Advertisement

Independence Day: ಇಂದಿನಿಂದ ದೇಶಾದ್ಯಂತ ಹರ್‌ ಘರ್‌ ತಿರಂಗಾ

02:05 AM Aug 09, 2024 | Team Udayavani |

ಹೊಸದಿಲ್ಲಿ: ಸ್ವಾತಂತ್ರ್ಯ ದಿನದ ಅಂಗ ವಾಗಿ ಶುಕ್ರವಾರದಿಂದ ಆ.15ರ ವರೆಗೆ ದೇಶಾದ್ಯಂತ “ಹರ್‌ ಘರ್‌ ತಿರಂಗಾ’ ಅಭಿಯಾನದ 3ನೇ ಆವೃತ್ತಿ ನಡೆಯ ಲಿದೆ ಎಂದು ಕೇಂದ್ರ ಪ್ರವಾಸೋದ್ಯಮ ಹಾಗೂ ಸಂಸ್ಕೃತಿ ಸಚಿವ ಗಜೇಂದ್ರ ಸಿಂಗ್‌ ಶೆಖಾವತ್‌ ಹೇಳಿದ್ದಾರೆ.ಜತೆಗೆ ಆ.13ರಂದು ಎಲ್ಲ ಸಂಸದರು ದಿಲ್ಲಿಯಲ್ಲಿ ಬೈಕ್‌ ರ್‍ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದಿದ್ದಾರೆ.

Advertisement

2022 ರಲ್ಲಿ “ಸ್ವಾತಂತ್ರ್ಯದ ಅಮೃತ ಮಹೋ ತ್ಸವ’ದ ಅಂಗವಾಗಿ ಆರಂಭವಾದ ಅಭಿ ಯಾನ ಆ ವರ್ಷ ಅಭೂತಪೂರ್ವ ಯಶಸ್ಸು ಕಂಡಿತ್ತು. 2023ರಲ್ಲಿ 10 ಕೋಟಿ ಜನ ಸೆಲ್ಫಿ ಹಂಚಿಕೊಂಡಿದ್ದರು ಎಂದು ಹೇಳಿದರು. ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್‌ ಸೇರಿ ಹಲವು ರಾಜ್ಯಗಳೂ ಹರ್‌ ಘರ್‌ ತಿರಂಗಾ ಕಾರ್ಯಕ್ರಮ ಹಮ್ಮಿಕೊಂಡಿವೆ. ಅಭಿಯಾನದ ಅವಧಿಯಲ್ಲಿ ರಾಜ್ಯದ 2.5 ಕೋಟಿ ಮನೆಗಳಲ್ಲಿ ತಿರಂಗಾ ಹಾರಿಸಲಾಗುವುದು ಎಂದು ಮಹಾರಾಷ್ಟ್ರ ಸಿಎಂ ಶಿಂಧೆ ಹೇಳಿದ್ದಾರೆ.

ಗುಜರಾತ್‌ನಲ್ಲಿ ಸರಕಾ ರವೇ 50 ಲಕ್ಷ ಧ್ವಜ ವಿತರಿಸಲಿದೆ. ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳನ್ನೂ ಹಮ್ಮಿಕೊಳ್ಳಲಾಗಿದೆ. ಮಧ್ಯಪ್ರದೇಶದ 1.5 ಕೋಟಿ ಮನೆಗಳಲ್ಲಿ ತಿರಂಗಾ ಹಾರಿಸುವ ಗುರಿ ಹೊಂದಿರುವುದಾಗಿ ಸಿಎಂ ಮೋಹನ್‌ ಯಾದವ್‌ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next