Advertisement

ಕಾಮನ್‌ವೆಲ್ತ್‌ ಮಹಿಳಾ ಕ್ರಿಕೆಟ್‌: ಭಾರತಕ್ಕೆ ಆಸ್ಟ್ರೇಲಿಯ ಮೊದಲ ಎದುರಾಳಿ

10:56 PM Feb 01, 2022 | Team Udayavani |

ದುಬಾೖ: ಕಾಮನ್‌ವೆಲ್ತ್‌ ಕ್ರೀಡಾಕೂಟದಲ್ಲಿ 24 ವರ್ಷಗಳ ಬಳಿಕ ಕ್ರಿಕೆಟ್‌ ಪಂದ್ಯಗಳನ್ನು ನಡೆಸಲಾಗುತ್ತಿದೆ. ಬರ್ಮಿಂಗ್‌ಹ್ಯಾಮ್‌ನಲ್ಲಿ ನಿಗದಿಯಾಗಿರುವ ಈ ಬಾರಿಯ ಕೂಟದಲ್ಲಿ ಮೊದಲ ಪಂದ್ಯದಲ್ಲಿ ಜು. 29ರಂದು ಭಾರತ ಮಹಿಳಾ ತಂಡವು ಆಸ್ಟ್ರೇಲಿಯವನ್ನು ಎದುರಿಸಲಿದೆ.

Advertisement

ಮಹಿಳಾ ಟಿ20 ಪಂದ್ಯಗಳು ನಾಕೌಟ್‌ ಮಾದರಿಯಲ್ಲಿ ನಡೆಯಲಿದ್ದು, ಆಗಸ್ಟ್‌ 7 ರಂದು ಚಿನ್ನ ಮತ್ತು ಕಂಚಿನ ಪದಕ ಸುತ್ತಿನ ಪಂದ್ಯಗಳು ನಿಗದಿಯಾಗಿವೆ. ಶ್ರೀಲಂಕಾ ತಂಡವು ಟೂರ್ನಿಗೆ 8ನೇ ತಂಡವಾಗಿ ಅರ್ಹತೆ ಪಡೆದಿದೆ ಎಂದು ಐಸಿಸಿ ಮಂಗಳವಾರ ತಿಳಿಸಿದೆ.

ಇದನ್ನೂ ಓದಿ:ಪ್ರೊ ಕಬಡ್ಡಿ: ಗುಜರಾತ್‌ ಜೈಂಟ್ಸ್‌ , ಬೆಂಗಳೂರು ಬುಲ್ಸ್‌ ಗೆ ಜಯ

ಮೊದಲ ಬಾರಿ ಕಾಮನ್‌ವೆಲ್ತ್‌ ಕೂಟಕ್ಕೆ ಪ್ರವೇಶ ಪಡೆದಿರುವ ಮಹಿಳಾ ಟೂರ್ನಿಯಲ್ಲಿ ಆಸ್ಟ್ರೇಲಿಯ, ಬಾರ್ಬಾಡಾಸ್‌, ಇಂಗ್ಲೆಂಡ್‌, ಭಾರತ, ನ್ಯೂಜಿಲ್ಯಾಂಡ್‌, ದಕ್ಷಿಣ ಆಫ್ರಿಕಾ, ಪಾಕಿಸ್ಥಾನ ಮತ್ತು ಶ್ರೀಲಂಕಾ ತಂಡಗಳು ಆಡಲಿವೆ. ಕಾಮನ್‌ವೆಲ್ತ್‌ ಕ್ರೀಡಾಕೂಟವು ಜುಲೈ 28ರಿಂದ ಆಗಸ್ಟ್‌ 8ರ ವರೆಗೆ ನಿಗದಿಯಾಗಿದ್ದು. 72 ದೇಶಗಳಿಂದ 4,500ಕ್ಕೂ ಹೆಚ್ಚು ಆ್ಯತ್ಲೀಟ್‌ಗಳು ಪಾಲ್ಗೊಳ್ಳುವ ನಿರೀಕ್ಷೆಯಿದೆ.

Advertisement

Udayavani is now on Telegram. Click here to join our channel and stay updated with the latest news.

Next