ದುಬೈ : ಇಲ್ಲಿ ಶುಕ್ರವಾರ ನಡೆದ ಅಂಡರ್-19 ಏಷ್ಯಾಕಪ್ ಫೈನಲ್ ಹಣಾಹಣಿ ಮಳೆ-ಹೊಡೆತಕ್ಕೆ ಸಿಲುಕಿದರೂ ಭಾರತ ತಂಡವು ಡಿಎಲ್‌ಎಸ್ ನಿಯಮದ ಮೂಲಕ ಶ್ರೀಲಂಕಾವನ್ನು 9 ವಿಕೆಟ್‌ಗಳಿಂದ ಸೋಲಿಸಿ ಏಳನೇ ಬಾರಿ ಪ್ರಶಸ್ತಿಯನ್ನು ಗೆದ್ದುಕೊಂಡಿದೆ.
ಬ್ಯಾಟಿಂಗ್ ಆಯ್ದುಕೊಂಡ ಶ್ರೀಲಂಕಾ 38 ಓವರ್‌ಗಳಲ್ಲಿ 9 ವಿಕೆಟ್‌ಗೆ 106 ರನ್ ಗಳಿಸಲಷ್ಟೇ ಶಕ್ತವಾಯಿತು. DLS ವಿಧಾನದ ಅಡಿಯಲ್ಲಿ 38 ಓವರ್‌ಗಳಲ್ಲಿ 102 ರನ್‌ಗಳಿಗೆ ಇಳಿಸಲ್ಪಟ್ಟ ಗುರಿಯನ್ನು ಬೆನ್ನಟ್ಟಲು ಭಾರತಕ್ಕೆ ಕೇವಲ 21.3 ಓವರ್‌ಗಳು ಸಾಕಾದವು.
ಆರಂಭಿಕ ಆಂಗ್ಕ್ರಿಶ್ ರಘುವಂಶಿ (ಔಟಾಗದೆ 56) ಅದ್ಭುತ ಅರ್ಧಶತಕ ಗಳಿಸಿದರು, ಶೇಕ್ ರಶೀದ್ ಸಹ 31 ರನ್ ಗಳಿಸಿ ಅಜೇಯರಾಗಿ ಉಳಿದರು. ಭಾರತದ ಪರ ಎಡಗೈ ಸ್ಪಿನ್ನರ್ ವಿಕಿ ಓಸ್ಟ್ವಾಲ್ 11 ಕ್ಕೆ 3 ವಿಕೆಟ್ ಪಡೆದು ಮಿಂಚಿದರು. ಆಫ್ ಸ್ಪಿನ್ನರ್ ಕೌಶಲ್ ತಾಂಬೆ ಎರಡು ವಿಕೆಟ್ ಪಡೆದರು.
ಎಂಟು ಬಾರಿ ಚಾಂಪಿಯನ್
ಒಂಬತ್ತು ಬಾರಿಯ ಪಂದ್ಯಾವಳಿಯಲ್ಲಿ ಭಾರತ ಒಟ್ಟು ಎಂಟು ಬಾರಿ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ೨೦೧೨ ರಲ್ಲಿ ಮಲೇಷ್ಯಾದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಪಾಕ್ ವಿರುದ್ಧ ಪಂದ್ಯ ಟೈ ಆದ ಹಿನ್ನಲೆಯಲ್ಲಿ ಜಂಟಿಯಾಗಿ ಬದ್ಧವೈರಿ ರಾಷ್ಟ್ರಗಳು ಪ್ರಶಸ್ತಿಯನ್ನು ಪಡೆದಿದ್ದವು.
ಸಂಕ್ಷಿಪ್ತ ಸ್ಕೋರ್
ಶ್ರೀಲಂಕಾ U19: 38 ಓವರ್‌ಗಳಲ್ಲಿ 9 ವಿಕೆಟ್‌ಗೆ 106 (ರವೀನ್ ಡಿ ಸಿಲ್ವಾ 15; ವಿಕ್ಕಿ ಓಸ್ಟ್ವಾಲ್ 3/11)
ಭಾರತ U19: 21.3 ಓವರ್‌ಗಳಲ್ಲಿ 1 ವಿಕೆಟ್‌ಗೆ 104 (ಆಂಗ್‌ಕ್ರಿಶ್ ರಘುವಂಶಿ ಔಟಾಗದೆ 56, ಶೇಕ್ ರಶೀದ್ ಔಟಾಗದೆ 31 ರೊಡ್ರಿ; 1/12).