Advertisement

UV Fusion: ಸುಜ್ಞಾನದಲ್ಲಿ ವಿಜ್ಞಾನವನ್ನು ಅಳವಡಿಸಿಕೊಂಡ ಭಾರತ

03:12 PM Feb 26, 2024 | Team Udayavani |

ಭಾರತವು ಶತ – ಶತಮಾನಗಳ ಹಿಂದೆಯೇ ವೈದ್ಯಕೀಯ ಲೋಕದಲ್ಲಿ ಬಹಳಷ್ಟು ಮುಂದುವರೆದಿರುವುದನ್ನು ಕಂಡಿದ್ದೇವೆ.

Advertisement

ಭಾರತದಲ್ಲಿನ ಅರಣ್ಯ ಪ್ರದೇಶದ ಸಮೃದ್ಧತೆ ಕುರಿತು ನಾವು ಮನಗಂಡಿದ್ದೇವೆ. ಸಹಸ್ರಾರು ವರ್ಷಗಳ ಹಿಂದೆಯೇ ಭಾರತ ಆಯುರ್ವೇದ ಔಷಧಗಳನ್ನು ತಯಾರಿಸಿ ಪ್ರಪಂಚದಲದಲ್ಲೇ ತನ್ನ ಸಾಮರ್ಥ್ಯದ ರುಚಿಯನ್ನು ಉಣಬಡಿಸಿತ್ತು.

ಸುಜ್ಞಾನದಲ್ಲಿ ವಿಜ್ಞಾನವನ್ನು ಅಳವಡಿಸಿಕೊಂಡ ಭಾರತ ಪ್ರತಿಯೊಂದರಲ್ಲೂ ವೈಜ್ಞಾನಿಕ ಮನೋಭಾವನೆಯನ್ನು ಅಳವಡಿಸಿಕೊಂಡು ಆಯುರ್ವೇದದ ಪಿತಾಮಹ ಎಂದೆನಿಸಿಕೊಂಡಿರುವ ರಾಷ್ಟ್ರವೆನಿಸಿ ಕೊಂಡಿದೆ. ಗರಿಕೆಯಂತಹ ಸಣ್ಣ ಹುಲ್ಲು ಗಳಿಂದ ಹಿಡಿದು ಅಶ್ವತ್ಥ ದಂತಹ ಬೃಹದಾಕಾರದ ಮರಗಳ ವರೆಗೆ ಎಲ್ಲದರಲ್ಲೂ ಔಷಧೀಯ ಗುಣಗಳನ್ನು ಕಂಡು ಹಿಡಿದು ವಿಷಪೂರಿತ ದೇಶದಲ್ಲಿಯೂ ಅಮೃತಮಹಿ ಸ್ವರೂಪದಂತೆ ಆಹ್ಲಾದವನ್ನು ನೀಡುವ ಶ್ರೀಮಂತಿಕೆ ಭಾರತೀಯ ಆಯುರ್ವೇದ ಪದ್ಧತಿಗಿವೆ.

ಶೀತ ದಂತಹ ಸಣ್ಣ ಕಾಯಿಲೆಯಿಂದ ಹಿಡಿದು ಕ್ಯಾನ್ಸರ್‌ನಂತಹ ಮಾರಕ ರೋಗಗಳನ್ನು ಸುಧಾರಿಸುವ ಶಕ್ತಿ ಭಾರತದ ಆಯುರ್ವೇದ ಪದ್ಧತಿಗಿದೆ. ಇಲ್ಲಿನ ಗಿಡ ಮೂಲಿಕೆಗಳು ಧನ್ವಂತರಿ ಸ್ವರೂಪಿ ಔಷಧ ಗುಣಗಳನ್ನು ಹೊಂದಿದೆ.

ಪ್ರಾಚೀನ ಕಾಲದಲ್ಲಿ ಪಾಶ್ಚಾತ್ಯರ ವೈದ್ಯಕೀಯ ಪದ್ಧತಿ ಹುಟ್ಟದೆ ಇರುವ ಸಂದರ್ಭದಲ್ಲಿಯೂ ಸಹ ಭಾರತದ ಆಯುರ್ವೇದ ಸಮೃದ್ಧತೆ ಪ್ರಪಂಚದಾದ್ಯಂತ ಪಸರಿಸಿತ್ತು. ವಿಶ್ವ ವಿದ್ಯಾಲಯ ಗಳಲ್ಲಿಯೂ ಇದು ಒಂದು ಕಲಿಯುವ ವಿಷಯವಾಗಿ ಜನಪ್ರಿಯವಾಗಿತ್ತು.ಇಂದಿಗೂ ಸಹಿತ ಎಷ್ಟೋ ಜನರು ಇದರ ಸದುಪಯೋಗ ಪಡೆದುಕೊಂಡು ಜೀವಿಸುತ್ತಿದ್ದಾರೆ. ಸರ್ವ ರೋಗಕ್ಕೂ ಪರಿಹಾರ ಇರುವುದು ಭಾರತದ ಆಯುರ್ವೇದ ಪದ್ಧತಿಗೆ  ಎಂದರೆ ಶೋಚನೀಯವಾಗಲಾರದು.

Advertisement

ಪ್ರಸ್ತುತ ಅದೆಷ್ಟೋ ಗಿಡಮೂಲಿಕೆಗಳು ಕಣ್ಮರೆಯಾಗುತ್ತಿದೆ. ಪಾಶ್ಚಿಮಾತ್ಯರ ಅಂದಾನುಕರಣೆಯಿಂದ ನಮ್ಮ ಶ್ರೀಮಂತಿಕೆಯನ್ನು ಮೆರೆಯುತ್ತಿದ್ದೇವೆ..ಆಯುರ್ವೇದ ಪದ್ಧತಿ ಹೇಳುವಂತೆ ಆಹಾರ ಕ್ರಮ ಅನುಸರಿಸಿದರೆ ರೋಗ ಮುಕ್ತ ಜೀವನ ನಡೆಸಬಹುದು.

-ಅಕ್ಷಯ್‌ ಭಟ್ಟ

ಎಂಇಎಸ್‌ ಮಹಾವಿದ್ಯಾಲಯ ಶಿರಸಿ

Advertisement

Udayavani is now on Telegram. Click here to join our channel and stay updated with the latest news.

Next