Advertisement

ಚೀನದ ಮೇಲೆ ದೃಷ್ಟಿ ನೆಟ್ಟು ಭಾರತ-ಫ್ರಾನ್ಸ್‌ ಅತೀ ದೊಡ್ಡ ನೌಕಾ ಕವಾಯತು

09:03 AM May 11, 2019 | Team Udayavani |

ಚಾರ್ಲ್ಸ್‌ ಡಿ’ಗಾಲೆ : ವಿಮಾನ ವಾಹಕ ಚಾರ್ಲ್ಸ್‌ ಡಿ’ಗಾಲೆ ಸಮರ ನೌಕೆಯನ್ನು ಕೇಂದ್ರವಾಗಿರಿಸಿಕೊಂಡು ಭಾರತ ಮತ್ತು ಫ್ರಾನ್ಸ್‌ ಇಂದು ಶುಕ್ರವಾರ ಚೀನದ ಮೇಲೆ ದೃಷ್ಟಿ ನೆಟ್ಟು ತಮ್ಮ ಅತೀ ದೊಡ್ಡ ನೌಕಾಭ್ಯಾಸವನ್ನು ಕೈಗೊಂಡವು. ಪರಿಣಾಮವಾಗಿ ಹಿಂದೂ ಮಹಾಸಾಗರದಲ್ಲಿನ ಬೃಹತ್‌ ಶಕ್ತಿಗಳ ದೃಷ್ಟಿ ಇದರ ಮೇಲೆ ಹರಿದವು.

Advertisement

ಚೀನದ ಹೆಚ್ಚುತ್ತಿರುವ ಆರ್ಥಿಕ ಶಕ್ತಿ ಮತ್ತು ಅದರ ಭೌಗೋಳಿಕ ಹಕ್ಕೊತ್ತಾಯಕ್ಕೆ ಅಂಕುಶ ಹಾಕುವ ನಿಟ್ಟಿನಲ್ಲಿ ಭಾರತ ಮತ್ತು ಫ್ರಾನ್ಸ್‌ ಈ ಜಂಟಿ ನೌಕಾಭಾಸ್ಯ ನಡೆಸುತ್ತಿರುವುದು ಗಮನಾರ್ಹವಾಗಿದೆ ಎಂದು ಮೂಲಗಳು ಹೇಳಿವೆ.

ವ್ಯೂಹಾತ್ಮಕ ಮಹತ್ವದ ಮತ್ತು ಭಾರೀ ಹಿತಾಸಕ್ತಿಗಳು ಇರುವ ಈ ವಲಯದಲ್ಲಿ, ಮುಖ್ಯವಾಗಿ ಅಂತಾರಾಷ್ಟ್ರೀಯ ವ್ಯಾಪಾರ ವಹಿವಾಟಿನಲ್ಲಿ ನಾವು ಹೆಚ್ಚಿನ ಸ್ಥಿರತೆ ಮತ್ತು ಭದ್ರತೆಯನ್ನು ತರಲು ಯತ್ನಿಸುತ್ತಿದ್ದೇವೆ ಎಂದು ಏಕೈಕ ವಿಮಾನ ವಾಹಕ ಯುದ್ಧ ನೌಕೆಯನ್ನು ಒಳಗೊಂಡ ಫ್ರಾನ್ಸ್‌ನ ನೌಕೆಗಳ ರಿಯರ್‌ ಅಡ್ಮಿರಲ್‌ ಒಲಿವಿಯರ್‌ ಲೀಬಾಸ್‌ ಹೇಳಿದರು.

ಈ ನೌಕಾಭ್ಯಾಸದಲ್ಲಿ ಫ್ರಾನ್ಸ್‌ನ 42,000 ಟನ್‌ ತೂಕದ ಚಾರ್ಲ್ಸ್‌ ಡಿ’ಗಾಲೆ ಸೇರಿದಂತೆ ಒಟ್ಟು 12 ಸಮರ ನೌಕೆಗಳು ಮತ್ತು ಜಲಾಂತರ್ಗಾಮಿಗಳು (ಆರು ದೇಶಗಳಿಂದ ತಲಾ ಒಂದು) ಪಾಲ್ಗೊಳ್ಳುತ್ತಿವೆ. ಭಾರತದ ರಿಸಾರ್ಟ್‌ ರಾಜ್ಯ ಎನಿಸಿಕೊಂಡಿರುವ ಗೋವೆಯ ದೂರ ಸಮುದ್ರದಲ್ಲಿ ನಡೆಯುತ್ತಿರುವ 17ನೇ ವಾರ್ಷಿಕ ನೌಕಾಭ್ಯಾಸ ಇದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next