ಲಂಡನ್: ಹಾಲಿ ಚಾಂಪಿಯನ್ ಆಸ್ಟ್ರೇಲಿಯ ವಿರುದ್ಧ ಚಾಂಪಿಯನ್ನರ ಶೈಲಿಯಲ್ಲೇ ಬ್ಯಾಟ್ ಬೀಸಿದ ಭಾರತ ರವಿವಾರದ ಓವಲ್ ಮುಖಾಮುಖೀಯಲ್ಲಿ 36 ರನ್ ಜಯ ದಾಖಲಿಸಿದೆ.
ಎಡಗೈ ಆರಂಭಕಾರ ಶಿಖರ್ ಧವನ್ ಅವರ ಅಮೋಘ ಶತಕ, ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಅವರ ಅರ್ಧ ಶತಕ; ಹಾರ್ದಿಕ್ ಪಾಂಡ್ಯ, ಧೋನಿ ಮತ್ತು ರಾಹುಲ್ ಅವರ ಮಿಂಚಿನ ಆಟ ಭಾರತದ ಸರದಿಯ ಆಕರ್ಷಣೆ ಎನಿಸಿತು. ಆಸೀಸ್ ಪರ ವಾರ್ನರ್, ಸ್ಮಿತ್, ಕ್ಯಾರಿ ಭರವಸೆಯ ಆಟವಾಡಿದರು.
ಧವನ್ 17ನೇ ಶತಕ
ಓವಲ್ ಅಂಗಳದಲ್ಲಿ ಸದಾ ಬ್ಯಾಟಿಂಗ್ ವೈಭವ ಪ್ರದರ್ಶಿಸುವ ಶಿಖರ್ ಧವನ್ ವಿಶ್ವಕಪ್‌ನಲ್ಲೂ ಇದನ್ನು ಪುನರಾವರ್ತಿಸಿದರು. ಆಸೀಸ್ ಬೌಲರ್‌ಗಳನ್ನು ದಂಡಿಸುತ್ತ ಸಾಗಿ 109 ಎಸೆತಗಳಿಂದ 117 ರನ್ ಬಾರಿಸಿ ರಂಜಿಸಿದರು. ಇದರಲ್ಲಿ 16 ಬೌಂಡರಿ ಒಳಗೊಂಡಿತ್ತು. 130ನೇ ಪಂದ್ಯದಲ್ಲಿ ಧವನ್ ಬಾರಿಸಿದ 17ನೇ ಶತಕ ಇದಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಸೆಂಚುರಿ ಹೊಡೆದಿದ್ದ ರೋಹಿತ್ ಶರ್ಮ ಅದೇ ಲಯದಲ್ಲಿ ಸಾಗಿ 57 ರನ್ನುಗಳ ಕೊಡುಗೆ ಸಲ್ಲಿಸಿದರು (70 ಎಸೆತ, 3 ಬೌಂಡರಿ, 1 ಸಿಕ್ಸರ್). ಆದರೆ ರೋಹಿತ್-ಧವನ್ ಜೋಡಿಯ ಆರಂಭ ನಿಧಾನ ಗತಿಯಿಂದ ಕೂಡಿತ್ತು. ಮೊದಲ 7 ಓವರ್‌ಗಳಲ್ಲಿ ದಾಖಲಾದದ್ದು 22 ರನ್ ಮಾತ್ರ. ಅನಂತರ ರನ್ ಗತಿ ಏರುತ್ತ ಹೋಯಿತು. ಕೊನೆಯ 10 ಓವರ್‌ಗಳಲ್ಲಂತೂ 116 ರನ್ ಹರಿದು ಬಂತು.
