ಕೀವ್/ ಹೊಸದಿಲ್ಲಿ: ಉಕ್ರೇನ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಶನಿವಾರ ಹೊಸ ಹೇಳಿಕೆಯನ್ನು ಬಿಡುಗಡೆ ಮಾಡಿದ್ದು, ಯುದ್ಧ ಪೀಡಿತ ಉಕ್ರೇನ್‌ನಲ್ಲಿರುವ ಭಾರತೀಯ ಪ್ರಜೆಗಳಿಗೆ ಭಾರತೀಯ ಸರ್ಕಾರಿ ಅಧಿಕಾರಿಗಳ ಸೂಚನೆಯಿಲ್ಲದೆ ಯಾವುದೇ ಗಡಿ ಪೋಸ್ಟ್‌ಗಳಿಗೆ ತೆರಳದಂತೆ ಸಲಹೆ ನೀಡಿದೆ.
ಉಕ್ರೇನ್ ಪ್ರಸ್ತುತ ರಷ್ಯಾದ ಸೇನಾ ಪಡೆಗಳಿಂದ ಆಕ್ರಮಣಕ್ಕೆ ಒಳಗಾಗಿದೆ. ಉಕ್ರೇನ್ ನ ರಾಜಧಾನಿ ಕೀವ್ ನಲ್ಲಿ ಪ್ರತಿ ಕೆಲವು ನಿಮಿಷಗಳಿಗೊಮ್ಮೆ ಡಜನ್‌ಗಟ್ಟಲೆ ಸ್ಫೋಟಗಳು ಕೇಳಿಬರುತ್ತಿವೆ ಎಂದು ವರದಿಯಾಗಿದೆ.
ಈ ಗೊಂದಲದ ಮಧ್ಯೆ, ಉಕ್ರೇನ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಹೇಳಿಕೆಯೊಂದು ಬಿಡುಗಡೆ ಮಾಡಿದೆ. ಉಕ್ರೇನ್‌ನಲ್ಲಿರುವ ಎಲ್ಲಾ ಭಾರತೀಯ ನಾಗರಿಕರು ಗಡಿ ಪೋಸ್ಟ್‌ಗಳಲ್ಲಿ ಭಾರತ ಸರ್ಕಾರದ ಅಧಿಕಾರಿಗಳೊಂದಿಗೆ ಪೂರ್ವ ಸಮನ್ವಯವಿಲ್ಲದೆ ಯಾವುದೇ ಗಡಿ ಪೋಸ್ಟ್‌ಗಳಿಗೆ ತೆರಳದಂತೆ ಸೂಚಿಸಲಾಗಿದೆ.
ಇದನ್ನೂ ಓದಿ:ಉಕ್ರೇನ್ ಮೇಲೆ ರಷ್ಯಾ ದಾಳಿ: ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಮತದಾನದಿಂದ ದೂರವುಳಿದ ಭಾರತ
ರಾಯಭಾರ ಕಚೇರಿಯು ತನ್ನ ಇತ್ತೀಚಿನ ಹೇಳಿಕೆಯಲ್ಲಿ, “ವಿವಿಧ ಗಡಿ ಚೆಕ್ ಪೋಸ್ಟ್‌ಗಳಲ್ಲಿನ ಪರಿಸ್ಥಿತಿಯು ಸೂಕ್ಷ್ಮವಾಗಿದೆ ಮತ್ತು ರಾಯಭಾರ ಕಚೇರಿಯು ನಮ್ಮ ನೆರೆಯ ದೇಶಗಳಲ್ಲಿನ ರಾಯಭಾರ ಕಚೇರಿಗಳೊಂದಿಗೆ ನಮ್ಮ ನಾಗರಿಕರನ್ನು ಸಂಘಟಿತ ಸ್ಥಳಾಂತರಿಸಲು ನಿರಂತರವಾಗಿ ಕೆಲಸ ಮಾಡುತ್ತಿದೆ” ಎಂದು ಹೇಳಿದೆ.
ಪೂರ್ವ ಸೂಚನೆಯಿಲ್ಲದೆ ಗಡಿ ಚೆಕ್ ಪೋಸ್ಟ್‌ಗಳನ್ನು ತಲುಪುವ ಭಾರತೀಯ ಪ್ರಜೆಗಳನ್ನು ದಾಟಲು ಸಹಾಯ ಮಾಡುವುದು ಹೆಚ್ಚು ಕಷ್ಟಕರವಾಗಿದೆ” ಎಂದು ರಾಯಭಾರ ಕಚೇರಿಯು ಹೇಳಿದೆ.
ಗಡಿ ಚೆಕ್ ಪೋಸ್ಟ್ ಗಳನ್ನು ತಲುಪುವುದಕ್ಕೆ ಹೋಲಿಸಿದರೆ ಉಕ್ರೇನ್ ನ ಪಶ್ಚಿಮ ನಗರಗಳಲ್ಲಿ ಉಳಿಯುವುದು ಹೆಚ್ಚು ಸುರಕ್ಷಿತವಾಗಿದೆ ಎಂದು ಅಧಿಕೃತ ಹೇಳಿಕೆ ತಿಳಿಸಿದೆ.