Advertisement

ಅನಧಿಕೃತ ಟೆಸ್ಟ್‌: ದ. ಆಫ್ರಿಕಾಕ್ಕೆ ಗೆಲುವು

10:25 AM Aug 17, 2017 | |

ಪ್ರಿಟೋರಿಯ: ಪ್ರವಾಸಿ “ಎ’ ಭಾರತ ತಂಡದೆದುರು ನಡೆದ ನಾಲ್ಕು ದಿನಗಳ ಅನಧಿಕೃತ ಟೆಸ್ಟ್‌ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ “ಎ’ ತಂಡವು 235 ರನ್ನುಗಳಿಂದ ಭರ್ಜರಿ ಗೆಲುವು ದಾಖಲಿಸಿದೆ.

Advertisement

ಗೆಲ್ಲಲು 447 ರನ್‌ ಗಳಿಸುವ ಕಠಿನ ಗುರಿ ಪಡೆದ ಭಾರತ “ಎ’ ತಂಡವು ಜೂನಿಯರ್‌ ಡಾಲ ಅವರ ದಾಳಿಗೆ ತತ್ತರಿಸಿ 52.1 ಓವರ್‌ಗಳಲ್ಲಿ 211 ರನ್ನಿಗೆ ಆಲೌಟಾಗಿ ಸೋಲನ್ನು ಒಪ್ಪಿಕೊಂಡಿತು. ಈ ಗೆಲುವಿನಿಂದ ದಕ್ಷಿಣ ಆಫ್ರಿಕಾ “ಎ’ ತಂಡವು ಎರಡು ಪಂದ್ಯಗಳ ಅನಧಿಕೃತ ಟೆಸ್ಟ್‌ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. 

ಟೆಸ್ಟ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ನಡೆಸಿದ್ದ ದಕ್ಷಿಣ ಆಫ್ರಿಕಾ “ಎ’ ತಂಡವು ಸ್ಟೀಫ‌ನ್‌ ಕುಕ್‌ ಅವರ ಶತಕದಿಂದಾಗಿ 346 ರನ್‌ ಗಳಿಸಿ ಆಲೌಟಾಯಿತು. ಕುಕ್‌ 252 ಎಸೆತ ಎದುರಿಸಿ 8 ಬೌಂಡರಿ ನೆರವಿನಿಂದ 120 ರನ್‌ ಗಳಿಸಿದ್ದರೆ ಡೇವಿಡ್‌ ಮಿಲ್ಲರ್‌ 115 ಎಸೆತ ಎದುರಿಸಿ 78 ರನ್‌ ಹೊಡೆದರು. ಬಿಗು ದಾಳಿ ಸಂಘಟಿಸಿದ ಮೊಹಮ್ಮದ್‌ ಸಿರಾಜ್‌ 61 ರನ್ನಿಗೆ 4 ವಿಕೆಟ್‌ ಕಿತ್ತರೆ ಶಾದಾಬ್‌ ನದೀಮ್‌ 117 ರನ್ನಿಗೆ 4 ವಿಕೆಟ್‌ ಉರುಳಿಸಿದರು.

ಆರಂಭದಲ್ಲಿಯೇ ಕುಸಿತಕ್ಕೆ ಒಳಗಾದ ಭಾರತ “ಎ’ ತಂಡ ಆತಿಥೇಯ ತಂಡದ ದಾಳಿಗೆ ಉತ್ತರಿಸಲು ವಿಫ‌ಲವಾಯಿತು. ಆಗಾಗ್ಗೆ ವಿಕೆಟ್‌ ಕಳೆದುಕೊಂಡ ಭಾರತ “ಎ’ ಕೇವಲ 39 ಓವರ್‌ಗಳಲ್ಲಿ 120 ರನ್ನಿಗೆ ಆಲೌಟಾಯಿತು. 31 ರನ್‌ ಗಳಿಸಿದ ಶ್ರೇಯಸ್‌ ಅಯ್ಯರ್‌ ತಂಡದ ಗರಿಷ್ಠ ಸ್ಕೋರರ್‌ ಎನಿಸಿಕೊಂಡರು.

226 ರನ್‌ ಮೊದಲ ಇನ್ನಿಂಗ್ಸ್‌ ಮುನ್ನಡೆ ಪಡೆದ ದಕ್ಷಿಣ ಆಫ್ರಿಕಾ “ಎ’ ತಂಡ ತನ್ನ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಮತ್ತೆ ಬ್ಯಾಟಿಂಗ್‌ನಲ್ಲಿ ಮಿಂಚಿ 5 ವಿಕೆಟಿಗೆ 220 ರನ್‌ ಗಳಿಸಿ ಇನ್ನಿಂಗ್ಸ್‌ ಡಿಕ್ಲೇರ್‌ ಮಾಡಿಕೊಂಡಿತು. ಗೆಲ್ಲಲು 447 ರನ್‌ ಗಳಿಸುವ ಗುರಿ ಪಡೆದ ಭಾರತ “ಎ’ ದ್ವಿತೀಯ ಇನ್ನಿಂಗ್ಸ್‌ನಲ್ಲೂ ಬ್ಯಾಟಿಂಗ್‌ ಕುಸಿತಕ್ಕೆ ಒಳಗಾಯಿತು. ಕರುಣ್‌ ನಾಯರ್‌, ಅಂಕಿತ್‌ ಭಾವೆ°, ಇಶನ್‌ ಕಿಶನ್‌ ಮತ್ತು ಶಾದಾಬ್‌ ನದೀಮ್‌ ಸ್ವಲ್ಪಮಟ್ಟಿಗೆ ಹೋರಾಟದ ಬ್ಯಾಟಿಂಗ್‌ ಪ್ರದರ್ಶಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next