ಕೊಹ್ಲಿಗೆ ತಪ್ಪಿದ ಶತಕ
ಧವನ್-ಕೊಹ್ಲಿ ಜೋಡಿಯಿಂದ 2ನೇ ವಿಕೆಟಿಗೆ 93 ರನ್ ಒಟ್ಟುಗೂಡಿತು. ನಾಯಕನ ಆಟವಾಡಿದ ಕೊಹ್ಲಿ 77 ಎಸೆತ ಎದುರಿಸಿ 82 ರನ್ ಬಾರಿಸಿದರು. ಸಿಡಿಸಿದ್ದು 4 ಬೌಂಡರಿ ಹಾಗೂ 2 ಸಿಕ್ಸರ್. ಕೊಹ್ಲಿಯ ಮೇಲೂ ಶತಕದ ನಿರೀಕ್ಷೆ ಇತ್ತಾದರೂ ಕೊನೆಯಲ್ಲಿ ಧೋನಿ ಬಿರುಸಿನ ಆಟಕ್ಕಿಳಿದರು; ಹೀಗಾಗಿ ಕೊಹ್ಲಿಗೆ ಹೆಚ್ಚಿನ ಸ್ಟ್ರೈಕ್ ಸಿಗಲಿಲ್ಲ.
ಓವಲ್ ಅಂಗಳ ಬ್ಯಾಟಿಂಗಿಗೆ ಸಹಕರಿಸುತ್ತಿದ್ದುದನ್ನು ಗಮನಿಸಿದ ಕೊಹ್ಲಿ, ಹಾರ್ಡ್ ಹಿಟ್ಟರ್ ಹಾರ್ದಿಕ್ ಪಾಂಡ್ಯ ಅವರನ್ನು 4ನೇ ಕ್ರಮಾಂಕದಲ್ಲಿ ಆಡಲಿಳಿಸಿದರು. ಪಾಂಡ್ಯ ನಿರಾಸೆಗೊಳಿಸಲಿಲ್ಲ. 27 ಎಸೆತಗಳಿಂದ 4 ಬೌಂಡರಿ, 3 ಸಿಕ್ಸರ್ ನೆರವಿನಿಂದ 48 ರನ್ ಸಿಡಿಸಿದರು. ಕೊಹ್ಲಿ-ಪಾಂಡ್ಯ ಜೋಡಿಯಿಂದ 3ನೇ ವಿಕೆಟಿಗೆ 81 ರನ್ ಒಟ್ಟುಗೂಡಿತು. ಧೋನಿ ಆಟವೂ ಆಕ್ರಮಣಕಾರಿಯಾಗಿತ್ತು. ಅವರ 27 ರನ್ ಕೇವಲ 14 ಎಸೆತಗಳಿಂದ ಬಂತು (3 ಬೌಂಡರಿ, 1 ಸಿಕ್ಸರ್). ಕೆ.ಎಲ್. ರಾಹುಲ್ ಬರೀ 3 ಎಸೆತಗಳಿಂದ ಅಜೇಯ 11 ರನ್ ದೋಚಿದರು (1 ಬೌಂಡರಿ, 1 ಸಿಕ್ಸರ್).
Advertisement
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ನಡೆಸಿದ ಭಾರತ 5 ವಿಕೆಟಿಗೆ 352 ರನ್ ಪೇರಿಸಿ ಸವಾಲೊಡ್ಡಿತು. ಇದು ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ತಂಡವೊಂದು ದಾಖಲಿಸಿದ ಸರ್ವಾಧಿಕ ಮೊತ್ತ. ಜವಾಬಿತ್ತ ಆಸ್ಟ್ರೇಲಿಯ ದಿಟ್ಟ ಹೋರಾಟ ನಡೆಸಿದರೂ 50 ಓವರ್‌ಗಳಲ್ಲಿ 316ಕ್ಕೆ ಆಲೌಟ್ ಆಯಿತು.
