ಶಿವಮೊಗ್ಗ: ಇದೇ ತಿಂಗಳು 23 ರ ನಂತರ ಕರ್ನಾಟಕದಲ್ಲಿ ದೊಡ್ಡ ರಾಜಕೀಯ ಸ್ಫೊಧೀಟ ಸಂಭವಿಸಲಿದೆ ಎಂದು ಶಾಸಕ ಕೆ.ಎಸ್. ಈಶ್ವರಪ್ಪ ಭವಿಷ್ಯ ನುಡಿದಿದ್ದಾರೆ.
ಬಿಜೆಪಿಯ 104 ಸ್ಥಾನಗಳ ಜೊತೆಗೆ ಇಬ್ಬರು ಪಕ್ಷೇತರರ ಬೆಂಬಲ ಹಾಗೂ ಉಪ ಚುನಾವಣೆಯಲ್ಲಿ ಎರಡು ಸ್ಥಾನ ಪಡೆದು ಬಿಜೆಪಿ ಬಲ 108 ಕ್ಕೆ ಏರಿಕೆ ಆಗಲಿದೆ. ಬಾಕಿ ಉಳಿದಿರುವ ಐದಾರು ಸ್ಥಾನಗಳಿಗೆ ಕಾಂಗ್ರೆಸ್ ಜೊತೆಗೆ ಉಳಿಯಲ್ಲ ಎಂದಿರುವ ರಮೇಶ್ ಜಾರಕಿಹೊಳಿ ಆ್ಯಂಡ್ ಟೀಮ್ ಸೇರಿ ಬಿಜೆಪಿ ಸರ್ಕಾರ ರಚನೆ ಆಗುವುದು ಗ್ಯಾರಂಟಿ ಎಂದರು.
ಕಾಂಗ್ರೆಸ್ ಮತ್ತು ಜೆಡಿಎಸ್‌ನ ಭಿನ್ನಮತದ ಕಾರಣ ಹಾಗೂ ಬಿಜೆಪಿ ಏಕಶಿಲೆಯಂತೆ ಗಟ್ಟಿಯಾಗಿ ನಿಂತ ಕಾರಣದಿಂದ ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರ ರಚನೆಯತ್ತ ಪ್ರಯತ್ನ ನಡೆಸಲಿದ್ದೇವೆ. ಇದೇ 5 ರಂದು ಕುಂದಗೋಳ ವಿಧಾನಸಭಾ ಕ್ಷೇತ್ರದಲ್ಲಿ 268 ಬೂತ್ ಪದಾಧಿಕಾರಿಗಳ ಸಮಾವೇಶ ನಡೆಸಲಾಗುವುದು ಎಂದರು.
ಚಿಂಚೋಳಿ ವಿಧಾನಸಭಾ ಕ್ಷೇತ್ರದಲ್ಲಿ ಉಮೇಶ್ ಜಾಧವ್ ಅವರ ವೈಯಕ್ತಿಕ ವರ್ಚಸ್ಸು ಹಾಗೂ ಬಿಜೆಪಿಯ ಶಕ್ತಿ ಒಗ್ಗೂಡಿ ಗೆಲುವು ಸಾಧಿಸಲಾಗುವುದು. ಚಿಂಚೋಳಿಯಲ್ಲಿ ಕಾಂಗ್ರೆಸ್‌ಗೆ ಅಭ್ಯರ್ಥಿಗಳೇ ಸಿಗದೆ ಕೊನೆಕ್ಷಣದಲ್ಲಿ ಬಿಜೆಪಿ ಕಾರ್ಯಕರ್ತನನ್ನೇ ಕಣಕ್ಕಿಳಿಸಿದೆ ಎಂದು ಲೇವಡಿ ಮಾಡಿದರು.
Advertisement
ಶುಕ್ರವಾರ ಸುದ್ದಿಗಾರಜತೆ ಮಾತನಾಡಿದ ಅವರು, ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ ಎರಡೂ ಸ್ಥಾನಗಳಲ್ಲಿ ಜಯ ಗಳಿಸಿ ತನ್ನ ಬಲ ಹೆಚ್ಚಿಸಿಕೊಳ್ಳಲಿದೆ ಎಂದರು.
Related Articles
Advertisement