Advertisement
ಶತಕವೀರ ಋತುರಾಜ್ ಗಾಯಕ್ವಾಡ್ ಪ್ರಕಾರ, ಇಲ್ಲಿ ಓವರ್‌ಗೆ 14 ರನ್ ಬಾರಿಸುವ ಸವಾಲಿದ್ದರೂ ಗೆದ್ದು ಬರಬಹುದಿತ್ತು. “ಎಲ್ಲವೂ ಮಂಜಿನ ಪ್ರಭಾವ. ಚೆಂಡು ಅಷ್ಟೊಂದು ಒದ್ದೆಯಾಗಿತ್ತು. ಹಿಡಿತ ಸಿಗುತ್ತಿರಲಿಲ್ಲ. ಇಂಥ ಸ್ಥಿತಿಯಲ್ಲಿ ಓವರಿಗೆ 12 ರನ್, ಅಲ್ಲ… 13-14 ರನ್ ಬೇಕಿದ್ದರೂ ಬಾರಿಸಬಹುದಿತ್ತು. ನಾವು ಮೊದಲ ಪಂದ್ಯದಲ್ಲಿ 210 ರನ್ ಗುರಿಯನ್ನು ನಿರಾಯಾಸವಾಗಿ ಮುಟ್ಟಿರಲಿಲ್ಲವೇ?’ ಎಂಬುದಾಗಿ ಗಾಯಕ್ವಾಡ್ ಹೇಳಿದರು. ಅಂತಿಮ ಓವರ್‌ನಲ್ಲಿ 23 ರನ್ ನೀಡಿದ ಪ್ರಸಿದ್ಧ್ ಕೃಷ್ಣ ಬೆಂಬಲಕ್ಕೆ ನಿಂತರು.
ಬಿಗ್ ಹಿಟ್ಟರ್ ಗ್ಲೆನ್ ಮ್ಯಾಕ್ಸ್‌ವೆಲ್ ಪಾಲಿಗೆ ಇದೊಂದು ಸ್ಮರಣೀಯ ಪಂದ್ಯ. ಅವರು 100ನೇ ಪಂದ್ಯವನ್ನು ಆಡಲಿಳಿದಿದ್ದರು. 100ನೇ ಟಿ20 ಪಂದ್ಯದಲ್ಲಿ ಶತಕ ಬಾರಿಸಿದ ವಿಶ್ವದ ಮೊದಲ ಆಟಗಾರನಾಗಿ ಮೂಡಿಬರುವುದರ ಜತೆಗೆ ಮ್ಯಾಚ್ ವಿನ್ನರ್ ಕೂಡ ಆದರು. ಮ್ಯಾಕ್ಸ್‌ವೆಲ್ ಕೇವಲ 48 ಎಸೆತ ಗಳಲ್ಲಿ ಅಜೇಯ 104 ರನ್ ಸಿಡಿಸಿ ದರು. ಕೊನೆಯ 5 ಓವರ್‌ಗಳಲ್ಲಿ 80 ರನ್, ಅಂತಿಮ 2 ಓವರ್ ಗಳಲ್ಲಿ 43 ರನ್, ಕೊನೆಯ ಓವರ್ ನಲ್ಲಿ 21 ರನ್ ಬಾರಿಸುವ ಒತ್ತಡ ವಿದ್ದರೂ ಮ್ಯಾಕ್ಸ್‌ವೆಲ್ ಇದನ್ನೆಲ್ಲ ಮೆಟ್ಟಿ ನಿಂತರು. ಮತ್ತು ಇದು ಅವರಿಂದಷ್ಟೇ ಸಾಧ್ಯವಾಗಬಹುದಾದ ಸಾಹಸವಾಗಿತ್ತು.
Related Articles
Advertisement
ಪ್ರಸಿದ್ಧ್ 18ನೇ ಓವರ್‌ನಲ್ಲಿ ಕೇವಲ 6 ರನ್ ನೀಡಿ ಪಂದ್ಯವನ್ನು ಒಂದು ಹಂತಕ್ಕೆ ನಿಯಂತ್ರಿಸಿದ್ದನ್ನು ಮರೆಯುವಂತಿಲ್ಲ. ಆದರೆ ಅಕ್ಷರ್ ಪಟೇಲ್ ಅವರ 19ನೇ ಓವರ್ ದುಬಾರಿ ಯಾಯಿತು. ನೋಬಾಲ್, ಫ್ರೀ ಹಿಟ್ ಸಿಕ್ಸರ್ ಭಾರತಕ್ಕೆ ಮುಳುವಾದದ್ದು ಸುಳ್ಳಲ್ಲ. ಅಕ್ಷರ್ 22 ರನ್ ಬಿಟ್ಟುಕೊಟ್ಟರು.
“ನಮ್ಮ ಕಡೆಯಿಂದ ಹೇಳುವು ದಾದರೆ, ಬೌಲರ್‌ಗಳು ಗರಿಷ್ಠ ಪ್ರಯತ್ನ ವನ್ನೇ ಮಾಡಿದ್ದಾರೆ. ಆದರೆ ವಿಪರೀತ ಇಬ್ಬನಿಯಿಂದಾಗಿ ಬೌಲರ್‌ಗಳ ಪ್ರಯತ್ನ ಫಲಿಸಲಿಲ್ಲ. ಆರಂಭದಲ್ಲಿ ನಮಗೂ ಬ್ಯಾಟಿಂಗ್ ಕಷ್ಟವಾಗಿತ್ತು. 7-8ನೇ ಓವರ್ ಬಳಿಕವಷ್ಟೇ ಪರಿಸ್ಥಿತಿ ಬ್ಯಾಟಿಂಗ್‌ಗೆ ಸಹಕರಿಸಲಾರಂಭಿಸಿತ್ತು. ಒಂದೇ ಓವರ್ ಅಂತರದಲ್ಲಿ ಜೈಸ್ವಾಲ್ ಮತ್ತು ಇಶಾನ್ ಔಟಾದುದರಿಂದ ಜತೆಯಾಟವೊಂದನ್ನು ನಿಭಾಯಿಸುವ ಸವಾಲು ಎದುರಾಗಿತ್ತು. ಇದರಲ್ಲಿ ನಾವು ಯಶಸ್ವಿಯಾದೆವು’ ಎಂಬು ದಾಗಿ ಗಾಯಕ್ವಾಡ್ ಹೇಳಿದರು. ಸರಣಿಯ 4ನೇ ಪಂದ್ಯ ಶುಕ್ರವಾರ ರಾಯ್‌ಪುರದಲ್ಲಿ ನಡೆಯಲಿದೆ.