ಮಣಿಪಾಲ: ದೇಶಕ್ಕೆ ಸ್ವಾತಂತ್ರ್ಯ ಲಭಿಸಿ 75 ವರ್ಷಗಳಾಗುತ್ತಿರುವ ಸಂಭ್ರಮದ ಹಿನ್ನೆಲೆಯಲ್ಲಿ “ಉದಯವಾಣಿ’ಯು ಹಲವು ವಿಶಿಷ್ಟ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಇವುಗಳಲ್ಲಿ ಮಕ್ಕಳಿಗಾಗಿ ವೇಷಭೂಷಣ ವಿಶೇಷ ಫ್ಯಾನ್ಸಿ ಡ್ರೆಸ್ ಒಂದು. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ದೇಶದ ಹೆಮ್ಮೆಯ ಸ್ವಾತಂತ್ರ್ಯ ಸೇನಾನಿಗಳನ್ನು ನಮ್ಮ ಮಕ್ಕಳಲ್ಲಿ ಕಾಣುವ ಕಾರ್ಯಕ್ರಮ ಇದು.
ಹೆತ್ತವರು ತಮ್ಮ 12 ವರ್ಷದೊಳಗಿನ ಮಕ್ಕಳಿಗೆ ತಮ್ಮ ನೆಚ್ಚಿನ ಸ್ವಾತಂತ್ರ್ಯ ಹೋರಾಟಗಾರರ ವೇಷವನ್ನು ತೊಡಿಸಿ ಫೋಟೊ ತೆಗೆದು ನಮಗೆ ವ್ಯಾಟ್ಸ್‌ಆ್ಯಪ್ ಮಾಡಬೇಕು. ಜತೆಗೆ ಆ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಎರಡು ಸಾಲು ಬರೆಯಬೇಕು. ಫೋಟೊ ಅಭಿಪ್ರಾಯವನ್ನು ಕಳುಹಿಸಲು ಆಗಸ್ಟ್ 12 ಕೊನೆಯ ದಿನಾಂಕ.
ಇನ್ನೊಂದು ಕಾರ್ಯಕ್ರಮ ಸ್ವಾತಂತ್ರ್ಯದ ಕಥೆಯ ವೀಡಿಯೋ. ನೀವು ಕೇಳಿರುವ ಸ್ವಾತಂತ್ರ್ಯದ ಕಥೆಯನ್ನು ಸ್ವಾತಂತ್ರ್ಯ ಯೋಧರ ವೇಷಭೂಷಣ ಧರಿಸಿ ಹೇಳುವ ವೀಡಿಯೋ ಮಾಡಿ ಕಳುಹಿಸಬಹುದು. ಪ್ರತೀ ವೀಡಿಯೋ 2 ನಿಮಿಷದ್ದಾಗಿರಬೇಕು.
ಆಯ್ಕೆಯಾದ ವೀಡಿಯೋಗಳನ್ನು ಸಂಕಲಿಸಿ ಪ್ರಕಟಿಸಲಾಗುತ್ತದೆ. 9148594259 ಈ ನಂಬರ್‌ಗೆ ವ್ಯಾಟ್ಸ್‌ಆ್ಯಪ್ ಮಾಡಿ.