Advertisement

ನಮ್ಮ ಕಾಲಂ: ಕ್ಯಾಂಪಸ್‌ನಲ್ಲಿ ಸ್ವಾತಂತ್ರ್ಯ ಅವಕಾಶವೋ, ಅನಾಹುತವೋ?

04:40 PM Aug 30, 2020 | Karthik A |

ಸತಂತ್ರ್ಯ ಎಂಬುದು ಬರೀ ಮೂರಕ್ಷರದ ಪದವಲ್ಲ. ಅದರ ಅರ್ಥ ವಿಶಾಲ.

Advertisement

ಬ್ರಿಟಿಷರ ವಿರುದ್ಧದ ಹೋರಾಟಕ್ಕೆ ಇದು ಸೀಮಿತವಾಗಿಲ್ಲ.

ನಮ್ಮ ಹಕ್ಕು ಅಥವಾ ಸಂವಿಧಾನಬದ್ಧ ಸೌಕರ್ಯಗಳನ್ನು ಪಡೆಯು ವುದಷ್ಟೇ ಸ್ವಾತಂತ್ರ್ಯವಲ್ಲ.

ನಮ್ಮ ಜೀವನದ ವಿವಿಧ ಸ್ತರಗಳಲ್ಲಿ ಬರುವ ಸವಾಲುಗಳನ್ನು ಎದುರಿಸಲು ಮತ್ತು ಅವುಗಳನ್ನು ಪರಿಹರಿಸಿಕೊಳ್ಳಲೂ ನಾವು ಸ್ವತಂತ್ರರು!
ನಮ್ಮ ಪ್ರಾಚೀನ ಗುರುಕುಲ ಪದ್ಧತಿಯಲ್ಲಿ ವಿದ್ಯಾರ್ಥಿಗಳ ಸ್ವಾತಂತ್ರ್ಯಕ್ಕಿದ್ದ ಬೆಲೆ ಅಷ್ಟಕ್ಕಷ್ಟೇ.

ಆಗ ವಿದ್ಯಾರ್ಥಿಯ ಗಮನವೇನಿದ್ದರೂ ಕಲಿಕೆಯ ಮೇಲಿರಬೇಕು. ಕಲಿತು ಆತ್ಮನಿರ್ಭರನಾದ ಬಳಿಕವಷ್ಟೇ ಸ್ವಾತಂತ್ರ್ಯದ ಮಾತು. ಅನಂತರ ಸಮಾಜದ ಎಲ್ಲರಿಗೂ ಸ್ವಾತಂತ್ರ್ಯಬೇಕು, ಶಿಕ್ಷಣ ಶಿಕ್ಷೆಯಾಗಬಾರದು ಎಂಬೆಲ್ಲ ವಿವಿಧ ಉದ್ದೇಶಗಳಿಂದ ಅದರ ವ್ಯಾಪ್ತಿ ವಿಸ್ತರಿಸುತ್ತಲೇ ಹೋಯಿತು. ಮಿತಿ ಸಡಿಲವಾಯಿತು.

Advertisement

ಆದರೆ ಈಗ ವಿದ್ಯಾರ್ಥಿಗಳಿಗೆ ನೀಡಲಾಗುವ ಸ್ವಾತಂತ್ರ್ಯವೇ ಬದುಕಿಗೆ ಮುಳ್ಳಾಗುತ್ತಿದೆಯೇ? ಸ್ವಾತಂತ್ರ್ಯದ ಸಿಹಿಯ ಜತೆಗಿರುವ ಕಹಿಮದ್ದಿನ ನಿಜವಾದ ಅನುಭವ ವಾಗುವುದು ನಮಗೆ ಕಾಲೇಜು ದಿನಗಳಲ್ಲಿ. ಬಾಲ್ಯದಲ್ಲೇನೋ ಹಿರಿಯರು ಹೇಳಿದ್ದೇ ವೇದವಾಕ್ಯ. ಮಾತು ಮೀರಿದರೆ ಶಿಕ್ಷೆಯ ಭಯ. ಆದರೆ ಕಾಲೇಜು ದಿನಗಳಲ್ಲಿ ಸ್ವಾತಂತ್ರ್ಯ ಹೆಚ್ಚಿರುತ್ತದೆ. ಮನಸ್ಸು ಮರ್ಕಟವಾಗುತ್ತದೆ.

ಯಾರಾದರೂ ಬುದ್ಧಿ ಮಾತು ಹೇಳಿದರೂ ಅವಮಾನವಾದಂತೆ, ಸ್ವಾತಂತ್ರ್ಯದ ಹರಣವಾಯಿತೋ ಎಂಬಂತ ಸಿಡುಕು. ಸ್ವಾತಂತ್ರ್ಯದ ದುರ್ಬಳಕೆಯಾಗಿ ಅನಾಹುತವಾದಾಗಲೇ ಅದರ ಜತೆಗಿದ್ದ ಜವಾಬ್ದಾರಿಯ ಬಗ್ಗೆ ಅರಿವಾಗುವುದು! ಕಾಲೇಜು ಹಂತದಲ್ಲಿ ನೀಡಲಾಗುವ ಸ್ವಾತಂತ್ರ್ಯ ವಿದ್ಯಾಭ್ಯಾಸದ ಪ್ರಗತಿಗೆ, ಬದುಕನ್ನು ಎದುರಿಸಲು ಬೇಕಾದ ಧೈರ್ಯಕ್ಕೆ, ನಿರ್ಭೀತಿಯ ವಾತಾವರಣ ಸೃಷ್ಟಿಸಲು. ನಮ್ಮ ಬಟ್ಟೆಬರೆ, ನಡ ವಳಿಕೆ, ಮಾತು, ಶಿಕ್ಷಕರ ಮೇಲಿನ ಗೌರವ ಹೀಗೆ ಕೆಲವೊಂದು ಷರತ್ತುಗಳು ಅನಿವಾರ್ಯ. ಅಮಿತ ಸ್ವಾತಂತ್ರ್ಯ ಅನಾಹುತಕ್ಕೆ ದಾರಿ.


  ಶ್ರೀನಿವಾಸ ಪ್ರಸಾದ್‌, ವಿ.ವಿ. ಕಾಲೇಜು, ಮಂಗಳೂರು 

 

Advertisement

Udayavani is now on Telegram. Click here to join our channel and stay updated with the latest news.

Next