ಓವಲ್ ಅಂಗಳದಲ್ಲಿ ಸದಾ ಬ್ಯಾಟಿಂಗ್ ವೈಭವ ಪ್ರದರ್ಶಿಸುವ ಶಿಖರ್ ಧವನ್ ವಿಶ್ವಕಪ್‌ನಲ್ಲೂ ಇದನ್ನು ಪುನರಾವರ್ತಿಸಿದರು. ಆಸೀಸ್ ಬೌಲರ್‌ಗಳನ್ನು ದಂಡಿಸುತ್ತ ಸಾಗಿ 109 ಎಸೆತಗಳಿಂದ 117 ರನ್ ಬಾರಿಸಿ ರಂಜಿಸಿದರು. ಇದರಲ್ಲಿ 16 ಬೌಂಡರಿ ಒಳಗೊಂಡಿತ್ತು. 130ನೇ ಪಂದ್ಯದಲ್ಲಿ ಧವನ್ ಬಾರಿಸಿದ 17ನೇ ಶತಕ ಇದಾಗಿದೆ. ದಕ್ಷಿಣ ಆಫ್ರಿಕಾ ವಿರುದ್ಧ ಸೆಂಚುರಿ ಹೊಡೆದಿದ್ದ ರೋಹಿತ್ ಶರ್ಮ ಅದೇ ಲಯದಲ್ಲಿ ಸಾಗಿ 57 ರನ್ನುಗಳ ಕೊಡುಗೆ ಸಲ್ಲಿಸಿದರು (70 ಎಸೆತ, 3 ಬೌಂಡರಿ, 1 ಸಿಕ್ಸರ್). ಆದರೆ ರೋಹಿತ್-ಧವನ್ ಜೋಡಿಯ ಆರಂಭ ನಿಧಾನ ಗತಿಯಿಂದ ಕೂಡಿತ್ತು. ಮೊದಲ 7 ಓವರ್‌ಗಳಲ್ಲಿ ದಾಖಲಾದದ್ದು 22 ರನ್ ಮಾತ್ರ. ಅನಂತರ ರನ್ ಗತಿ ಏರುತ್ತ ಹೋಯಿತು. ಕೊನೆಯ 10 ಓವರ್‌ಗಳಲ್ಲಂತೂ 116 ರನ್ ಹರಿದು ಬಂತು.
Related Articles
ಧವನ್-ಕೊಹ್ಲಿ ಜೋಡಿಯಿಂದ 2ನೇ ವಿಕೆಟಿಗೆ 93 ರನ್ ಒಟ್ಟುಗೂಡಿತು. ನಾಯಕನ ಆಟವಾಡಿದ ಕೊಹ್ಲಿ 77 ಎಸೆತ ಎದುರಿಸಿ 82 ರನ್ ಬಾರಿಸಿದರು. ಸಿಡಿಸಿದ್ದು 4 ಬೌಂಡರಿ ಹಾಗೂ 2 ಸಿಕ್ಸರ್. ಕೊಹ್ಲಿಯ ಮೇಲೂ ಶತಕದ ನಿರೀಕ್ಷೆ ಇತ್ತಾದರೂ ಕೊನೆಯಲ್ಲಿ ಧೋನಿ ಬಿರುಸಿನ ಆಟಕ್ಕಿಳಿದರು; ಹೀಗಾಗಿ ಕೊಹ್ಲಿಗೆ ಹೆಚ್ಚಿನ ಸ್ಟ್ರೈಕ್ ಸಿಗಲಿಲ್ಲ.
