Advertisement

India;ಏಷ್ಯಾ-ಪೆಸಿಫಿಕ್‌ ವಲಯದಲ್ಲಿ 3ನೇ ಶಕ್ತಿಶಾಲಿ ದೇಶ

01:19 AM Sep 28, 2024 | Team Udayavani |

ಹೊಸದಿಲ್ಲಿ: ಏಷ್ಯಾ- ಪೆಸಿಫಿಕ್‌ ವಲಯದಲ್ಲಿ ಭಾರತ 3ನೇ ಶಕ್ತಿಶಾಲಿ ರಾಷ್ಟ್ರವಾಗಿ ಗುರುತಿಸಿಕೊಂಡಿದೆ. 39.1 ಅಂಕ ಪಡೆದುಕೊಳ್ಳುವ ಮೂಲಕ ಜಪಾನನ್ನು ಹಿಂದಿಕ್ಕಿ 3ನೇ ಸ್ಥಾನಕ್ಕೇರಿದೆ.

Advertisement

ಆಸ್ಟ್ರೇಲಿಯಾದ ಲೋವಿ ಇನ್‌ಸ್ಟಿಟ್ಯೂಟ್‌ ಏಷ್ಯಾ ಪವರ್‌ ಇಂಡೆಕ್ಸ್‌ ವರದಿ ಸಿದ್ಧಪಡಿಸಿ, ಬಿಡುಗಡೆ ಮಾಡಿದೆ. ಭಾರತದಲ್ಲಿ ಅಧಿಕಾರದಲ್ಲಿನ ಶಿಸ್ತು, ಯುವ ಜನಸಂಖ್ಯೆ, ಆರ್ಥಿಕ ಅಭಿವೃದ್ಧಿಗಳು ಭಾರತದ ಸ್ಥಾನ ಮೇಲೇರಲು ಕಾರಣವಾಗಿವೆ. ಭಾರ ತದ ಸ್ಥಾನದಲ್ಲಿ ಏರಿಕೆ ಯಾಗಿ ರುವುದು ಏಷ್ಯಾ ಪೆಸಿಫಿಕ್‌ ವಲಯದಲ್ಲಿ ದೇಶದ ಪ್ರಭಾವವನ್ನು ಹೆಚ್ಚಳ ಮಾಡಿದೆ ಎಂದು ಕೇಂದ್ರ ಸರಕಾರ ಹೇಳಿದೆ.

81.7 ಅಂಕ ಪಡೆದುಕೊಂಡಿರುವ ಅಮೆರಿಕ ಮೊದಲ ಸ್ಥಾನದಲ್ಲೇ ಮುಂದುವರಿದಿದೆ. 72.2 ಅಂಕ ದೊಂ ದಿಗೆ ಚೀನ 2ನೇ ಸ್ಥಾನದಲ್ಲಿದ್ದು, ಜಪಾನ್‌ (38.9) 4ನೇ ಸ್ಥಾನದಲ್ಲಿದೆ.

70ಕ್ಕಿಂತ ಹೆಚ್ಚು ಅಂಕ ಹೊಂದಿರುವ ದೇಶಗಳನ್ನು ಸೂಪರ್‌ ಪವರ್‌ ಎಂದು ಗುರುತಿಸಲಾಗುತ್ತದೆ. 10ಕ್ಕಿಂತ ಹೆಚ್ಚು ಅಂಕ ಹೊಂದಿದ್ದರೆ ಅದನ್ನು ಮಧ್ಯಮ ಶಕ್ತಿಶಾಲಿ ರಾಷ್ಟ್ರ ಎಂದು ಗುರುತಿ ಸಲಾಗುತ್ತದೆ. 10ಕ್ಕಿಂತ ಕಡಿಮೆ ಅಂಕ ಇರುವ ರಾಷ್ಟ್ರಗಳು ಕಡಿಮೆ ಶಕ್ತಿಯ ರಾಷ್ಟ್ರಗಳು ಎನಿಸಿಕೊಳ್ಳಲಿವೆ.

Advertisement

Udayavani is now on Telegram. Click here to join our channel and stay updated with the latest news.

Next