Advertisement

ಜಲಾವೃತಗೊಂಡ ಗ್ರಾಮದಲ್ಲಿ ಸ್ವಾತಂತ್ರ್ಯ ಸಂಭ್ರಮ

09:46 AM Aug 17, 2019 | Team Udayavani |

ಬಾಗಲಕೋಟೆ : ಎದೆಮಟ ನೀರು, ಧ್ವಜ ಕಟ್ಟೆಗೆ ಹೋಗಲೂ ಆಗದ ಪರಿಸ್ಥಿತಿಯಲ್ಲೂ ಜಿಲ್ಲೆಯ ಜಮಖಂಡಿ ತಾಲೂಕಿನ ಶೂರ್ಪಾಲಿ ಗ್ರಾಮದ ಜನರು ತೆಪ್ಪದ ಮೂಲಕ ಜಲಾವೃತಗೊಂಡ ಗ್ರಾಮಕ್ಕೆ ಹೋಗಿ ಧ್ವಜಾರೋಹಣ ನೆರವೇರಿಸಿ, ಸಾತಂತ್ರ್ಯ ದಿನ ಆಚರಿಸಿದರು.

Advertisement

ಗ್ರಾಮದ ಶೇಖರ ಪಾಟೀಲ ಮತ್ತು ಎನ್.ಎಂ. ಪಾಟೀಲ ನೇತೃತ್ವದಲ್ಲಿ ಸುಮಾರು 10ಕ್ಕೂ ಹೆಚ್ಚು ಜನರು ತಾವಿದ್ದ ಪರಿಹಾರ ಕೇಂದ್ರದಿಂದ ಜಲಾವೃತಗೊಂಡಿದ್ದ ತಮ್ಮೂರು ಶೂರ್ಪಾಲಿಗೆ ಎರಡು ತೆಪ್ಪದ ಮೂಲಕ ತೆರಳಿದ್ದಾರೆ. ಬಳಿಕ ಕಂಬಕ್ಕೆ ಧ್ವಜ ಕಟ್ಟಿ, ನಂತರ ಧ್ವಜಾರೋಹಣ ನೆರವೇರಿಸಿದರು. ಎಲ್ಲರೂ ಎರಡು ತೆಪ್ಪದಲ್ಲಿ ನಿಂತುಕೊಂಡು, ಧ್ವಜಾರೋಹಣ ವೇಳೆ ರಾಷ್ಟ್ರಗೀತೆ ಹಾಡಿದರು.

ಇಡೀ ಗ್ರಾಮ ಜಲಾವೃತಗೊಂಡು ಮನೆ ನೀರಿನಲ್ಲಿ ಮುಳುಗಿ ಪರಿಹಾರ ಕೇಂದ್ರದಲ್ಲಿ ಸಂಕಷ್ಟದಲ್ಲಿರುವ ಇವರೆಲ್ಲ ದೇಶಪ್ರೇಮ ಮೆರೆದು ಎದೆಮಟ್ಟ ನೀರಲ್ಲೂ ತೆರಳಿ ಸ್ವಾತಂತ್ಯ ದಿನ ಆಚರಿಸಿದ್ದು ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.

ನಿರಾಶ್ರಿತ ಮಹಿಳೆಯಿಂದ ಧ್ವಜಾರೋಹಣ :
ಜಿಲ್ಲೆಯ ಹಿರಪ್ಪಗಿ ಗ್ರಾಮದ ಆಯುಷ್ ಆಸ್ಪತ್ರೆ ಆವರಣದಲ್ಲಿ ಸ್ವಾತಂತ್ರ್ಯ ದಿನ ವಿಶೇಷವಾಗಿ ನಡೆಯಿತು. ಜಿಲ್ಲಾ ಆಯುಷ್ ಅಽಕಾರಿ ಡಾ.ಆರ್.ಜಿ. ಮೇತ್ರಿ, ವೈದ್ಯಾಽಕಾರಿ ಡಾ.ಚಂದ್ರಕಲಾ ರಜಪೂತ ಅವರ ನೇತೃತ್ವದಲ್ಲಿ ಪರಿಹಾರ ಕೇಂದ್ರದಲ್ಲಿದ್ದ ಸತ್ಯವ್ವ ಈರಪ್ಪ ಸಿಂಧೂರ ಎಂಬ ಮಹಿಳೆಯಿಂದ ಧ್ವಜಾರೋಹಣ ನೆರವೇರಿಸಲಾಯಿತು.  15 ದಿನಗಳಿಂದ ಮನೆ ನೀರಿನಲ್ಲಿ ಮುಳುಗಿ, ಪರಿಹಾರ ಕೇಂದ್ರದಲ್ಲಿದ್ದ ಈ ಮಹಿಳೆ ಸತ್ಯವ್ವ, ತನ್ನ ಜೀವಮಾನದಲ್ಲಿ ಮೊದಲ ಬಾರಿಗೆ ಧ್ವಜಾರೋಹಣ ನೆರವೇರಿಸಿ, ಭಾವುಕಾರದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next