Advertisement
ಹಾರ್ದಿಕ್ ಪಾಂಡ್ಯ ಪವರ್ಓವಲ್ ಅಂಗಳ ಬ್ಯಾಟಿಂಗಿಗೆ ಸಹಕರಿಸುತ್ತಿದ್ದುದನ್ನು ಗಮನಿಸಿದ ಕೊಹ್ಲಿ, ಹಾರ್ಡ್ ಹಿಟ್ಟರ್ ಹಾರ್ದಿಕ್ ಪಾಂಡ್ಯ ಅವರನ್ನು 4ನೇ ಕ್ರಮಾಂಕದಲ್ಲಿ ಆಡಲಿಳಿಸಿದರು. ಪಾಂಡ್ಯ ನಿರಾಸೆಗೊಳಿಸಲಿಲ್ಲ. 27 ಎಸೆತಗಳಿಂದ 4 ಬೌಂಡರಿ, 3 ಸಿಕ್ಸರ್ ನೆರವಿನಿಂದ 48 ರನ್ ಸಿಡಿಸಿದರು. ಕೊಹ್ಲಿ-ಪಾಂಡ್ಯ ಜೋಡಿಯಿಂದ 3ನೇ ವಿಕೆಟಿಗೆ 81 ರನ್ ಒಟ್ಟುಗೂಡಿತು. ಧೋನಿ ಆಟವೂ ಆಕ್ರಮಣಕಾರಿಯಾಗಿತ್ತು. ಅವರ 27 ರನ್ ಕೇವಲ 14 ಎಸೆತಗಳಿಂದ ಬಂತು (3 ಬೌಂಡರಿ, 1 ಸಿಕ್ಸರ್). ಕೆ.ಎಲ್. ರಾಹುಲ್ ಬರೀ 3 ಎಸೆತಗಳಿಂದ ಅಜೇಯ 11 ರನ್ ದೋಚಿದರು (1 ಬೌಂಡರಿ, 1 ಸಿಕ್ಸರ್).
16ನೇ ಶತಕದ ಜತೆಯಾಟ
ರೋಹಿತ್ ಶರ್ಮ-ಶಿಖರ್ ಧವನ್ ಮೊದಲ ವಿಕೆಟಿಗೆ 16ನೇ ಶತಕದ ಜತೆಯಾಟ ದಾಖಲಿಸಿ ಜಂಟಿ 2ನೇ ಸ್ಥಾನ ಅಲಂಕರಿಸಿದರು. ಆ್ಯಡಂ ಗಿಲ್ಕ್ರಿಸ್ಟ್-ಮ್ಯಾಥ್ಯೂ ಹೇಡನ್ ಕೂಡ 16 ಶತಕದ ಜತೆಯಾಟ ದಾಖಲಿಸಿದ್ದಾರೆ. ಸಚಿನ್ ತೆಂಡುಲ್ಕರ್-ಸೌರವ್ ಗಂಗೂಲಿ 26 ಶತಕಗಳ ಜತೆಯಾಟ ನಡೆಸಿದ್ದು ದಾಖಲೆ
ಓವಲ್‌ನಲ್ಲಿ ಧವನ್ ಅಬ್ಬರ
‘ಕೆನ್ನಿಂಗ್ಟನ್ ಓವಲ್’ ತನ್ನ ನೆಚ್ಚಿನ ತಾಣ ಎಂಬುದನ್ನು ಶಿಖರ್ ಧವನ್ ಮತ್ತೂಮ್ಮೆ ಸಾಬೀತುಪಡಿಸಿದರು. ಇದು ಓವಲ್ನಲ್ಲಿ ಧವನ್ ಬಾರಿಸಿದ 3ನೇ ಶತಕ. ಅವರ ಓವಲ್ ಸಾಧನೆ ಹೀಗಿದೆ: ಅಜೇಯ 102, 125, 78, 21 ಮತ್ತು 117. ಇದೇ ವೇಳೆ ಧವನ್ ಇಂಗ್ಲೆಂಡ್‌ನಲ್ಲಿ ಆಡಲಾದ ಏಕದಿನ ಪಂದ್ಯಗಳಲ್ಲಿ ಸಾವಿರ ರನ್ ಪೂರೈಸಿದರು.
ರೋಹಿತ್ 2 ಸಾವಿರ ರನ್
ರೋಹಿತ್ ಶರ್ಮ ಆಸ್ಟ್ರೇಲಿಯ ವಿರುದ್ಧ 2 ಸಾವಿರ ರನ್ ಪೂರ್ತಿಗೊಳಿಸಿದ 4ನೇ ಬ್ಯಾಟ್ಸ್‌ಮನ್ ಎನಿಸಿದರು. ಅವರು ಅತೀ ಕಡಿಮೆ 37 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದರು. ಉಳಿದ ಸಾಧಕರೆಂದರೆ ಡೆಸ್ಮಂಡ್ ಹೇನ್ಸ್, ವಿವಿಯನ್ ರಿಚರ್ಡ್ಸ್ ಮತ್ತು ಸಚಿನ್ ತೆಂಡುಲ್ಕರ್.
