ಕಾರ್ಕಳ: ರಂಗೋಲಿಯಲ್ಲಿ ಅನೇಕ ಸಾಧ್ಯತೆಗಳನ್ನು ತೆರೆದಿಟ್ಟ ಅದ್ಭುತ ಕಲಾವಿದ ಕಾರ್ಕಳದ ಸೂರ್ಯ ಪುರೋಹಿತ್ ಅವರು ಕಣ್ಣಿಗೆ ಬಟ್ಟೆ ಕಟ್ಟಿ ರಚಿಸಿದಸೂರ್ಯೋದಯ ಚಿತ್ರ ಇಂಡಿಯಾ ಬುಕ್ ಆಫ್ ರೆಕಾರ್ಡ್-2021ಕ್ಕೆ ಆಯ್ಕೆಯಾಗಿದೆ.
ಮೂಲತಃ ಪುತ್ತೂರಿ ನವರಾದ ಸದ್ಯ ಕಾರ್ಕಳದಲ್ಲಿ ವಾಸವಾಗಿರುವ ಸೂರ್ಯ ಪುರೋಹಿತ್ ಹಲವು ಕಲರ್ ಮಿಕ್ಸಿಂಗ್ ಮೂಲಕ ಚಿತ್ರಗಳನ್ನು ಬಿಡಿಸಿ ಓರ್ವ ಉತ್ತಮ ಚಿತ್ರ ಕಲಾವಿದರಾಗಿ ಹೊರ ಹೊಮ್ಮಿದ್ದಾರೆ. ಲಾಕ್‌ಡೌನ್ ಸಮಯದಲ್ಲಿ ಕಣ್ಣಿಗೆ ಬಟ್ಟೆ ಕಟ್ಟಿ ಸೂರ್ಯೋದಯದ ದೃಶ್ಯದ ಚಿತ್ರ ಬಿಡಿಸುವ ಪ್ರಯತ್ನಕ್ಕೆ ಮುಂದಾಗಿದ್ದರು. 33 ಇಂಚು ಉದ್ದ, 22 ಅಗಲದ ಚಿತ್ರವನ್ನು 4 ನಿಮಿಷ 32 ಸೆಕೆಂಡುಗಳಲ್ಲಿ ರಚಿಸಿದ್ದರು. ಈ ಚಿತ್ರ ಈಗ ಇಂಡಿಯಾ ಬುಕ್ ಆಪ್ ರೆಕಾರ್ಡ್ ಸೇರಿಕೊಂಡಿದೆ.
ಪೌರೋಹಿತ್ಯದ ಜತೆಯಲ್ಲಿ ಚಿತ್ರಕಲಾವಿದ :
ಬಾಲ್ಯದಲ್ಲೆ ಕಲೆಯಲ್ಲಿ ಆಸಕ್ತಿ ಹೊಂದಿದ್ದ ಕುಟುಂಬದ ಹಿನ್ನಲೆ ಇವರದು. ತಂದೆ ವಿಠuಲ ಆಚಾರ್ಯ, ತಾಯಿ ಲಕ್ಷ್ಮಿ ಆಚಾರ್ಯ ಇಬ್ಬರು ರಂಗಭೂಮಿ ಕಲಾವಿದರು. ನಿರ್ದೇಶನವನ್ನು ಮಾಡುತ್ತಿದ್ದರು. ಬಾಲ್ಯದಿಂದಲೇ ಚಿತ್ರಕಲೆ
ಆಸಕ್ತಿ ಹೊಂದಿದ್ದ ಸೂರ್ಯ ಭಟ್ ಪೌರೋಹಿತ್ಯದ ಜತೆಯಲ್ಲಿ ಚಿತ್ರಕಲಾವಿದರಾಗಿಯೂ ಗಮನ ಸೆಳೆಯುತ್ತ ಬಂದಿದ್ದಾರೆ. ದೇವಸ್ಥಾನಗಳ ಗೋಡೆಗಳಲ್ಲಿ 600ಕ್ಕೂ ಅಧಿಕ ಜಲವರ್ಣದ ಚಿತ್ರಗಳನ್ನು ಬಿಡಿಸಿದ್ದಾರೆ. ಪೌರೋಹಿತ್ಯದ ಜತೆಗೆ ಪೂಜೆಗೆ ಮಂಡಲವನ್ನು ರಂಗೋಲಿ ಹುಡಿಯಲ್ಲಿ ಬಿಡಿಸುತ್ತಿದ್ದರು. ಅನ್ಯನ್ಯ ಪೂಜೆಗಳನ್ನು ಭಿನ್ನವಾದ ಚಿತ್ರ ಬಿಡಿಸುತ್ತಲೆ ಅದರ ಜತೆಗೆ ಚಿತ್ರಕಲೆಯನ್ನು ಹವ್ಯಾಸವಾಗಿರಿಸಿಕೊಂಡಿದ್ದರು ಅದು ಇಷ್ಟು ದೊಡ್ಡ ಸಾಧನೆಗೆ ಕಾರಣವಾಗಿದೆ.