Advertisement

Singapore: ಸಿಂಗಾಪುರಕ್ಕೆ ಭಾರತ ಮೂಲದ ಥರ್ಮನ್‌ ಷಣ್ಮುಗರತ್ನಂ ಅಧ್ಯಕ್ಷ

08:33 PM Sep 14, 2023 | Team Udayavani |

ಸಿಂಗಾಪುರ: ಭಾರತೀಯ ಮೂಲದ ಸಿಂಗಾಪುರ ಸಂಜಾತ ಅರ್ಥಶಾಸ್ತ್ರಜ್ಞ ಥರ್ಮನ್‌ ಷಣ್ಮುಗರತ್ನಂ(66) ಅವರು ಗುರುವಾರ ಸಿಂಗಾಪುರದ ನೂತನ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಇಲ್ಲಿನ 154 ವರ್ಷಗಳಷ್ಟು ಹಳೆಯ ಅರಮನೆ ಇಸ್ತಾನಾದಲ್ಲಿ ಥರ್ಮನ್‌ ಅವರಿಗೆ ಭಾರತೀಯ ಮೂಲದ ಮುಖ್ಯ ನ್ಯಾಯಮೂರ್ತಿ ಸುಂದರೇಶ್‌ ಮೆನನ್‌ ಅವರು ಪ್ರತಿಜ್ಞಾವಿಧಿ ಬೋಧಿಸಿದರು.

Advertisement

ಸೆ.1ರಂದು ನಡೆದಿದ್ದ ಅಧ್ಯಕ್ಷೀಯ ಚುನಾವಣೆಯಲ್ಲಿ ಶೇ.70.4 ಮತಗಳನ್ನು ಗಳಿಸುವ ಮೂಲಕ ಷಣ್ಮುಗರತ್ನಂ ಎಲ್ಲರನ್ನೂ ಅಚ್ಚರಿಗೆ ನೂಕಿದ್ದರು. 6 ವರ್ಷಗಳ ಕಾಲ ಅವರು ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next