ಆಸೀಸ್ ವಿರುದ್ಧ ಅತ್ಯಧಿಕ ರನ್
ವಿಶ್ವಕಪ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಅತ್ಯಧಿಕ ರನ್ ಬಾರಿಸಿದ ದಾಖಲೆ ಭಾರತದ್ದಾಯಿತು. ಹಾಗೆಯೇ ಆಸೀಸ್ ವಿಶ್ವಕಪ್‌ನಲ್ಲಿ ಎದುರಾಳಿಗೆ 300 ಪ್ಲಸ್ ರನ್ ಬಿಟ್ಟುಕೊಟ್ಟ ಕೇವಲ 2ನೇ ನಿದರ್ಶನ ಇದಾಗಿದೆ. ಇದಕ್ಕೂ ಮುನ್ನ 2015ರ ಸಿಡ್ನಿ ಪಂದ್ಯದಲ್ಲಿ ಶ್ರೀಲಂಕಾ 312 ರನ್ ಬಾರಿಸಿತ್ತು.
ವಿಶ್ವಕಪ್‌ನಲ್ಲಿ ಅತ್ಯಧಿಕ ಶತಕ
ಧವನ್ ಸಾಧನೆಯೊಂದಿಗೆ ವಿಶ್ವಕಪ್‌ನಲ್ಲಿ ಅತ್ಯಧಿಕ 27 ಶತಕ ಬಾರಿಸಿದ ದಾಖಲೆ ಭಾರತದ್ದಾಯಿತು. ಆಸ್ಟ್ರೇಲಿಯ 26 ಶತಕದೊಂದಿಗೆ ದ್ವಿತೀಯ ಸ್ಥಾನದಲ್ಲಿದೆ. ಶ್ರೀಲಂಕಾ (23), ವೆಸ್ಟ್ ಇಂಡೀಸ್ (17), ನ್ಯೂಜಿಲ್ಯಾಂಡ್ (14); ದಕ್ಷಿಣ ಆಫ್ರಿಕಾ, ಪಾಕಿಸ್ಥಾನ, ಇಂಗ್ಲೆಂಡ್ (ತಲಾ 14) ಅನಂತರದ ಸ್ಥಾನದಲ್ಲಿವೆ.
ದೊಡ್ಡ ಮೊತ್ತದ ಯಶಸ್ವಿ ಟಾರ್ಗೆಟ್
ಇಂಗ್ಲೆಂಡ್‌ನಲ್ಲಿ ಈವರೆಗೆ ಕೇವಲ 2 ಸಲ 350 ಪ್ಲಸ್ ಮೊತ್ತವನ್ನು ಯಶಸ್ವಿಯಾಗಿ ಬೆನ್ನಟ್ಟಲಾಗಿದೆ. ಈ ಎರಡೂ ಗೆಲುವನ್ನು ಒಲಿಸಿಕೊಂಡ ತಂಡ ಇಂಗ್ಲೆಂಡ್. ಇದೇ ವರ್ಷ ಪಾಕಿಸ್ಥಾನ ವಿರುದ್ಧ ಬ್ರಿಸ್ಟಲ್ನಲ್ಲಿ 359 ರನ್, 2015ರಲ್ಲಿ ನ್ಯೂಜಿಲ್ಯಾಂಡ್ ವಿರುದ್ಧ ನಾಟಿಂಗ್‌ಹ್ಯಾಮ್‌ನಲ್ಲಿ 350 ರನ್ ಬಾರಿಸಿ ಗೆದ್ದು ಬಂದಿತ್ತು.
