Advertisement

Kunigal: ಅದ್ದೂರಿ 77ನೇ ಸ್ವಾತಂತ್ರ್ಯ ದಿನಾಚರಣೆ

03:46 PM Aug 15, 2023 | Team Udayavani |

ಕುಣಿಗಲ್: ಸರ್ವರಿಗೂ ಸಾಮಾನತೆಯ ಹಕ್ಕು, ಸಾಮಾಜಿಕ ನ್ಯಾಯ ದೊರಕಿಸಿ ಕೊಟ್ಟಾಗ ಮಾತ್ರ ನಿಜವಾದ ಸ್ವಾತಂತ್ರ್ಯ ದೇಶಕ್ಕೆ ಸಿಕ್ಕಿದಂತಾಗುತ್ತದೆ ಎಂದು ಶಾಸಕ ಡಾ.ಹೆಚ್.ಡಿ.ರಂಗನಾಥ್ ತಿಳಿಸಿದ್ದಾರೆ.

Advertisement

ಪಟ್ಟಣದ ಜಿಕೆಬಿಎಂಎಸ್ ಶಾಲಾ ಅವರಣದಲ್ಲಿ ತಾಲೂಕು ಆಡಳಿತ ಹಮ್ಮಿಕೊಂಡಿದ್ದ 77ನೇ ಸ್ವಾತಂತ್ರ್ಯೋತ್ಸವ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಬ್ರಿಟೀಷರ ಕಪಿಮುಷ್ಠಿಯಿಂದ ರಕ್ಷಿಸಿ ದೇಶಕ್ಕೆ ಸ್ವಾತಂತ್ರ್ಯ ದೊರಕಿಸಿ ಕೊಡಲು ಮಾಹತ್ಮ ಗಾಂಧಿಜೀ ಹಾದಿಯಾಗಿ ಲಕ್ಷಾಂತರ ಮಂದಿ ಸೇನಾನಿಗಳು ಮಾಡಿದ ತ್ಯಾಗ, ಬಲಿದಾನದಿಂದ ಸ್ವಾತಂತ್ರ್ಯ ಸಿಕ್ಕಿದೆ. ಆದರೆ ರಾಷ್ಟ್ರದ ಪ್ರತಿಯೊಬ್ಬರಿಗೂ ಸಮಾನತೆಯ ಹಕ್ಕು ಹಾಗೂ ಸಾಮಾಜಿಕ ನ್ಯಾಯ ಸಿಕ್ಕಿದ್ದಾಗ ಮಾತ್ರ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಂತೆ ಆಗುತ್ತದೆ ಎಂದು ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಹೇಳಿದ್ದರು. ಅವರ ಮಾತನ್ನು ನಾನು ಅನುಸರಿಸುತ್ತೇನೆ ಎಂದರು.

ಮಹನೀಯರು ತ್ಯಾಗ ಬಲಿದಾನ ಮಾಡಿ ತಂದುಕೊಟ್ಟಿರುವ ಸ್ವಾತಂತ್ರ್ಯವನ್ನು ಇಂದಿನ ಯುವ ಪೀಳಿಗೆ ಅರ್ಥ ಮಾಡಿಕೊಳ್ಳಬೇಕು. ವಿದ್ಯಾವಂತರಾಗಬೇಕು, ಮಾಹಿತಿ ತಂತ್ರಜ್ಞಾನದಲ್ಲಿ ನಿಪುಣರಾಗಿ ವಿಶ್ವದಲ್ಲಿ ಭಾರತವನ್ನು ಮೊದಲನೇ ಸ್ಥಾನದಲ್ಲಿ ನಿಲ್ಲಿಸಬೇಕು. ಕೃಷಿ, ಆರೋಗ್ಯ, ಕೈಗಾರಿಕೆಗೆ ಒತ್ತು ನೀಡಬೇಕು. ಜನರು ಹಸಿವಿನಿಂದ ನರಳಬಾರದು. ಹೊಟ್ಟೆ ತುಂಬಾ ಊಟ, ಕುಡಿಯಲು ಶುದ್ದ ನೀರು ಪೂರೈಸುವಂತಗ ಕೆಲಸವಾಗಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಾಡುತ್ತಿದೆ ಎಂದು ಹೇಳಿದರು.

