು ನಾಯಕರು ಇದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next