Advertisement
ಮಂಗಳವಾರ ಬೆಳಗ್ಗೆ ಮೂವರು ಭಾರತೀಯ ಸೈನಿಕರು ಹುತಾತ್ಮರಾಗಿದ್ದರು. ಶಾಂತಿ ಮಂತ್ರ ಪಠಿಸುತ್ತಲೇ ಚೀನಿ ಸೈನಿಕರು ದಾಳಿ ನಡೆಸುವ ಮೂಲಕ ವಿಶ್ವದ ಕೆಂಗಣ್ಣಿಗೆ ಗುರಿಯಾಗಿರುವುದಾಗಿ ವರದಿ ವಿವರಿಸಿದೆ.
ಚೀನಾದ ಪಡೆಗಳು ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಅಕ್ರಮವಾಗಿ ಪ್ರವೇಶಿಸಿರುವುದನ್ನು ಗಮನಿಸಿದ ಭಾರತೀಯ ಯೋಧರು ವಾಪಸ್ ತೆರಳುವಂತೆ ಸೂಚಿಸಿದ್ದರು. ಆದರೆ ಇದಕ್ಕೆ ಚೀನಾ ಸೈನಿಕರು ವಿರೋಧ ವ್ಯಕ್ತಪಡಿಸಿ ಸಂಘರ್ಷಕ್ಕೆ ಇಳಿದಿದ್ದರು. ಈ ಸಂದರ್ಭದಲ್ಲಿ ಎರಡೂ ಕಡೆಗಳ ಸೈನಿಕರು ಗುಂಡು ಹಾರಾಟ ನಡೆಸದೇ ಕಲ್ಲು, ದೊಣ್ಣೆ, ಸರಳುಗಳಿಂದ ಹೊಡೆದಾಡಿಕೊಂಡಿದ್ದರು ಎಂದು ಭಾರತೀಯ ವಿದೇಶಾಂಗ ಇಲಾಖೆ ಮಾಹಿತಿ ನೀಡಿತ್ತು.
Related Articles
Advertisement
ಗುಂಡಿನ ದಾಳಿ ಏಕೆ ನಡೆಯಲಿಲ್ಲ?ಈಗಾಗಲೇ ಡೋಕ್ಲಾಂ ಪ್ರದೇಶದಲ್ಲಿ ತಿಂಗಳುಗಳ ಕಾಲ ಭಾರತ ಮತ್ತು ಚೀನಾ ಸೈನಿಕರ ನಡುವೆ ಸಂಘರ್ಷ ನಡೆದಿತ್ತು. ಅದೇ ರೀತಿ ಪದೇ, ಪದೇ ಚೀನಾ ಭಾರತ ಸೇನೆ ನಡುವೆ ಘರ್ಷಣೆಗಳಾಗುತ್ತಿದೆ. ಆದರೆ ಪ್ರತೀ ಬಾರಿ ಇಂತಹ ಸಂಘರ್ಷ ನಡೆದಾಗ ಕೈ-ಕೈ ಮಿಲಾಯಿಸುತ್ತಿದ್ದರೇ ವಿನಃ ಗುಂಡು ಹಾರಿಸಿದ ಘಟನೆ ನಡೆದಿಲ್ಲ. ಯಾಕೆಂದರೆ 1993ರಲ್ಲಿ ಭಾರತ ಮತ್ತು ಚೀನಾ ನಡುವೆ ನಡೆದಿರುವ ಒಪ್ಪಂದದ ಪ್ರಕಾರ, ಎರಡು ದೇಶಗಳ ಪೈಕಿ ಯಾವುದೇ ಯೋಧ ಗಡಿ ದಾಟಿ ಬಂದರೆ ಅವರಿಗೆ ಎಚ್ಚರಿಕೆ ಕೊಟ್ಟು ಕಳುಹಿಸಬೇಕು. ಇದನ್ನೂ ಓದಿ:ಮಾತುಕತೆಗೆಂದು ತೆರಳಿದ್ದ ಭಾರತೀಯ ಯೋಧರ ಮೇಲೆ ಚೀನಿ ಸೈನಿಕರ ಅಟ್ಟಹಾಸ ಅಷ್ಟೇ ಅಲ್ಲ 1996ರ ಒಪ್ಪಂದದ ಪ್ರಕಾರ ಗಡಿ ರೇಖೆಯ 2 ಕಿಲೋ ಮೀಟರ್ ಸುತ್ತಳತೆಯಲ್ಲಿ ಗುಂಡಿನ ದಾಳಿಯಾಗಲಿ, ಸ್ಫೋಟ ನಡೆಸುವಂತಿಲ್ಲ. ಹೀಗಾಗಿ ಭಾರತ, ಚೀನಾ ಯೋಧರು ಶಸ್ತ್ರಾಸ್ತ್ರ ಬಳಸದೇ ಮಲ್ಲಯುದ್ಧದ ತಂತ್ರಗಾರಿಕೆ ಬಳಸುತ್ತಾರೆ ಎಂದು ವರದಿ
ವಿಶ್ಲೇಷಿಸಿದೆ.