ವಿಜಯವಾಡ: ಸಿ.ಎಚ್. ಜಾನ್ಸಿ ಲಕ್ಷ್ಮಿ (64) ಮತ್ತು ಯಾಸ್ತಿಕಾ ಭಾಟಿಯಾ (86) ಅವರ ಅಮೋಘ ಬ್ಯಾಟಿಂಗ್ ಸಾಹಸದಿಂದ ಇಂಡಿಯಾ “ಎ’ ತಂಡ ಬಿಸಿಸಿಐ ಸೀನಿಯರ್ ವನಿತಾ ಚಾಲೆಂಜರ್ ಸರಣಿಯ ಚಾಂಪಿಯನ್ ಆಗಿ ಮೂಡಿಬಂದಿದೆ.
ಗುರುವಾರ ಇಲ್ಲಿ ನಡೆದ ಫೈನಲ್‌ನಲ್ಲಿ ಇಂಡಿಯಾ “ಎ’ ತಂಡ 3 ವಿಕೆಟ್‌ಗಳಿಂದ ಇಂಡಿಯಾ “ಡಿ’ ತಂಡವನ್ನು ಮಣಿಸಿತು.
ಮೊದಲು ಬ್ಯಾಟಿಂಗ್ ನಡೆಸಿದ ಇಂಡಿಯಾ “ಡಿ’ 8 ವಿಕೆಟಿಗೆ 219 ರನ್ ಗಳಿಸಿದರೆ, ಇಂಡಿಯಾ “ಎ’ 45.4 ಓವರ್‌ಗಳಲ್ಲಿ 7 ವಿಕೆಟಿಗೆ 224 ರನ್ ಬಾರಿಸಿತು. ಚೇಸಿಂಗ್ ವೇಳೆ ಯಾಸ್ತಿಕಾ ಭಾಟಿಯಾ 86 ರನ್ (102 ಎಸೆತ, 10 ಬೌಂಡರಿ, 1 ಸಿಕ್ಸರ್) ಹಾಗೂ ಜಾನ್ಸಿ ರಾಣಿ 64 ರನ್ (70 ಎಸೆತ, 9 ಬೌಂಡರಿ) ಹೊಡೆದರು.
7ನೇ ಓವರ್‌ನಲ್ಲಿ ಆಫ್ ಸ್ಪಿನ್ನರ್ ಕೀರ್ತಿ ಜೇಮ್ಸ್ ಅವಳಿ ವಿಕೆಟ್ ಉಡಾಯಿಸಿದ ಬಳಿಕ ಇನ್ನಿಂಗ್ಸ್ ಕಟ್ಟತೊಡಗಿದ ಜಾನ್ಸಿ-ಯಾಸ್ತಿಕಾ 3ನೇ ವಿಕೆಟಿಗೆ 95 ರನ್ ಪೇರಿಸಿದರು.
ಸಂಕ್ಷಿಪ್ತ ಸ್ಕೋರ್: ಇಂಡಿಯಾ “ಡಿ’-8 ವಿಕೆಟಿಗೆ 219 (ಎಸ್, ಮೇಘನಾ 45, ಅಮನ್‌ಜೋತ್ ಕೌರ್ ಔಟಾಗದೆ 55, ದಿಶಾ ಕೆ. 39ಕ್ಕೆ 3). ಇಂಡಿಯಾ “ಎ’-45.4 ಓವರ್‌ಗಳಲ್ಲಿ 7 ವಿಕೆಟಿಗೆ 224 (ಯಾಸ್ತಿಕಾ 86, ಜಾನ್ಸಿ ಲಕ್ಷ್ಮಿ64, ರಾಜೇಶ್ವರಿ ಗಾಯಕ್ವಾಡ್ 36ಕ್ಕೆ 4).