Advertisement

ಯುಎನ್‌ಎಚ್‌ಆರ್‌ಸಿ ಸಭೆಗೂ ಭಾರತ ಗೈರು

11:46 PM Mar 04, 2022 | Team Udayavani |

ಕೀವ್‌: ಸ್ವಿಟ್ಸರ್ಲೆಂಡ್‌ನ‌ ಜಿನೇವಾದಲ್ಲಿ ಶುಕ್ರವಾರ ನಡೆದ ವಿಶ್ವ ಸಂಸ್ಥೆಯ ಮಾನವ ಹಕ್ಕುಗಳ ಮಂಡಳಿ ಸಭೆಗೂ ಭಾರತ ಗೈರಾಗಿದೆ.

Advertisement

ರಷ್ಯಾ ದಾಳಿಯಿಂದ ಉಕ್ರೇನ್‌ನಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ಯಾಗಿದೆ ಎಂಬ ಆರೋಪಗಳ ಬಗ್ಗೆ ಅಂತಾರಾಷ್ಟ್ರೀಯ ಸಮಿತಿಯಿಂದ ಸ್ವತಂತ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಲು 47 ಸದಸ್ಯರ ಮಂಡಳಿ ಸಭೆ ಸೇರಿತ್ತು.

ಯುದ್ಧ ಪೀಡಿತ ರಾಷ್ಟ್ರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆ ವರದಿ ಮತ್ತು ಅಲ್ಲಿನ ಪರಿಸ್ಥಿತಿಯ ಬಗೆಗಿನ ಕರಡು ನಿರ್ಣಯವನ್ನು 32 ಮತಗಳಿಂದ ಅಂಗೀಕರಿಸಲಾಗಿದೆ. ನಿರ್ಣಯದ ವಿರುದ್ಧ 2 ಮತಗಳು ಚಲಾವಣೆಯಾಗಿವೆ.

“ಇಲ್ಲೇ ಸೀಟು ಕೊಡಿ’
ಉಕ್ರೇನ್‌ನಿಂದ ಭಾರತಕ್ಕೆ ಮರಳಿರುವ ವೈದ್ಯಕೀಯ ವಿದ್ಯಾ ರ್ಥಿಗಳಿಗೆ ಭಾರತದಲ್ಲಿರುವ ವೈದ್ಯಕೀಯ ಕಾಲೇಜುಗಳಲ್ಲೇ ಸೀಟು ನೀಡಬೇಕೆಂದು ಭಾರತೀಯ ವೈದ್ಯಕೀಯ ಸಂಸ್ಥೆ ಪ್ರಧಾನಿ ಮೋದಿಯವರಿಗೆ ಮನವಿ ಸಲ್ಲಿಸಿದೆ.

“ಉಕ್ರೇನ್‌ನಿಂದ ಬಂದಿರುವ ವೈದ್ಯ ವಿದ್ಯಾರ್ಥಿಗಳು ತಮ್ಮ ಉಳಿದ ವೈದ್ಯ ಕೋರ್ಸ್‌ಗಳನ್ನು ಭಾರತದಲ್ಲೇ ಪೂರ್ತಿ ಗೊಳಿಸಲು ಅವಕಾಶ ಕಲ್ಪಿಸಬೇಕು ಎಂದು ಕೋರಿದೆ.

Advertisement

 

Advertisement

Udayavani is now on Telegram. Click here to join our channel and stay updated with the latest news.

Next