Advertisement

ಜೂನ್ 23, 24ರಂದು ತಜಿಕಿಸ್ತಾನದಲ್ಲಿ ಭಾರತ, ಪಾಕಿಸ್ತಾನ್, ಎನ್ ಎಸ್ ಎ ಸಭೆ

03:32 PM Jun 19, 2021 | Team Udayavani |

ನವದೆಹಲಿ: ತಜಿಕಿಸ್ತಾನ್ ದುಶಾನ್ಬೆಯಲ್ಲಿ ಮುಂದಿನ ವಾರ ನಡೆಯಲಿರುವ ಶಾಂಘೈ ಸಹಕಾರ ಸಂಘಟನೆಯ(ಎಸ್ ಸಿಒ) ಸಭೆಯಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಮತ್ತು ಪಾಕಿಸ್ತಾನದ ಎನ್ ಎಸ್ ಎ ಮೊಯೀದ್ ಯೂಸುಫ್ ಭಾಗವಹಿಸಲಿದ್ದಾರೆ. ಜೂನ್ 23, 24ರಂದು ಇತರ ದೇಶಗಳ ಎನ್ ಎಸ್ ಎ ಜೊತೆ ಸಭೆ ನಡೆಯಲಿದೆ ಎಂದು ವರದಿ ತಿಳಿಸಿದೆ.

Advertisement

ಇದನ್ನೂ ಓದಿ:ತನ್ನ ಕಿರಿಯ ಉದ್ಯೋಗಿಗಳಿಗೆ ಒಂದೇ ವರ್ಷದಲ್ಲಿ ಎರಡು ಬಾರಿ ವೇತನ ಹೆಚ್ಚು ಮಾಡಿದ ವಿಪ್ರೊ..!

ಆದರೆ ಮುಂದಿನ ವಾರ ನಡೆಯಲಿರುವ ಎನ್ ಎಸ್ ಎ ಅಧಿಕಾರಿಗಳ ದ್ವಿಪಕ್ಷೀಯ ಸಭೆಯಲ್ಲಿ ಭಾಗವಹಿಸುವ ಬಗ್ಗೆ ಭಾರತ ಮತ್ತು ಪಾಕಿಸ್ತಾನ ಈವರೆಗೂ ಖಚಿತಪಡಿಸಿಲ್ಲ ಅಥವಾ ಸಭೆಯಿಂದ ದೂರ ಉಳಿಯಲಿದೆಯೇ ಎಂಬುದು ತಿಳಿದು ಬಂದಿಲ್ಲ ಎಂದು ವರದಿ ಹೇಳಿದೆ.

ಕಳೆದ ಕೆಲವು ತಿಂಗಳಿನಿಂದ ಭಾರತ ಮತ್ತು ಪಾಕಿಸ್ತಾನದ ನಡುವೆ ಎಚ್ಚರಿಕೆಯ ನಡೆ ಮುಂದುವರಿಸಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ. ಈ ವರ್ಷದ ಫೆಬ್ರುವರಿಯಲ್ಲಿ ಕಾಶ್ಮೀರ ನಿಯಂತ್ರಣ ರೇಖೆಯಲ್ಲಿ 2003ರ ಕದನ ವಿರಾಮ ಒಪ್ಪಂದ ಬಗ್ಗೆ ಉಭಯ ಸೇನೆಯು ಸಮ್ಮತಿ ಸೂಚಿಸಿತ್ತು. ಆ ಬಳಿಕ ಯಾವುದೇ ಗುಂಡಿನ ದಾಳಿ ನಡೆದಿರಲಿಲ್ಲ ಎಂದು ವರದಿ ವಿವರಿಸಿದೆ.

ಇದಕ್ಕೂ ಮುನ್ನ ಮಾರ್ಚ್ ಮತ್ತು ಏಪ್ರಿಲ್ ನಲ್ಲಿ ನಡೆದ ಸಭೆಗೆ ವಿದೇಶಾಂಗ ಸಚಿವ ಎಸ್.ಜೈಶಂಕರ್ ಮತ್ತು ಪಾಕಿಸ್ತಾನದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಖುರೇಷಿ ಕೂಡಾ ಹಾಜರಾಗಿದ್ದರು. ಆದರೆ ಇಬ್ಬರು ಒಂದೇ ಸ್ಥಳದಲ್ಲಿದ್ದರೂ ಯಾವುದೇ ಮಾತುಕತೆ ನಡೆದಿರಲಿಲ್ಲವಾಗಿತ್ತು. ಏಪ್ರಿಲ್ ನಲ್ಲಿ ದ್ವಿಪಕ್ಷೀಯ ಭೇಟಿಗಾಗಿ ಇಬ್ಬರು ಯುಎಗೆ ತೆರಳಿದ್ದರು.

Advertisement

ಮುಖ್ಯವಾಗಿ ಎಸ್ ಸಿಒನಲ್ಲಿ ರಷ್ಯಾ, ಚೀನಾ, ಭಾರತ, ಪಾಕಿಸ್ತಾನ, ಕಜಕಿಸ್ತಾನ್, ಕಿರ್ಗಿಸ್ತಾನ್, ತಜಿಕಿಸ್ತಾನ್ ಮತ್ತು ಉಜ್ಬೇಕಿಸ್ತಾನ್ ಸೇರಿದಂತೆ ಎಂಟು ದೇಶಗಳನ್ನು ಒಳಗೊಂಡಿರುವುದಾಗಿ ವರದಿ ವಿವರಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next