ಕೊಹ್ಲಿ ಕ್ರೀಡಾಸ್ಫೂರ್ತಿ
ಲಂಡನ್: ಭಾರತ-ಆಸ್ಟ್ರೇಲಿಯ ನಡುವಿನ ವಿಶ್ವಕಪ್ ಪಂದ್ಯದ ವೇಳೆ ನಾಯಕ ವಿರಾಟ್ ಕೊಹ್ಲಿ ತೋರ್ಪಡಿಸಿದ ಕ್ರೀಡಾಸ್ಫೂರ್ತಿಯೊಂದು ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.ಆಸ್ಟ್ರೇಲಿಯದ ಸ್ಟೀವನ್ ಸ್ಮಿತ್ ಬೌಂಡರಿ ಲೈನಿನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದಾಗ ಅಲ್ಲಿದ ಭಾರತೀಯ ಪ್ರೇಕ್ಷಕರು ‘ಚೀಟರ್… ಚೀಟರ್…’ ಎಂದು ಕೂಗಲಾರಂಭಿಸಿದರು. ಇದು ಸ್ಮಿತ್‌ಗೆ ಬಹಳ ಮುಜುಗರ ಉಂಟುಮಾಡಿತು. ಬ್ಯಾಟಿಂಗ್ ಮಾಡುತ್ತಿದ್ದ ಕೊಹ್ಲಿಗೆ ಸ್ಮಿತ್ ಅನುಭವಿಸುತ್ತಿದ್ದ ಕಿರಿಕಿರಿ ಗಮನಕ್ಕೆ ಬಂತು. ಕೂಡಲೇ ಅವರು ಪ್ರೇಕ್ಷಕರತ್ತ ತಿರುಗಿ ‘ಹಾಗೆ ಕೂಗಬಾರದು, ಬದಲಾಗಿ ಚಪ್ಪಾಳೆ ಹೊಡೆಯಿರಿ…’ ಎಂದು ಸನ್ನೆಯ ಮೂಲಕ ಹೇಳಿದರು. ಇದನ್ನು ಅರ್ಥ ಮಾಡಿಕೊಂಡ ಪ್ರೇಕ್ಷಕರು ಅನಂತರ ಸ್ಮಿತ್‌ಗೆ ಕಿರುಕುಳ ನೀಡಲಿಲ್ಲ!
ಸ್ಕೋರ್ ಪಟ್ಟಿ
ಭಾರತ
ರೋಹಿತ್ ಶರ್ಮ ಸಿ ಕ್ಯಾರಿ ಬಿ ನೈಲ್ 57
ಶಿಖರ್ ಧವನ್ ಸಿ ಲಿಯೋನ್ (ಬದಲಿ) ಬಿ ಸ್ಟಾರ್ಕ್ 117
ವಿರಾಟ್ ಕೊಹ್ಲಿ ಸಿ ಕಮಿನ್ಸ್ ಬಿ ಸ್ಟೋಯಿನಿಸ್ 82
ಹಾರ್ದಿಕ್ ಪಾಂಡ್ಯ ಸಿ ಫಿಂಚ್ ಬಿ ಕಮಿನ್ಸ್ 48
ಎಂ.ಎಸ್. ಧೋನಿ ಸಿ ಮತ್ತು ಬಿ ಸ್ಟೋಯಿನಿಸ್ 27
ಕೆ.ಎಲ್. ರಾಹುಲ್ ಔಟಾಗದೆ 11
ಕೇದಾರ್ ಜಾಧವ್ ಔಟಾಗದೆ 0
ಇತರ 10
ಒಟ್ಟು (50 ಓವರ್‌ಗಳಲ್ಲಿ 5 ವಿಕೆಟಿಗೆ) 352
ವಿಕೆಟ್ ಪತನ: 1-127, 2-220, 3-301, 4-338, 5-348.
