Advertisement
ಮೊದಲು ನಡೆದ ಪುರುಷರ ಫೈನಲ್‌ನಲ್ಲಿ ಭಾರತ ನ್ಯೂಜಿಲ್ಯಾಂಡ್‌ಗೆ 5-0 ಅಂತರದಿಂದ ಆಘಾತವಿಕ್ಕಿತು. ಅನಂತರದ ವನಿತಾ ಪ್ರಶಸ್ತಿ ಸಮರದಲ್ಲಿ ಆತಿಥೇಯ ಜಪಾನನ್ನು 2-1 ಗೋಲುಗಳಿಂದ ಹಿಮ್ಮೆಟ್ಟಿಸಿತು.ಈ ಜಯದೊಂದಿಗೆ ಪುರುಷರ ತಂಡ ರೌಂಡ್ ರಾಬಿನ್ ಲೀಗ್ ಪಂದ್ಯ ದಲ್ಲಿ ಕಿವೀಸ್ ವಿರುದ್ಧ ಅನುಭವಿಸಿದ 1-2 ಗೋಲುಗಳ ಸೋಲಿಗೂ ಸೇಡು ತೀರಿಸಿಕೊಂಡಿತು.
ಕಿವೀಸ್ ಮೇಲೆ ಭಾರೀ ಹಿಡಿತ ಸಾಧಿಸಿದ ಭಾರತ ತನ್ನ ಅಷ್ಟೂ ಗೋಲುಗಳನ್ನು ಮಧ್ಯಾಂತರದ ಒಳಗಾಗಿ ದಾಖಲಿಸಿ ಪ್ರಾಬಲ್ಯ ಮೆರೆಯಿತು. ಸಮ್ಶೆàರ್ ಸಿಂಗ್ (18), ನೀಲಕಾಂತ್ ಶರ್ಮ (22), ಗುರುಸಾಹಿಬ್‌ಜೀತ್ ಸಿಂಗ್ (26), ಮನ್‌ದೀಪ್ ಸಿಂಗ್ (27) ಗೋಲು ಹೊಡೆದ ಇತರ ಆಟಗಾರರು. ಕೊನೆಯ 4 ಗೋಲುಗಳು 9 ನಿಮಿಷಗಳ ಅವಧಿಯಲ್ಲಿ ಸಿಡಿಸಿದ್ದು ಭಾರತದ ಪರಾಕ್ರಮಕ್ಕೆ ಸಾಕ್ಷಿ.ಮೊದಲಾರ್ಧದ ಈ ಗೋಲಿನ ಸುರಿಮಳೆ ಬಳಿಕ ಎರಡೂ ತಂಡಗಳ ತೀವ್ರತೆ ಕಡಿಮೆಗೊಂಡಿತು. 3ನೇ ಕ್ವಾರ್ಟರ್‌ನಲ್ಲಿ ನ್ಯೂಜಿಲ್ಯಾಂಡ್ ಮುಂದೆ ಗೋಲಿನ ಅವಕಾಶ ಇತ್ತಾದರೂ ಹರ್ಮನ್‌ಪ್ರೀತ್ ಸಿಂಗ್ ಇದನ್ನು ತಪ್ಪಿಸಿದರು.
Related Articles
ವನಿತಾ ಫೈನಲ್‌ನಲ್ಲಿ ನವಜೋತ್ ಕೌರ್ ಮೊದಲು ಗೋಲಿನ ಖಾತೆ ತೆರೆದರು. ಈ ಗೋಲು 11ನೇ ನಿಮಿಷದಲ್ಲಿ ಬಂತು. ಮರು ನಿಮಿಷದಲ್ಲೇ ಮಿನಾಮಿ ಶಿಮಿಜು ಪಂದ್ಯವನ್ನು ಸಮಬಲಕ್ಕೆ ತಂದರು. ಬಳಿಕ 33ನೇ ನಿಮಿಷದಲ್ಲಿ ಲಾಲ್ರೆಮಿÕಯಾಮಿ ಅವರಿಂದ ಭಾರತದ 2ನೇ ಗೋಲು ದಾಖಲಾಯಿತು. ಭಾರತ ಕೊನೆಯ ವರೆಗೂ ಈ ಮುನ್ನಡೆಯನ್ನು ಕಾಯ್ದುಕೊಂಡಿತು.
Advertisement