ಬೆಳಗಾವಿ: ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಅವರು ಎಂಟು ಐಷಾರಾಮಿ ಕಾರುಗಳು ಹಾಗೂ ಬಂಗಾರದ ಆಭರಣ ಹಾಗೂ ಅಪಾರ ಪ್ರಮಾಣದ ಚರಾಸ್ತಿಗಳ ಮೂಲಕ ಕೋಟಿಗಳ ಒಡೆಯರಾಗಿದ್ದಾರೆ.
ಲಖನ್ ಜಾರಕಿಹೊಳಿ ಹೆಸರಿನಲ್ಲಿ 71.34 ಲಕ್ಷ ರೂ. ಮೌಲ್ಯದ ವೋಲ್ವೋ ಎಕ್ಸ್ ಸಿ60 ಡಿ5 ಕಾರು, 96.80 ಲಕ್ಷ ರೂ. ಮೌಲ್ಯದ ವೋಲ್ವೋ ಎಕ್ಸ್ ಸಿ ಡಿ5 ಕಾರು ಸೇರಿ ಒಟ್ಟು ಎಂಟು ಐಷಾರಾಮಿ ಕಾರು ಇವೆ. 2.23 ಕೋಟಿ ರೂ. ಮೌಲ್ಯದ ಐದು ಕೆ.ಜಿ. ಬಂಗಾರ, 3.74 ಕೋಟಿ ರೂ. ಮೌಲ್ಯದ 8.3 ಕೆ.ಜಿ. ಬಂಗಾರದ ಆಭರಣ ಇದೆ. ಪತ್ನಿ ಸಂಧ್ಯಾ ಹೆಸರಿನಲ್ಲಿ 15 ಲಕ್ಷ ರೂ. ಮೌಲ್ಯದ ಬಂಗಾರ ಮತ್ತು ವಜ್ರದ ಆಭರಣ, 22.35 ಲಕ್ಷ ರೂ. ಮೌಲ್ಯದ ಬಂಗಾರದ ಆಭರಣ, ಮಗಳು ಐಶ್ವರ್ಯ, ಪುತ್ರರಾದ ಆದಿತ್ಯ ಮತ್ತು ಆರ್ಯ ಹೆಸರಿನಲ್ಲಿ ತಲಾ 8.94 ಲಕ್ಷ ರೂ. ಮೌಲ್ಯದ ಹೆಸರಿನಲ್ಲಿ ಬಂಗಾರದ ಆಭರಣ ಇದೆ.
ಲಖನ್ ಅವರ ಬಳಿ 14.95 ಲಕ್ಷ ರೂ. ನಗದು ಹಣ ಹಾಗೂ ಪತ್ನಿ ಬಳಿ 4.95 ಲಕ್ಷ ರೂ. ನಗದು ಹಣ ಇದೆ. ಪತ್ನಿ ಹೆಸರಲ್ಲಿ 5 ಲಕ್ಷ ರೂ. ಮಗಳ ಹೆಸರಿನಲ್ಲಿ 8.25 ಲಕ್ಷ ರೂ., ಆದಿತ್ಯನ ಹೆಸರಿನಲ್ಲಿ 15 ಲಕ್ಷ ರೂ. ಆರ್ಯನ ಹೆಸರಿನಲ್ಲಿ 12 ಲಕ್ಷ ರೂ. ವಿಮೆ ಇದೆ.
ಲಖನ್ ಜಾರಕಿಹೊಳಿ 12.84 ಕೋಟಿ ರೂ. ಮೌಲ್ಯದ ಚರಾಸ್ತಿ ಹೊಂದಿದ್ದರೆ, ಪತ್ನಿಯ ಹೆಸರಿನಲ್ಲಿ 1.45 ಕೋಟಿ ರೂ., ಮಗಳ ಹೆಸರಿನಲ್ಲಿ 29.3 ಲಕ್ಷ ರೂ., ಮಗ ಆದಿತ್ಯ 28.14 ಲಕ್ಷ ರೂ., ಆರ್ಯನ ಹೆಸರಿನಲ್ಲಿ 21.17 ಲಕ್ಷ ರೂ. ಮೌಲ್ಯದ ಚರಾಸ್ತಿ ಇದೆ.
ಲಖನ್ ಹೆಸರಿನಲ್ಲಿ 37.94 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಪತ್ನಿ ಹೆಸರಲ್ಲಿ 2.53 ಕೋಟಿ ರೂ. ಮೌಲ್ಯದ ಸ್ಥಿರಾಸ್ತಿ ಇದೆ. ಲಖನ ಹೆಸರಿನಲ್ಲಿ 1.48 ಕೋಟಿ ರೂ. ಸಾಲ ಇದ್ದರೆ, ಪತ್ನಿ ಹೆಸರಿನಲ್ಲಿ 2.50 ಕೋಟಿ ರೂ., ಮಗಳ ಹೆಸರಲ್ಲಿ 12.17 ಲಕ್ಷ ರೂ., ಮಗ ಆದಿತ್ಯಗೆ 18.61 ಲಕ್ಷ ರೂ. ಸಾಲವಿದೆ.