ಬೌಲಿಂಗ್:
ಪ್ಯಾಟ್ ಕಮಿನ್ಸ್ 10-0-55-1
ಮಿಚೆಲ್ ಸ್ಟಾರ್ಕ್ 10-0-74-1
ನಥನ್ ಕೋಲ್ಟರ್ ನೈಲ್ 10-1-63-1
ಗ್ಲೆನ್ ಮ್ಯಾಕ್ಸ್‌ವೆಲ್ 7-0-45-0
ಆ್ಯಡಂ ಝಂಪ 6-0-50-0
ಮಾರ್ಕಸ್ ಸ್ಟೋಯಿನಿಸ್ 7-0-62-2
ಆಸ್ಟ್ರೇಲಿಯ
ಡೇವಿಡ್ ವಾರ್ನರ್ ಸಿ ಭುವನೇಶ್ವರ್ ಬಿ ಚಹಲ್ 56
ಆರನ್ ಫಿಂಚ್ ರನೌಟ್ 36
ಸ್ಟೀವನ್ ಸ್ಮಿತ್ ಎಲ್‌ಬಿಡಬ್ಲ್ಯು ಭುವನೇಶ್ವರ್ 69
ಉಸ್ಮಾನ್ ಖ್ವಾಜಾ ಬಿ ಬುಮ್ರಾ 42
ಗ್ಲೆನ್ ಮ್ಯಾಕ್ಸ್‌ವೆಲ್ ಸಿ ಜಡೇಜ (ಬದಲಿ) ಬಿ ಚಹಲ್ 28
ಸ್ಟೋಯಿನಿಸ್ ಬಿ ಭುವನೇಶ್ವರ್ 0
ಅಲೆಕ್ಸ್ ಕ್ಯಾರಿ ಔಟಾಗದೆ 55
ಕೋಲ್ಟರ್ ನೈಲ್ ಸಿ ಕೊಹ್ಲಿ ಬಿ ಬುಮ್ರಾ 4
ಪ್ಯಾಟ್ ಕಮಿನ್ಸ್ ಸಿ ಧೋನಿ ಬಿ ಬುಮ್ರಾ 8
ಮಿಚೆಲ್ ಸ್ಟಾರ್ಕ್ ರನೌಟ್ 3
ಆ್ಯಡಂ ಝಂಪ ಸಿ ಜಡೇಜ ಬಿ ಭುವನೇಶ್ವರ್ 1
ಇತರ 14
ಒಟ್ಟು (50 ಓವರ್‌ಗಳಲ್ಲಿ ಆಲೌಟ್) 316
ವಿಕೆಟ್ ಪತನ: 1-61, 2-133, 3-202, 4-238, 5-238, 6-244, 7-283, 8-300, 9-313.
ಬೌಲಿಂಗ್:
ಭುವನೇಶ್ವರ್ ಕುಮಾರ್ 10-0-50-3
ಜಸ್‌ಪ್ರೀತ್ ಬುಮ್ರಾ 10-1-61-3
ಹಾರ್ದಿಕ್ ಪಾಂಡ್ಯ 10-0-68-0
ಕುಲದೀಪ್ ಯಾದವ್ 9-0-55-0
ಯಜುವೇಂದ್ರ ಚಹಲ್ 10-0-62-2
ಕೇದಾರ್ ಜಾಧವ್ 1-0-14-0
ಪಂದ್ಯಶ್ರೇಷ್ಠ: ಶಿಖರ್ ಧವನ್
ಭಾರತ
ರೋಹಿತ್ ಶರ್ಮ ಸಿ ಕ್ಯಾರಿ ಬಿ ನೈಲ್ 57
ಶಿಖರ್ ಧವನ್ ಸಿ ಲಿಯೋನ್ (ಬದಲಿ) ಬಿ ಸ್ಟಾರ್ಕ್ 117
ವಿರಾಟ್ ಕೊಹ್ಲಿ ಸಿ ಕಮಿನ್ಸ್ ಬಿ ಸ್ಟೋಯಿನಿಸ್ 82
ಹಾರ್ದಿಕ್ ಪಾಂಡ್ಯ ಸಿ ಫಿಂಚ್ ಬಿ ಕಮಿನ್ಸ್ 48
ಎಂ.ಎಸ್. ಧೋನಿ ಸಿ ಮತ್ತು ಬಿ ಸ್ಟೋಯಿನಿಸ್ 27
ಕೆ.ಎಲ್. ರಾಹುಲ್ ಔಟಾಗದೆ 11
ಕೇದಾರ್ ಜಾಧವ್ ಔಟಾಗದೆ 0
ಇತರ 10
ಒಟ್ಟು (50 ಓವರ್‌ಗಳಲ್ಲಿ 5 ವಿಕೆಟಿಗೆ) 352
ವಿಕೆಟ್ ಪತನ: 1-127, 2-220, 3-301, 4-338, 5-348.
