Advertisement

Mayor Election: ಚಂಡೀಗಢದಲ್ಲಿ ಬಿಜೆಪಿ ಮತ್ತು ‘ಇಂಡಿಯಾ’ ಮೈತ್ರಿಕೂಟದ ನಡುವೆ ನೇರ ಸ್ಪರ್ಧೆ

10:32 AM Jan 30, 2024 | |

ಚಂಡೀಗಢ : ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್ ಆದೇಶದ ಬಳಿಕ ಇಂದು ಚಂಡೀಗಢದಲ್ಲಿ ಮೇಯರ್ ಚುನಾವಣೆ ನಡೆಯಲಿದೆ. ಈ ಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್-ಆಮ್ ಆದ್ಮಿ ಪಕ್ಷ (ಎಎಪಿ) ಮೈತ್ರಿಕೂಟ ಹಾಗೂ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಡಲಿದೆ ಎನ್ನಲಾಗಿದೆ.

Advertisement

ಸಾರ್ವತ್ರಿಕ ಚುನಾವಣೆಗೂ ಮುನ್ನ ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮತ್ತು ‘ಇಂಡಿಯಾ’ ಮೈತ್ರಿಕೂಟದ ನಡುವಿನ ಮೊದಲ ಘರ್ಷಣೆ ಇದಾಗಿದೆ. ಹೀಗಿರುವಾಗ ಈ ಬಾರಿಯ ಚುನಾವಣಾ ಫಲಿತಾಂಶದ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಚಂಡೀಗಢ ಮೇಯರ್ ಚುನಾವಣೆಗೆ ಮತದಾನ ಬೆಳಗ್ಗೆ 10 ಗಂಟೆಗೆ ಆರಂಭವಾಗಲಿದೆ. ಈ ಬಾರಿಯ ಚುನಾವಣೆಯಲ್ಲಿ ಮೇಯರ್ ಸ್ಥಾನ ಪರಿಶಿಷ್ಟ ಜಾತಿಗೆ ಮೀಸಲಾಗಿದೆ.

ಬಿಗಿ ಪೊಲೀಸ್ ಬಂದೋಬಸ್ತ್:
ಚುನಾವಣೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದ್ದು, ಸುಮಾರು 800 ಪೊಲೀಸರು ಹಾಗೂ ಅರೆಸೇನಾ ಪಡೆ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಅಲ್ಲದೆ, ಚಂಡೀಗಢ ಮುನ್ಸಿಪಲ್ ಕಾರ್ಪೊರೇಷನ್ ಬಳಿ ಬ್ಯಾರಿಕೇಡ್‌ಗಳನ್ನು ಸಹ ಅಳವಡಿಸಲಾಗಿದೆ.

35 ಸದಸ್ಯ ಬಲದ ಮುನ್ಸಿಪಲ್ ಕಾರ್ಪೊರೇಷನ್ ಹೌಸ್‌ನಲ್ಲಿ ಎಎಪಿ ಮತ್ತು ಕಾಂಗ್ರೆಸ್ ಮೈತ್ರಿಕೂಟ 20 ಮತಗಳನ್ನು ಹೊಂದಿದ್ದರೆ, ಬಿಜೆಪಿ 14 ಕೌನ್ಸಿಲರ್‌ಗಳು ಮತ್ತು ಸಂಸದ ಕಿರಣ್ ಖೇರ್ ಅವರ ಹೆಚ್ಚುವರಿ ಮತ ಸೇರಿದಂತೆ 15 ಮತಗಳನ್ನು ಹೊಂದಿದೆ. ವಿಜಯದ ಮ್ಯಾಜಿಕ್ ಸಂಖ್ಯೆ 19 ಆಗಿದ್ದು. ಮೇಯರ್ ಹುದ್ದೆಗೆ ಗುಪ್ತ ಮತದಾನ ನಡೆಯುತ್ತಿದೆ.

2022 ಮತ್ತು 2023ರಲ್ಲಿ ಮತ ಚಲಾಯಿಸುವ ಮೂಲಕ ಕಾಂಗ್ರೆಸ್ ಎರಡನೇ ಸ್ಥಾನ ಪಡೆದುಕೊಂಡು ಬಿಜೆಪಿ ಗೆಲುವು ಸಾಧಿಸಿತು. ಈ ಬಾರಿ ಬಿಜೆಪಿಯ ಎಂಟು ವರ್ಷಗಳ ಆಡಳಿತವನ್ನು ಕೊನೆಗೊಳಿಸಲು ಕಾಂಗ್ರೆಸ್ ಮತ್ತು ಎಎಪಿ ಒಟ್ಟಾಗಿ ಪ್ರಯತ್ನ ನಡೆಸುತ್ತಿದೆ ಚುನಾವಣಾ ಫಲಿತಾಂಶದಲ್ಲಿ ಯಾರ ಕೈ ಮೇಲಾಗಲಿದೆ ಎಂಬುದು ಕಾದು ನೋಡಬೇಕು.

Advertisement

ಇದನ್ನೂ ಓದಿ: Indian Navy: ಕಡಲ್ಗಳ್ಳರಿಂದ 19 ಪಾಕಿಸ್ತಾನಿ ನಾವಿಕರನ್ನು ರಕ್ಷಿಸಿದ ಭಾರತೀಯ ನೌಕಾಪಡೆ

Advertisement

Udayavani is now on Telegram. Click here to join our channel and stay updated with the latest news.

Next