ಚಳ್ಳಕೆರೆ: ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮಾ ಗಾಂಧೀಜಿಯವರ ಪಾತ್ರ ಪ್ರಮುಖ. ನಾವೆಲ್ಲರೂ ಸ್ವಾತಂತ್ರ್ಯ ಹೋರಾಟದ ದಿನಗಳನ್ನು ನಿತ್ಯ ಮೆಲಕು ಹಾಕಬೇಕು ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ಇಲ್ಲಿನ ಬಿ.ಎಂ.ಸರ್ಕಾರಿ ಪ್ರೌಢಶಾಲಾ ಮೈದಾನದಲ್ಲಿ 74ನೇ ಸ್ವಾತಂತ್ರ್ಯೊತ್ಸವದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಚುನಾಯಿತ ಜನಪ್ರತಿನಿಧಿಗಳು ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವ ಅವಕಾಶವನ್ನು ಸಂವಿಧಾನ ನಮಗೆ ಮಾಡಿಕೊಟ್ಟಿದೆ. ವಿಶ್ವದ ಇತಿಹಾಸದಲ್ಲಿ ಅಹಿಂಸಾತ್ಮಕ ಹೋರಾಟ ನಡೆಸಿ ಸ್ವಾತಂತ್ರ್ಯ ಗಳಿಸಿದ ಏಕೈಕ ರಾಷ್ಟ್ರ ನಮ್ಮ ಭಾರತ ಎಂದರು.
ಧ್ವಜಾರೋಹಣ ನೆರವೇರಿಸಿ ಮಾತನಾಡಿದ ತಹಶೀಲ್ದಾರ್ ಎಂ.ಮಲ್ಲಿಕಾರ್ಜುನ್, ಸ್ವಾತಂತ್ರ್ಯೊತ್ಸವ ನಮ್ಮೆಲ್ಲರ ಆತ್ಮಾಭಿಮಾನದ ಸಂಕೇತವಾಗಿದೆ. ಪ್ರತಿಯೊಬ್ಬ ವ್ಯಕ್ತಿಯೂ ದೇಶದ ಗೌರವವನ್ನು ಕಾಪಾಡಲು ಬದ್ದನಾಗಿರಬೇಕು ಎಂದರು. ಕೋವಿಡ್ ನಿಯಂತ್ರಣದಲ್ಲಿ ಕಾರ್ಯನಿರ್ವಹಿಸಿದ ಡಾ.ಗೀತಾ, ಡಾ.ಸಂದೀಪ್, ಶುಶ್ರೂಷಕಿಯರಾದ ಗೀತಾ, ಗಾಯಿತ್ರಿ, ಹೊನ್ನಾವತಿ, ಅಂಗನವಾಡಿ ಕಾರ್ಯಕರ್ತೆಯರಾದ ಆರ್.ವೇದಾವತಿ, ಫಾತೀಮಾ, ಪೊಲೀಸ್ ಇಲಾಖೆಯ ಸಹಾಯಕ ಸಬ್‌ಇನ್ಸ್‌ಪೆಕ್ಟರ್ ಆದ ಮೇಟಿಕುರಿಕೆ ತಿಪ್ಪೇಸ್ವಾಮಿ, ಜಿ.ಬಿ.ತಿಪ್ಪೇಸ್ವಾಮಿ, ಮುಖ್ಯ ಪೇದೆ ಏಕಾಂತರೆಡ್ಡಿ, ಕಂದಾಯ ಇಲಾಖೆಯ ರಾಜೇಶ್, ನಗರಸಭೆಯ ಹಿರಿಯ ಆರೋಗ್ಯ ನಿರೀಕ್ಷಕ ಮಹಲಿಂಗಪ್ಪ, ಶಿವಣ್ಣ, ಪತ್ರಕರ್ತರಾದ ಬೆಳಗೆರೆ ಸುರೇಶ್, ರಾಘವೇಂದ್ರ ಅವರನ್ನು ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ವಾಸವಿ ಪ್ರೌಢಶಾಲೆಯ ವಿದ್ಯಾರ್ಥಿನಿ ಸಾನಿಯಾ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸುಮಾರು 57 ಕೋವಿಡ್ ವಾರಿಯರ್ಸ್ ಗಳನ್ನು ಸನ್ಮಾನಿಸಿದರು.
ಬಿ.ಪಿ.ಪ್ರಕಾಶ್‌ಮೂರ್ತಿ, ವಿಜಯಲಕ್ಷ್ಮಿ, ಎಚ್. ಆಂಜನೇಯ, ಟಿ.ಗಿರಿಯಪ್ಪ, ಎಚ್.ಸಮರ್ಥರಾಯ, ಜಿ.ವೀರೇಶ್, ವೈ.ಪ್ರಕಾಶ್, ಮಲ್ಲಿಕಾರ್ಜುನ್, ಕವಿತಾ, ಸುಜಾತ, ಸುಮಾ, ಎಸ್.ಜಯಣ್ಣ, ಎಂ.ಜೆ.ರಾಘವೇಂದ್ರ, ಎಂ.ನಾಗಮಣಿ, ಸುಮಕ್ಕ, ನಿರ್ಮಲ, ಎಂ.ಸಾವಿತ್ರಿ, ವಿರೂಪಾಕ್ಷಿ, ಚಳ್ಳಕೆರೆಯಪ್ಪ, ಸಿ.ಶ್ರೀನಿವಾಸ್, ಕೆ.ವೀರಭದ್ರಯ್ಯ, ಜೈತುಂಬಿ, ರಮೇಶ್‌ಗೌಡ, ಇಒ ಶ್ರೀಧರ್ ಐ.ಬಾರಿಕೇರ್, ಡಿವೈಎಸ್ಪಿ ಕೆ.ವಿ.ಶ್ರೀಧರ್, ಈ.ಆನಂದ, ಪಾಲಯ್ಯ, ಸುರೇಶ್, ಡಾ.ಎನ್.ಪ್ರೇಮಸುಧಾ, ಜಗನ್ನಾಥ, ಮೋಹನ್‌ಕುಮಾರಿ, ಮಂಜಪ್ಪ ಪಾಲ್ಗೊಂಡಿದ್ದರು.