ಬೌಲಿಂಗ್:
ಪ್ಯಾಟ್ ಕಮಿನ್ಸ್ 10-0-55-1
ಮಿಚೆಲ್ ಸ್ಟಾರ್ಕ್ 10-0-74-1
ನಥನ್ ಕೋಲ್ಟರ್ ನೈಲ್ 10-1-63-1
ಗ್ಲೆನ್ ಮ್ಯಾಕ್ಸ್‌ವೆಲ್ 7-0-45-0
ಆ್ಯಡಂ ಝಂಪ 6-0-50-0
ಮಾರ್ಕಸ್ ಸ್ಟೋಯಿನಿಸ್ 7-0-62-2
ಆಸ್ಟ್ರೇಲಿಯ
ಡೇವಿಡ್ ವಾರ್ನರ್ ಸಿ ಭುವನೇಶ್ವರ್ ಬಿ ಚಹಲ್ 56
ಆರನ್ ಫಿಂಚ್ ರನೌಟ್ 36
ಸ್ಟೀವನ್ ಸ್ಮಿತ್ ಎಲ್‌ಬಿಡಬ್ಲ್ಯು ಭುವನೇಶ್ವರ್ 69
ಉಸ್ಮಾನ್ ಖ್ವಾಜಾ ಬಿ ಬುಮ್ರಾ 42
ಗ್ಲೆನ್ ಮ್ಯಾಕ್ಸ್‌ವೆಲ್ ಸಿ ಜಡೇಜ (ಬದಲಿ) ಬಿ ಚಹಲ್ 28
ಸ್ಟೋಯಿನಿಸ್ ಬಿ ಭುವನೇಶ್ವರ್ 0
ಅಲೆಕ್ಸ್ ಕ್ಯಾರಿ ಔಟಾಗದೆ 55
ಕೋಲ್ಟರ್ ನೈಲ್ ಸಿ ಕೊಹ್ಲಿ ಬಿ ಬುಮ್ರಾ 4
ಪ್ಯಾಟ್ ಕಮಿನ್ಸ್ ಸಿ ಧೋನಿ ಬಿ ಬುಮ್ರಾ 8
ಮಿಚೆಲ್ ಸ್ಟಾರ್ಕ್ ರನೌಟ್ 3
ಆ್ಯಡಂ ಝಂಪ ಸಿ ಜಡೇಜ ಬಿ ಭುವನೇಶ್ವರ್ 1
ಇತರ 14
ಒಟ್ಟು (50 ಓವರ್‌ಗಳಲ್ಲಿ ಆಲೌಟ್) 316
ವಿಕೆಟ್ ಪತನ: 1-61, 2-133, 3-202, 4-238, 5-238, 6-244, 7-283, 8-300, 9-313.
ಬೌಲಿಂಗ್:
ಭುವನೇಶ್ವರ್ ಕುಮಾರ್ 10-0-50-3
ಜಸ್‌ಪ್ರೀತ್ ಬುಮ್ರಾ 10-1-61-3
ಹಾರ್ದಿಕ್ ಪಾಂಡ್ಯ 10-0-68-0
ಕುಲದೀಪ್ ಯಾದವ್ 9-0-55-0
ಯಜುವೇಂದ್ರ ಚಹಲ್ 10-0-62-2
ಕೇದಾರ್ ಜಾಧವ್ 1-0-14-0
ಪಂದ್ಯಶ್ರೇಷ್ಠ: ಶಿಖರ್ ಧವನ್