ವಿಜಯಪುರ: ವಿಜಯಪುರ ಜಿಲ್ಲೆಯ ಇಬ್ಬರು ಬಾಲ ಪ್ರತಿಭೆಗಳಾದ ಸಿದ್ದಾಂತಗೌಡ ಹಾಗೂ ಶಿವನ್ಯಾ ಇಬ್ಬರೂ ಅಣ್ಣ-ತಂಗಿಯಾಗಿದ್ದು, ತಮ್ಮಲ್ಲಿರುವ ವಿಶಿಷ್ಟ ಪ್ರತಿಭೆಯಿಂದಾಗಿ ಇಂಡಿಯಾ ಬುಕ್ ಆಫ್ ರೆಕಾರ್ಡ ಪುಸ್ತಕದಲ್ಲಿ ಹೆಸರು ದಾಖಲಿಸಿ, ಸಾಧನೆ ಮಾಡಿದ್ದಾರೆ.
ಸಿಂದಗಿ ತಾಲೂಕಿನ ಸುಂಗಠಾಣ ಗ್ರಾಮದ ಎಸ್.ಕೆ.ಬಿರಾದಾರ ಶಿಕ್ಷಣ ಇಲಾಖೆ ಕ್ಷೇತ್ರ ಸಮನ್ವಯ ಅಧಿಕಾರಿಯಾಗಿಯಾಗಿದ್ದು, ಇವರ ಮಕ್ಕಳೇ ತಮ್ಮಲ್ಲಿರುವ ವಿಶಿಷ್ಟ ಪ್ರತಿಭೆಯಿಂದಾಗಿ ಜಿಲ್ಲೆ ಕೀರ್ತಿಯನ್ನು ದಾಖಲೆ ಪುಸ್ತಕದಲ್ಲಿ ಬರೆಸುವ ಸಾಧನೆ ಮಾಡಿದ್ದಾರೆ.
ಸಾಮಾನ್ಯ ಜ್ಞಾನ, ವಿಜ್ಞಾನ, ಗಣಿತಗಳಂಥ ಕಠಿಣ ವಿಷಯಗಳ ಪ್ರಶ್ನೆಗಳಿಗೆ ಸುಲಭವಾಗಿ ಉತ್ತರಿಸುವ ಈ ಮಕ್ಕಳು, ವಚನಗಳನ್ನು ಸುಲಭವಾಗಿ ಹೇಳುವಂಥ ವಿಶಿಷ್ಟ ಪ್ರತಿಭೆ ಹೊಂದಿದ್ದು, ಇದೇ ಕಾರಣಕ್ಕೆ ಇವರಲ್ಲಿರುವ ಪ್ರತಿಭೆಯನ್ನು ಗುರುತಿಸಿ ಪ್ರತಿಭಾ ಪುರಸ್ಕಾರ ನೀಡಿ ಪ್ರತಿ ವರ್ಷ ಇಂಡಿಯಾ ಬುಕ್ ಆಫ ರೆಕಾರ್ಡ ದಾಖಲೆ ಮಾಡುತ್ತಾರೆ.
ಕೋವಿಡ್ ಸಂಕಷ್ಟದಲ್ಲಿದ್ದಾಗ ಶಾಲೆಗೆ ಹೋಗದೆ ಮನೆಯಲ್ಲಿಯೇ ತಂದೆ ತಾಯಿಯ ಸಹಕಾರದಲ್ಲಿ ಇಂತಹ ಸಾಧನೆ ಮಾಡಿದ್ದಾರೆ. ಶಾಲೆಯಲ್ಲೂ ಕಲಿಕೆಯಲ್ಲಿ ಮುಂಚೂಣಿಯಲ್ಲಿರುವ ಈ ಪ್ರತಿಭಾವಂತ ಬಾಲರು ಜ್ಷಾನ ಕಣಜ ಸಂಪಾದಿಸಿದ್ದಾರೆ. ತಮ್ಮ ಮಕ್ಕಳ ಈ ಸಾಧನೆಗೆ ಹೆತ್ತವರಾದ ಎಸ್.ಕೆ.ಬಿರಾದಾರ, ತಾಯಿ ಗೀತಾ ಸಂತಸಗೊಂಡಿದ್ದಾರೆ.