Advertisement

ಹೆಚ್ಚುವರಿ ವೆಚ್ಚ: ಸಂಸತ್‌ ಅನುಮೋದನೆ ಬಯಸಿದ ಸರ್ಕಾರ

10:06 PM Dec 09, 2022 | Team Udayavani |

ನವದೆಹಲಿ: ಪ್ರಸಕ್ತ ವಿತ್ತೀಯ ವರ್ಷಕ್ಕೆ ಸಂಬಂಧಿಸಿದಂತೆ 3.25 ಲಕ್ಷ ಕೋಟಿ ರೂ. ಮೊತ್ತವನ್ನು ಹೆಚ್ಚುವರಿಯಾಗಿ ಖರ್ಚು ಮಾಡುವ ವಿಚಾರಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಸಂಸತ್‌ನ ಅನುಮೋದನೆ ಕೋರಿದೆ.

Advertisement

ಈ ಮೊತ್ತದ ಪೈಕಿ 1.09 ಲಕ್ಷ ಕೋಟಿ ರೂ. ಮೊತ್ತವನ್ನು ರಸಗೊಬ್ಬರ ಸಹಾಯಧನ ನೀಡಲೆಂದೇ ಬಳಕೆ ಮಾಡಲು ಉದ್ದೇಶಿಸಲಾಗಿದೆ.

80,328.25 ಕೋಟಿ ರೂ. ಮೊತ್ತವನ್ನು ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಖಾತೆ ಸಚಿವಾಲಯದ ವೆಚ್ಚಕ್ಕೆ ಬಳಕೆ ಮಾಡಲು ಉದ್ದೇಶಿಸಲಾಗಿದೆ. 29,944 ಕೋಟಿ ರೂ. ಮೊತ್ತವನ್ನು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಕ್ಕೆ ಬಳಕೆ ಮಾಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next