Advertisement

‘ಬಾಂಧವ್ಯ’ದ ಮಾತ್ರೆ ಮಾರಾಟ

08:05 AM Aug 24, 2018 | Karthik A |

ಹೊಸದಿಲ್ಲಿ: ಸೆ.1ರಿಂದ ದೇಶದ ಎಲ್ಲಾ ಖಾಸಗಿ ಮೆಡಿಕಲ್‌ಗ‌ಳಲ್ಲೂ ‘ಜೀವ ಉಳಿಸುವ ಹಾರ್ಮೋನ್‌ ಮತ್ತು ಲವ್‌ ಹಾರ್ಮೋನ್‌’ ಎಂದೇ ಪರಿಗಣಿತವಾಗಿರುವ ಆಕ್ಸಿಟೋಸಿನ್‌ ಅನ್ನು ಮಾರಾಟ ಮಾಡಲು ಕೇಂದ್ರ ಆರೋಗ್ಯ ಸಚಿವಾಲಯ ಒಪ್ಪಿಗೆ ನೀಡಿದೆ. ಜು.1 ರಿಂದ ಜಾರಿಯಾಗುವಂತೆ ಈ ಔಷಧ ಮಾರಾಟ ನಿಷೇಧಿಸಿದ್ದ ಕೇಂದ್ರ ಸರಕಾರ, ಇದೀಗ  ಆದೇಶ ಮಾರ್ಪಾಡು ಮಾಡಿದೆ. ಆದರೆ, ಈ ಔಷಧ ಕರ್ನಾಟಕ ಆ್ಯಂಟಿಬಯಾಟಿಕ್ಸ್‌ ಪ್ರೈವೇಟ್‌ ಲಿಮಿಟೆಡ್‌ನಲ್ಲಷ್ಟೇ (ಕೆಎಪಿಎಲ್‌) ಉತ್ಪಾದನೆ ಮಾಡಬೇಕು. ಕೇಂದ್ರ ಮತ್ತು ಎಲ್ಲ ರಾಜ್ಯ ಸರಕಾರಗಳು ಬೇಕಾದಷ್ಟು ಔಷಧಕ್ಕೆ ಬೇಡಿಕೆ ಸಲ್ಲಿಸಬೇಕು ಎಂದೂ ಸೂಚಿಸಲಾಗಿದೆ.

Advertisement

ಏತಕ್ಕಾಗಿ ಇದು ಬಳಕೆ?: ಹೆರಿಗೆ ಸಂದರ್ಭದಲ್ಲಿ ಇದು ಬಳಕೆ ಆಗುತ್ತದೆ. ಗರ್ಭಿಣಿಯೊಬ್ಬರಿಗೆ ಪ್ರಸವ ದಿನ ಬಂದರೂ ಹೆರಿಗೆ ನೋವು ಕಾಣಿಸಿಕೊಳ್ಳದಿದ್ದರೆ ಇದನ್ನು ನೀಡಲಾಗುತ್ತದೆ. ಇದು ದೇಹ ಮತ್ತು ಜನನಾಂಗದ ನಡುವೆ ಸಂಪರ್ಕವೇರ್ಪಡಿಸಿ, ಹೆರಿಗೆಯಲ್ಲಿ ಸಹಾಯ ಮಾಡುತ್ತದೆ. ಅಷ್ಟೇ ಅಲ್ಲ, ಹೆರಿಗೆ ಅನಂತರ ತಾಯಿಯಲ್ಲಿ ಹಾಲು ಉತ್ಪತ್ತಿಯಾಗಲೂ ಈ ಹಾರ್ಮೋನ್‌ ಪ್ರಮುಖ ಪಾತ್ರ ವಹಿಸುತ್ತದೆ.

ದುರ್ಬಳಕೆಯಿಂದಾಗಿ ನಿಷೇಧ: ಆದರೆ, ಇದನ್ನು ಪಶುಸಂಗೋಪನೆ ಉದ್ದಿಮೆಯಲ್ಲಿ ಬಳಸಿಕೊಳ್ಳಲಾಗುತ್ತಿತ್ತು. ರೈತರಿಗೆ ಯಾವಾಗ ಬೇಕೋ ಆ ಸಮಯದಲ್ಲಿ ಹಾಲು ಹಿಂಡಲು ಹಸುಗಳಿಗೆ ಇದನ್ನು ಹಾಕಲಾಗುತ್ತಿತ್ತು. ತರಕಾರಿಗಳ ಗಾತ್ರ ಹೆಚ್ಚಿಸಲೂ ಇದನ್ನು ರೈತರು ಬಳಸುತ್ತಿದ್ದರು. ತರಕಾರಿಗಳನ್ನು ಇನ್ನಷ್ಟು ದಪ್ಪ ಮಾಡುವ ಸಲುವಾಗಿ ಹಾಕಲಾಗುತ್ತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next