ನವದೆಹಲಿ: ಕಳೆದ ವಾರ ಏಪ್ರಿಲ್‌ನಲ್ಲಿ ಉತ್ಪಾದನಾ ಕಡಿತವನ್ನು ಮುಂದುವರೆಸಲು ಒಪೆಕ್(OPEC) + ನಿರ್ಧರಿಸಿದ ಹಿನ್ನಲೆಯಲ್ಲಿ ತೈಲೋತ್ಪನ್ನವನ್ನು ಹೆಚ್ಚು ಮಾಡಿ, ಕ್ರೂಡ್ ಆಯಿಲ್ ಮೇಲಿನ ಬೆಲೆಯನ್ನು ಕಡಿತಗೊಳಿಸಲು ಭಾರತ ತೈಲ ಉತ್ಪಾದಕರನ್ನು ಕೋರಿದೆ.
ವಿಶ್ವದ ಮೂರನೇ ಅತಿದೊಡ್ಡ ತೈಲ ಆಮದುದಾರ ಮತ್ತು ಗ್ರಾಹಕವಾಗಿರುವ ಭಾರತವು ತನ್ನ ಒಟ್ಟಾರೆ ಕಚ್ಚಾ ಅಗತ್ಯಗಳಲ್ಲಿ ಸುಮಾರು 84% ನಷ್ಟು ಆಮದು ಮಾಡಿಕೊಳ್ಳುತ್ತದೆ.
ಓದಿ : ರಾಬರ್ಟ್ ಹಬ್ಬಕ್ಕೆ ಒಂದೇ ದಿನ ಬಾಕಿ: ಅಭಿಮಾನಿಗಳ ಜೊತೆಗೆ ಇಡೀ ಚಿತ್ರರಂಗಕ್ಕೂ ನಿರೀಕ್ಷೆ..!
ವಿಶ್ವದ ಅಗ್ರ ರಫ್ತುದಾರ ಸೌದಿ ಅರೇಬಿಯಾ ನೇತೃತ್ವದ ಒಪೆಕ್ + ಕಳೆದ ವಾರ ಹೆಚ್ಚಿನ ಉತ್ಪಾದನಾ ನಿರ್ಬಂಧಗಳನ್ನು ಏಪ್ರಿಲ್ ವರೆಗೆ ವಿಸ್ತರಿಸಲು ನಿರ್ಧರಿಸಿದೆ ಎಂಬ ಮಾಹಿತಿ ವರದಿಯಾಗಿದೆ. ಏರುತ್ತಿರುವ ತೈಲ ಬೆಲೆಗಳಿಂದ ತೀವ್ರವಾಗಿ ತತ್ತರಿಸಿರುವ ಭಾರತ, ಉತ್ಪಾದಕ ಕಡಿತವನ್ನು ನಿಲ್ಲಿಸುವಂತೆ ಮತ್ತು ಜಾಗತಿಕ ಆರ್ಥಿಕ ಚೇತರಿಕೆಗೆ ಸಹಾಯ ಮಾಡುವಂತೆ ಉತ್ಪಾದಕರನ್ನು ಕೋರಿದೆ ಎಂದು ಸುದ್ದಿ ಸಂಸ್ಥೆಗಳು ತಿಳಿಸಿವೆ.
ಓದಿ : ಕೋವಿಡ್ ಪರಿಣಾಮ : ದೇಶದಲ್ಲಿ 10,113 ಕಂಪೆನಿಗಳು ಸ್ಥಗಿತ..!