Advertisement

India; ವನ್ಯಜೀವಿಗಳ ಸಂಖ್ಯೆ 50 ವರ್ಷದಲ್ಲಿ 73% ಕುಸಿತ!

01:49 AM Oct 11, 2024 | Team Udayavani |

ಹೊಸದಿಲ್ಲಿ: 1970ರಿಂದ 2020ರವರೆಗೆ ಅಂದರೆ 50 ವರ್ಷಗಳಲ್ಲಿ ಆವಾಸಸ್ಥಾನದ ನಷ್ಟ, ಹವಾಮಾನ ಬದಲಾವಣೆ ಮತ್ತು ಮಾಲಿನ್ಯದಿಂದಾಗಿ “ಕಣ್ಗಾವಲಿನಲ್ಲಿರುವ ವನ್ಯಜೀವಿ’ಗಳ ಸಂಖ್ಯೆ ಶೇ.73ರಷ್ಟು ಕುಸಿದಿದೆ ಎಂದು ವರ್ಲ್ಡ್ ವೈಡ್‌ ಫಂಡ್ ಫಾರ್‌ ನೇಚರ್‌(ಡಬ್ಲ್ಯುಡಬ್ಲ್ಯುಎಫ್)ನ ವರದಿಯೊಂದು ತಿಳಿಸಿದೆ.

Advertisement

ಲಿವಿಂಗ್‌ ಪ್ಲಾನೆಟ್‌ ರಿಪೋರ್ಟ್‌-­2024 ವರದಿಯು, 3 ತಳಿಯ ರಣಹದ್ದುಗಳ ಕುಸಿತದ ಬಗ್ಗೆ ಮಾಹಿತಿ ನೀಡಿದೆ. ಆದರೆ ಹುಲಿಗಳಂತಹ ಕೆಲವು ಪ್ರಭೇದಗಳ ಸಂಖ್ಯೆ ಚೇತರಿಕೆ ಕಾಣುತ್ತಿದೆ. ಇದಕ್ಕೆ ಸರಕಾರಗಳ ವನ್ಯಜೀವಿ ನೀತಿಗಳು ಕಾರಣ ಎಂದಿದೆ. ಜಾಗತಿಕವಾಗಿ ಸಿಹಿ ನೀರು ಪರಿಸರ, ಭೂ ಪರಿಸರ, ಸಮುದ್ರ ಪರಿಸರ ವ್ಯವಸ್ಥೆಗಳಲ್ಲಿ ವನ್ಯಜೀವಿ ಸಂಖ್ಯೆ ಕ್ರಮವಾಗಿ 85, 69 ಮತ್ತು 56 ಪ್ರತಿಶತ ಕುಸಿದಿದೆ. ವಿಶ್ವಾದ್ಯಂತ ವನ್ಯಜೀವಿ ಸಂಖ್ಯೆ ಇಳಿಕೆಗೆ ಆವಾಸಸ್ಥಾನದ ನಷ್ಟ ಮುಖ್ಯ ಕಾರ­ಣವಾಗಿದ್ದು, ಬಳಿಕ ಅತಿಯಾದ ನೈಸರ್ಗಿಕ ಸಂಪನ್ಮೂಲಗಳ ಬಳಕೆ, ಆಕ್ರ ಮಣಕಾರಿ ಪ್ರಭೇದಗಳು, ಕಾಯಿಲೆಗಳು ಕಾರಣವಾಗಿವೆ. ಅಲ್ಲದೇ ಚೆನ್ನೈ ಜೌಗು ಪ್ರದೇಶಗಳ ಪ್ರಮಾಣ ಕಡಿಮೆ, ನಿರಂತರ ವಾಗಿ ಪ್ರವಾಹಕ್ಕೆ ತುತ್ತಾಗುತ್ತಿರುವುದನ್ನು ಉಲ್ಲೇಖಿಸಿ ಹವಾಮಾನ ಬದಲಾವಣೆ ಜತೆ ತಳುಕು ಹಾಕಿದ ಪರಿಸರ ನಾಶದಿಂದ ಹೆಚ್ಚು ಹಾನಿಯಾಗಲಿದೆ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next