Advertisement

India ಸೇನಾ ಡ್ರೋನ್‌ಗಳಲ್ಲಿ ಚೀನ ಬಿಡಿಭಾಗಗಳ ಬಳಕೆಗೆ ನಿಷೇಧ

01:05 AM Aug 09, 2023 | Team Udayavani |

ಹೊಸದಿಲ್ಲಿ:ದೇಶದ ಸೇನೆಗೆಂದು ತಯಾರಿ ಸುವ ಡ್ರೋನ್‌ಗಳಲ್ಲಿ ಇನ್ನು ಚೀನದ ಬಿಡಿಭಾಗಗಳನ್ನು ಬಳಕೆ ಮಾಡುವಂತಿಲ್ಲ!

Advertisement

ಭದ್ರತಾ ಕಾರಣಗಳಿಗಾಗಿ ದೇಶೀಯ ಸೇನಾ ಡ್ರೋನ್‌ ಉತ್ಪಾದಕರಿಗೆ ಕೇಂದ್ರ ಸರಕಾರ ಇಂಥದ್ದೊಂದು ಸೂಚನೆ ನೀಡಿದೆ. ಚೀನ ಆಗಾಗ್ಗೆ ಗಡಿಯಲ್ಲಿ ಕ್ಯಾತೆ ತೆಗೆಯುತ್ತಿರುವ ನಡುವೆಯೇ ಈ ಆದೇಶ ಹೊರಬಿದ್ದಿದೆ.

ರಕ್ಷಣ ಪಡೆಗಳು ಬಳಕೆ ಮಾಡುವಂಥ ಡ್ರೋನ್‌ಗಳಲ್ಲಿ ಕೆಮರಾ, ರೇಡಿಯೋ ಪ್ರಸರಣ, ಆಪರೇಟಿಂಗ್‌ ಸಾಫ್ಟ್ವೇರ್‌ ಮುಂತಾದ ಚೀನದ ಬಿಡಿಭಾಗಗಳನ್ನು ಅಳವಡಿಸುವುದರಿಂದ ಸೇನೆಗೆ ಸಂಬಂಧಿ ಸಿದ ಸೂಕ್ಷ್ಮ ವಿಚಾರಗಳೊಂದಿಗೆ ರಾಜಿ ಮಾಡಿಕೊಂಡಂತಾಗುತ್ತದೆ. ಅವುಗಳಿಂದ ಭದ್ರತಾ ಲೋಪ ಉಂಟಾಗುವ ಸಾಧ್ಯತೆ ಯಿರುತ್ತದೆ. ಪ್ರಮುಖ ಸೇನಾ ನೆಲೆಗಳು, ಯೋಧರ ನಿಯೋಜನೆ ಸೇರಿದಂತೆ ಪ್ರಮುಖ ವ್ಯೂಹಾತ್ಮಕ ಅಂಶಗಳ ಭದ್ರತೆಯ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿರುತ್ತದೆ. ಈ ಎಲ್ಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು, ಸೇನಾ ಡ್ರೋ ನ್‌ಗಳಲ್ಲಿ ಚೀನದ ಬಿಡಿಭಾಗಗಳ ಬಳಕೆಗೆ ನಿಷೇಧ ಹೇರಲಾಗಿದೆ ಎಂದು ಮೂಲ ಗಳು ತಿಳಿಸಿವೆ.

ಅಮೆರಿಕದಲ್ಲೂ 2019ರಿಂದ ಚೀನದಲ್ಲಿ ತಯಾರಾದ ಡ್ರೋನ್‌ಗಳು ಮತ್ತು ಬಿಡಿಭಾಗಗಳ ಖರೀದಿ ಮತ್ತು ಬಳಕೆಯನ್ನು ನಿರ್ಬಂಧಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next