Advertisement

ಜಲಹಂಚಿಕೆ ಒಪ್ಪಂದಕ್ಕೆ ಭಾರತ-ಬಾಂಗ್ಲಾ ಸಹಿ; 25 ವರ್ಷಗಳಲ್ಲಿ ಮೊದಲ ಬಾರಿಗೆ ಇಂಥ ಕ್ರಮ

09:24 PM Sep 06, 2022 | Team Udayavani |

ನವದೆಹಲಿ: ಭಾರತ ಮತ್ತು ಬಾಂಗ್ಲಾದೇಶದ ನಡುವೆ 25 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ನೀರಿನ ಹಂಚಿಕೆ ಬಗ್ಗೆ ಮಧ್ಯಂತರ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.

Advertisement

ನವದೆಹಲಿಗೆ ಆಗಮಿಸಿರುವ ಬಾಂಗ್ಲಾದೇಶದ ಪ್ರಧಾನಿ ಶೇಖ್‌ ಹಸೀನಾ ಮತ್ತು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ ಸಮ್ಮುಖದಲ್ಲಿ ಎರಡೂ ದೇಶಗಳ ಅಧಿಕಾರಿಗಳು ಒಪ್ಪಂದಕ್ಕೆ ಸಹಿ ಹಾಕಿ, ದಾಖಲೆಗಳನ್ನು ವಿನಿಮಯ ಮಾಡಿಕೊಂಡಿದ್ದಾರೆ. 1996ರಲ್ಲಿ ಗಂಗಾ ನದಿ ನೀರು ಹಂಚಿಕೆ ಬಗ್ಗೆ 2 ದೇಶಗಳ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿತ್ತು.

ಭಾರತ ಮತ್ತು ಬಾಂಗ್ಲಾ ನಡುವೆ ಒಟ್ಟು 54 ನದಿಗಳು ಹರಿಯುತ್ತವೆ. ಶತಮಾನಗಳಿಂದ 2 ದೇಶದ ಜನರು ತಮ್ಮ ಜೀವನಕ್ಕಾಗಿ ಅವುಗಳನ್ನು ಅನುಸರಿಸಿದ್ದಾರೆ. ಕುಶಿಯಾರ ನದಿಯ ನೀರು ಹಂಚಿಕೆ ಸಂಬಂಧ ಉಭಯ ದೇಶಗಳ ನಡುವೆ ಒಪ್ಪಂದದಿಂದ ನೆರವಾಗಲಿದೆ.

ಇದರಿಂದಾಗಿ ಅಸ್ಸಾಂನ ದಕ್ಷಿಣ ಭಾಗ ಮತ್ತು ಬಾಂಗ್ಲಾದೇಶದ ಸೈಲ್‌ಹೆಟ್‌ ವಿಭಾಗದ ಜನರಿಗೆ ಪ್ರಯೋಜನವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ. ಇದರ ಜತೆಗೆ ರೈಲ್ವೆ, ಬ್ಯಾಹ್ಯಾಕಾಶ, ವಿಜ್ಞಾನ ಹಾಗೂ ನ್ಯಾಯಾಂಗ ಸೇರಿದಂತೆ ಏಳು ಒಪ್ಪಂದಗಳಿಗೆ ಭಾರತ ಮತ್ತು ಬಾಂಗ್ಲಾದೇಶ ಸಹಿ ಹಾಕಲಾಗಿದೆ.

ಆತ್ಮೀಯ ಸ್ವಾಗತ:
ನಾಲ್ಕು ದಿನಗಳ ಭಾರತ ಪ್ರವಾಸದಲ್ಲಿರುವ ಬಾಂಗ್ಲಾ ಪ್ರಧಾನಿ ಶೇಖ್‌ ಹಸೀನಾ ಅವರನ್ನು ನವದೆಹಲಿಯ ಹೈದರಾಬಾದ್‌ ಹೌಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಆತ್ಮೀಯವಾಗಿ ಬರಮಾಡಿಕೊಂಡರು. ಭಯೋತ್ಪಾದನೆ, ಜಲಹಂಚಿಕೆ ಸೇರಿದಂತೆ ಜಾಗತಿಕ ವಿಷಯಗಳ ಕುರಿತು ಉಭಯ ನಾಯಕರು ಚರ್ಚಿಸಿದರು.

Advertisement

ಭಾರತ ಮತ್ತು ಬಾಂಗ್ಲಾ ನಡುವಿನ ಪರಸ್ಪರ ನಂಬಿಕೆ ಮೇಲೆ ದಾಳಿ ಮಾಡುವ, ಬೆದರಿಕೆಯೊಡ್ಡುವ ಭಯೋತ್ಪಾದನೆ ಹಾಗೂ ಮೂಲಭೂತ ಶಕ್ತಿಗಳನ್ನು ಉಭಯ ದೇಶಗಳು ಜಂಟಿಯಾಗಿ ಎದುರಿಸಬೇಕು. ಉಭಯ ದೇಶಗಳು ಪರಸ್ಪರ ಸ್ನೇಹ ಮತ್ತು ಸಹಕಾರದಿಂದ ಹಲವು ವಿವಾದಗಳನ್ನು ಬಗೆಹರಿಸಿಕೊಂಡಿದೆ. ಅದೇ ರೀತಿ ತೀಸ್ತಾ ಜಲಹಂಚಿಕೆ ಸೇರಿದಂತೆ ಹಲವು ವಿವಾದಗಳನ್ನು ಆದಷ್ಟು ಬೇಗ ಬಗೆಹರಿಸಿಕೊಳ್ಳಲಿದೆ,” ಎಂದು ನಾವು ಭಾವಿಸುತ್ತೇವೆ,” ಎಂದು ಮೋದಿ ಹೇಳಿದರು.

ಸ್ನೇಹಹಸ್ತ:
ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಶೇಖ್‌ ಹಸಿನಾ, ” ಸ್ನೇಹದಿಂದ ಯಾವುದೇ ಸಮಸ್ಯೆಯನ್ನು ಪರಿಹರಿಸಬಹುದಾಗಿದೆ. ಹಾಗಾಗಿ ನಾವು ಭಾರತದತ್ತ ಸದಾ ಸ್ನೇಹಹಸ್ತವನ್ನು ಚಾಚಿದ್ದೇವೆ. ಬಡತನ ನಿರ್ಮೂಲನೆ, ಆರ್ಥಿಕ ಅಭಿವೃದ್ಧಿ ಸೇರಿದಂತೆ ಉಭಯ ದೇಶಗಳ ಜನರ ಸ್ಥತಿಯನ್ನು ಸುಧಾರಿಸುವ ನಿಟ್ಟಿನಲ್ಲಿ ನಾವು ಗಮನಹರಿಸಿದ್ದೇವೆ’ ಎಂದರು.

ಇದಕ್ಕೂ ಮುನ್ನ ರಾಷ್ಟ್ರಪತಿ ಭವನದಲ್ಲಿ ಶೇಖ್‌ ಹಸಿನಾ ಅವರೊಂದಿಗೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಉಪ ರಾಷ್ಟ್ರಪತಿ ಜಗದೀಪ್‌ ಧನಕರ್‌, ಉದ್ಯಮಿ ಗೌತಮ್‌ ಅದಾನಿ ಮಾತುಕತೆ ನಡೆಸಿದರು.

Advertisement

Udayavani is now on Telegram. Click here to join our channel and stay updated with the latest news.

Next