ಅಭಿವೃದ್ದಿ ಮಾಡುವೇ: ಕ್ಷೇತ್ರದಲ್ಲಿ ನೀರಾವರಿ ಶಿಕ್ಷಣ ಸೇರಿದಂತೆ ಇನ್ನೂ ಸಾಕಷ್ಟು ಅಭಿವೃದ್ದಿ ಕೆಲಸಗಳು ಬಾಕಿ ಇದೆ. ಇದನ್ನು ಸರ್ಕಾರದೊಂದಿಗೆ ಚರ್ಚೆಸಿ ಹಂತ ಹಂತವಾಗಿ ಮಾಡುವ ಮೂಲಕ ಮಾದರಿ ತಾಲೂಕನ್ನಾಗಿ ಮಾಡಲಾಗುವುದೆಂದು ತಿಳಿಸಿದರು.

Advertisement

ಮಾನವೀಯ ಮೌಲ್ಯ ಕುಸಿತ: ಮಖ್ಯ ಭಾಷಣಾಕಾರ ಹೆಚ್.ಕೆ.ವಿವೇಕಾನಂದ ಮಾತನಾಡಿ ದೇಶವು ಎಲ್ಲಾ ಕ್ಷೇತ್ರದಲ್ಲಿ ಅಭಿವೃದ್ದಿ ಹೊಂದಿದೆ ಎಂದು ಹೇಳುತ್ತಿದ್ದೇವೆ. ಆದರೆ ದೇಶದಲ್ಲಿ ಮಾನವೀಯ ಮೌಲ್ಯ ಹಾಗೂ ಪ್ರಜಾಪ್ರಭುತ್ವ ವ್ಯವಸ್ಥೆ ಕುಸಿಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಅವರು ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ಮಹನೀಯರನ್ನು ಮರೆಯುತ್ತಿದ್ದೇವೆ ಎಂದರು.

ನಮ್ಮ ರೋಲ್ ಮಾಡೆಲ್ ಕ್ರಿಕೆಟಿಗರು, ಚಲನಚಿತ್ರ ನಟರಲ್ಲ. ತಂದೆ, ತಾಯಿ, ಶಿಕ್ಷಣ ನೀಡಿದ ಗುರುಗಳು ನಮಗೆ ರೋಲ್ ಮಾಡಲ್. ಯುವ ಜನಾಂಗ ಅಡ್ಡ ದಾರಿ ಹಿಡಿಯಲು ಎಲೆಕ್ಟ್ರಾನಿಕ್ ಮಾಧ್ಯಮಗಳು ಕಾರಣವಾಗಿವೆ. ಎಲೆಕ್ಟ್ರಾನಿಕ್ ಮಾಧ್ಯಮಗಳು ದೇಶದಲ್ಲಿನ ನಿಜವಾದ ಸಮಸ್ಯೆಗಳನ್ನು ಬಿತ್ತರಿಸುತ್ತಿಲ್ಲ. ಸಮಾಜಘಾತಕ ವ್ಯಕ್ತಿಗಳನ್ನು ಬಿಂಬಿಸುತ್ತಿರುವುದು ವಿಷಾಧನೀಯ ಎಂದರು.

ತಾಲೂಕು ದಂಡಾಧಿಕಾರಿ ಎಸ್.ವಿಶ್ವನಾಥ್ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ವಿವಿಧ ಶಾಲಾ ಮಕ್ಕಳಿಂದ ಸ್ತಬ್ದ ಚಿತ್ರ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳು ಅಕರ್ಷಣೆಯಾಗಿತ್ತು.

ಕಾರ್ಯಕ್ರಮದಲ್ಲಿ ತಾ.ಪಂ ಇಓ ಎ.ಜೋಸೆಫ್, ಡಿವೈಎಸ್‌ಪಿ ಆರ್.ಲಕ್ಷ್ಮಿಕಾಂತ್, ಸಿಪಿಐ ಎಸ್.ಬಿ.ನವೀನ್‌ಗೌಡ, ಕಸಾಪ ಅಧ್ಯಕ್ಷ ಡಾ.ಕಪನಿ ಪಾಳ್ಯ ರಮೇಶ್, ಬಿಇಓ ಬೋರೇಗೌಡ, ಪುರಸಭಾ ಮುಖ್ಯಾಧಿಕಾರಿ ಪಿ.ಶಿವಪ್ರಸಾದ್, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಜಿ.ಆರ್.ವೆಂಕಟೇಶ್, ಆರ್‌ಎಫ್‌ಓ ಮಹಮದ್‌ಮನ್ಸೂರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನೂರ್‌ಆಜಾಂ, ಹಿರಿಯ ಸ್ವಾತಂತ್ರ್ಯ ಹೋರಾಟಗಾರ ವೈ.ಸಿ.ನಂಜುಡಯ್ಯ ಮೊದಲಾದವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next