Advertisement

ಸ್ವತಂತ್ರ ಭಾರತದ ಮೊದಲ ಮತದಾರ ಶ್ಯಾಮ್ ಸರಣ್ ನೇಗಿ ಇನ್ನಿಲ್ಲ

10:12 AM Nov 05, 2022 | Team Udayavani |

ಹಿಮಾಚಲ ಪ್ರದೇಶ : ಸ್ವತಂತ್ರ ಭಾರತದ ಮೊದಲ ಮತದಾರ ಶ್ಯಾಮ್ ಸರಣ್ ನೇಗಿ ಅವರು ತಮ್ಮ 106 ನೇ ವಯಸ್ಸಿನಲ್ಲಿ ಶನಿವಾರ ಮುಂಜಾನೆ ನಿಧನರಾದರು.

Advertisement

ಶ್ಯಾಮ್ ಶರಣ್ ನೇಗಿ ಹಿಮಾಚಲ ಪ್ರದೇಶದ ಕಿನ್ನೌರ್ ಜಿಲ್ಲೆಯವರಾಗಿದ್ದು, ಇತ್ತೀಚೆಗೆ ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಗೆ ಅಂಚೆ ಮತದಾನದ ಮೂಲಕ ಮತ ಚಲಾಯಿಸಿದ್ದರು.

ನವೆಂಬರ್ 12 ರಂದು ಹಿಮಾಚಲ ಪ್ರದೇಶದ ಎಲ್ಲಾ 68 ಸ್ಥಾನಗಳ ವಿಧಾನಸಭಾ ಚುನಾವಣೆಗೆ ಮತದಾನ ನಡೆಯಲಿರುವ ಮೊದಲು, ಶ್ಯಾಮ್ ಸರನ್ ನೇಗಿ ನಿಧನರಾದರು ಎಂಬುದು ಗಮನಿಸಬೇಕಾದ ಸಂಗತಿ.

106 ವರ್ಷದ ಶ್ಯಾಮ್ ಸರನ್ ನೇಗಿ ಬಹಳ ದಿನಗಳಿಂದ ಅಸ್ವಸ್ಥರಾಗಿದ್ದರು ಕುಟುಂಬ ಮೂಲಗಳು ತಿಳಿಸಿದೆ. ಶ್ಯಾಮ್ ಸರನ್ ಅವರ ಅಂತಿಮ ಸಂಸ್ಕಾರಕ್ಕೆ ಜಿಲ್ಲಾಡಳಿತ ಸಿದ್ಧತೆ ನಡೆಸುತ್ತಿದ್ದು, ಗೌರವಪೂರ್ವಕವಾಗಿ ಅಂತಿಮ ದರ್ಶನ ಪಡೆಯಲು ಸಿದ್ಧತೆ ನಡೆಸಲಾಗಿದೆ ಎಂದು ತಿಳಿಸಿದ್ದಾರೆ.

ಜುಲೈ 1, 1917 ರಂದು ಜನಿಸಿದ ನೇಗಿ ಕಲ್ಪಾದಲ್ಲಿ ಶಾಲಾ ಶಿಕ್ಷಕರಾಗಿ ಕೆಲಸ ಮಾಡಿದರು. 1947 ರಲ್ಲಿ ಬ್ರಿಟಿಷ್ ಆಳ್ವಿಕೆಯ ಅಂತ್ಯದ ನಂತರ ಭಾರತವು 1951 ರಲ್ಲಿ ತನ್ನ ಮೊದಲ ಸಾರ್ವತ್ರಿಕ ಚುನಾವಣೆಗಳನ್ನು ನಡೆಸಿದಾಗ, ನೇಗಿ ಅವರು ಅಕ್ಟೋಬರ್ 25 ರಂದು ತಮ್ಮ ಮತವನ್ನು ಚಲಾಯಿಸಿದ ಮೊದಲ ವ್ಯಕ್ತಿಯಾಗಿದ್ದರು.

Advertisement

ಪ್ರಧಾನಿ ಸಂತಾಪ :
ಸ್ವತಂತ್ರ ಭಾರತದ ಮೊದಲ ಮತದಾರ ಎಂದೇ ಖ್ಯಾತರಾಗಿರುವ ಶ್ಯಾಮ್ ಸರಣ್ ನೇಗಿ ಅವರ ನಿಧನಕ್ಕೆ ಪ್ರಧಾನಿ ಮೋದಿ ಕೂಡ ಸಂತಾಪ ವ್ಯಕ್ತಪಡಿಸಿದ್ದಾರೆ. ಮತದಾನದ ಅರಿವು ಮೂಡಿಸಲು ಚುನಾವಣಾ ಆಯೋಗವು ಶ್ಯಾಮ್ ಸರನ್ ನೇಗಿ ಅವರನ್ನು ಬ್ರಾಂಡ್ ಅಂಬಾಸಿಡರ್ ಆಗಿಯೂ ಮಾಡಿರುವುದು ಉಲ್ಲೇಖಾರ್ಹ. ಶ್ಯಾಮ್ ಸರಣ್ ನೇಗಿ ಅವರು ಪ್ರಧಾನಿ ಮೋದಿಯವರ ಬೆಂಬಲಿಗರಾಗಿದ್ದರು ಮತ್ತು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಂದರ್ಶನವೊಂದರಲ್ಲಿ ಪ್ರಧಾನಿ ಅವರ ಕಾರ್ಯವನ್ನು ಮೆಚ್ಚಿದ್ದರು.

ಇದನ್ನೂ ಓದಿ : ಎಳನೀರಿನಿಂದ ಮಲವಂತಿಗೆಗೆ ವ್ಯಾಪಿಸಿದ ಅಡಿಕೆ ಎಲೆಚುಕ್ಕಿ, 15,000ಕ್ಕೂ ಅಧಿಕ ಗಿಡಕ್ಕೆ ಹಾನಿ

Advertisement

Udayavani is now on Telegram. Click here to join our channel and stay updated with the latest news.

Next