Advertisement

ಇತರ ದೇಶಗಳಿಗೆ ಹೋಲಿಸಿದರೆ ಭಾರತದಲ್ಲೇ ಅತೀ ಹೆಚ್ಚು ಸೈಬರ್ ದಾಳಿ: ಸಮೀಕ್ಷೆ

04:15 PM Sep 10, 2020 | Mithun PG |

ನವದೆಹಲಿ: ಜಗತ್ತಿನ ಇತರ ದೇಶಗಳಿಗೆ ಹೋಲಿಸಿದರೆ ಭಾರತದ ಕಂಪೆನಿಗಳೇ ಅತೀ ಹೆಚ್ಚಾಗಿ ಸೈಬರ್ ದಾಳಿಗೆ ತುತ್ತಾಗುತ್ತಿವೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಸೈಬರ್ ಸೆಕ್ಯೂರಿಟಿ ಫರ್ಮ್ ಆ್ಯಕ್ರೋನಿಕ್ಸ್ ಸಂಸ್ಥೆಯೂ ಈ ಸಮೀಕ್ಷೆ ನಡೆಸಿದ್ದು ಇದಕ್ಕೆ “ಆ್ಯಕ್ರೋನಿಕ್ಸ್ ಸೈಬರ್ ರೀಡಿನೆಸ್ ರಿಪೋರ್ಟ್ 2020” ಎಂದು ಹೆಸರಿಡಲಾಗಿತ್ತು.

Advertisement

ಸಮೀಕ್ಷೆಯ ಪ್ರಕಾರ ಕಳೆದ 5 ತಿಂಗಳಲ್ಲಿ ಭಾರತದ 56% ಕಂಪೆನಿಗಳು ತಮ್ಮ ಐಟಿ ವೆಚ್ಚವನ್ನು ಹೆಚ್ಚಿಸಿದೆ. ಇದು ಜಾಗತಿಕ ಸರಾಸರಿಗಿಂತ ಎರಡು ಪಟ್ಟು ಹೆಚ್ಚಾಗಿದೆ. ಈ ಸರ್ವೆಯನ್ನು ಜಗತ್ತಿನ 17 ದೇಶಗಳಲ್ಲಿ ನಡೆಸಲಾಗಿದೆ ಮತ್ತು 3,400 ಸಂಸ್ಥೆಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ.

ಅಧ್ಯಯನದ ಪ್ರಕಾರ, ಜಗತ್ತಿನ 39% ಕಂಪೆನಿಗಳು ಕಳೆದ ಮೂರು ತಿಂಗಳಲ್ಲಿ ವಿಡಿಯೋ ಕಾನ್ಪರೆನ್ಸಿಂಗ್ ಸೈಬರ್ ದಾಳಿಯನ್ನು ಅನುಭವಿಸಿದೆ. ಇದರಲ್ಲಿ ಭಾರತವೇ ಅತೀ ಹೆಚ್ಚು ಸರಾಸರಿಯನ್ನು ಹೊಂದಿದ್ದು, 66% ಸಂಸ್ಥೆಗಳು ವಿಡಿಯೋ ಕಾನ್ಫರೆನ್ಸಿಂಗ್ ದಾಳಿಗೊಳಗಾಗಿವೆ.

ಇದನ್ನೂ ಓದಿ: ಪ್ಲೇಸ್ಟೋರ್ ನಲ್ಲಿ ಜೋಕರ್ ಮಾಲ್ವೇರ್ ಹಾವಳಿ: ಕೂಡಲೇ ಈ 6 ಆ್ಯಪ್ uninstall ಮಾಡಿ !

ಕೋವಿಡ್ ಕಾರಣದಿಂದ ಜಗತ್ತಿನ ಹಲವಾರು ಸಂಸ್ಥೆಗಳು ವರ್ಕ್ ಫ್ರಂ ಹೋಮ್ ಪಾಲಿಸಿಯನ್ನು ಜಾರಿಗೆ ತಂದಿದ್ದವು. ಮಾತ್ರವಲ್ಲದೆ ಈ ಸಮಯದಲ್ಲಿ ಜೂಮ್, ಗೂಗಲ್ ಮೀಟ್, ಸಿಸ್ಕೋ, Webex, ಮೈಕ್ರೋ ಸಾಫ್ಟ್ ಟೀಮ್ಸ್ ಗಳ ಮೂಲಕ ತನ್ನ ಉದ್ಯೋಗಿಗಳ ಜೊತೆ ವ್ಯವಹಸರಿಸುತ್ತಿದ್ದವು. ಪರಿಣಾಮವೆಂಬಂತೆ ಎಲ್ಲಾ ಡಿಜಿಟಲ್ ಮಾಧ್ಯಮಗಳು ಭಾರೀ ಜನಪ್ರಿಯತೆ ಪಡೆದಿದ್ದವು.

Advertisement

ಇದು ಹ್ಯಾಕರ್ ಗಳಿಗೆ ವರದಾನವಾಗಿದ್ದು, ಮಾಲ್ವೇರ್ ಗಳ ಮೂಲಕ ದಾಳಿ ಮಾಡುತ್ತಿದ್ದರು ಎಂದು ತಿಳಿದುಬಂದಿದೆ. ಇತರ ದೇಶಗಳಿಗೆ ಹೋಲಿಸಿದರೆ ಭಾರತದ ಕಂಪೆನಿಗಳು ಎರಡು ಪಟ್ಟು ಸೈಬರ್ ಆಕ್ರಮಣಕ್ಕೆ ತುತ್ತಾಗಿವೆ. ಸುಮಾರು 31% ಸಂಸ್ಥೆಗಳು ಪ್ರತಿದಿನ ಸೈಬರ್ ದಾಳಿಗೆ ಒಳಗಾಗುತ್ತಿವೆ. ಸುಮಾರು 50% ಕಂಪೆನಿಗಳು ವಾರಕ್ಕೊಮ್ಮೆ ಹ್ಯಾಕರ್ ಗಳ ಹೊಡೆತಕ್ಕೆ ನುಲುಗುತ್ತಿವೆ ಎಂದು ವರದಿ ತಿಳಿಸಿದೆ.

ಇದನ್ನೂ ಓದಿ: 4.75 ಕೋಟಿ ಭಾರತೀಯರ ವೈಯಕ್ತಿಕ ಮಾಹಿತಿ ಡಾರ್ಕ್ ವೆಬ್ ನಲ್ಲಿ ಲೀಕ್? ಟ್ರೂಕಾಲರ್ ಹೇಳಿದ್ದೇನು?

ಕಳೆದ 5 ವರ್ಷಗಳಿಂದ ಅದರಲ್ಲೂ ವಿಶೇಷವಾಗಿ ಕಳೆದ 6 ತಿಂಗಳಿನಿಂದ ಹೆಚ್ಚಿನ ಡೇಟಾ ಗಳು ಹ್ಯಾಕರ್ ಗಳ ಪಾಲಾಗುತ್ತಿದೆ. ಹೀಗಾಗಿ ಕಂಪೆನಿಗಳು ಹೆಚ್ಚಾಗಿ ಅಧುನಿಕ ಮಾದರಿಯ ಸೈಬರ್ ಸೆಕ್ಯೂರಿಟಿ ಮಾದರಿಗಳನ್ನು ಅಳವಡಿಸಿಕೊಳ್ಳುವುದು ಅನಿವಾರ್ಯ ಎಂದು ಸಮೀಕ್ಷೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next