Advertisement

ಸಿರಿಧಾನ್ಯಗಳಿಗಾಗಿ ಇನ್‌ಕ್ಯುಬೇಶನ್‌ ಸೆಂಟರ್‌

06:20 AM Jan 21, 2018 | Team Udayavani |

ಬೆಂಗಳೂರು: ಸಿರಿಧಾನ್ಯಗಳಿಗೆ ಸಂಬಂಧಿಸಿದ ಉದ್ಯಮಗಳ ಉತ್ತೇಜನಕ್ಕಾಗಿಯೇ ದೇಶದ ಮೊದಲ ಇನ್‌ಕ್ಯುಬೇಶನ್‌ ಸೆಂಟರ್‌ ಅಸ್ತಿತ್ವಕ್ಕೆ ಬರುತ್ತಿದೆ.

Advertisement

ಭಾರತೀಯ ಕೃಷಿ ಅನುಸಂಧಾನ ಪರಿಷತ್ತಿ ನಡಿ ಬರುವ ಭಾರತೀಯ ಸಿರಿಧಾನ್ಯಗಳ ಸಂಶೋಧನಾ ಸಂಸ್ಥೆ (ಐಐಎಂಆರ್‌) ಇನ್ನೊಂದು ತಿಂಗಳಲ್ಲಿ ಈ ಇನ್‌ಕ್ಯುಬೇಶನ್‌ ಸೆಂಟರ್‌ ಆರಂಭಿಸಲಿದೆ.

ಸಿರಿಧಾನ್ಯಗಳಿಗೆ ಸಂಬಂಧಿಸಿದ ಯಾವುದೇ ಐಡಿಯಾಗಳಿಗೆ ಈ ಕೇಂದ್ರವು ಉದ್ಯಮದ ಪರಿಕಲ್ಪನೆ ಕೊಟ್ಟು, ಅದು ಬೆಳೆಯಲು ಅಗತ್ಯ ನೆರವು ನೀಡಲಿದೆ. “ಅಗ್ರಿ ಸ್ಟಾರ್ಟ್‌ ಅಪ್‌’ಗಳಲ್ಲಿ ಮುಂಚೂಣಿಯಲ್ಲಿರುವ ರಾಜ್ಯದ ಆಸಕ್ತ ನವೋದ್ಯಮಿಗಳಿಗೆ ಉತ್ತಮ ವೇದಿಕೆ ಆಗಲಿದೆ.

ಮೊದಲ ಬ್ಯಾಚ್‌ಗೆ 30 ಮಂದಿ ಆಯ್ಕೆ: ಸುಮಾರು ನೂರು ಅರ್ಜಿಗಳನ್ನು ನಿರೀಕ್ಷಿಸಲಾಗಿದ್ದು, ಈ ಪೈಕಿ ಮೊದಲ ಬ್ಯಾಚ್‌ನಲ್ಲಿ 30 ಜನರನ್ನು ಆಯ್ಕೆ ಮಾಡಲಾಗುವುದು. ನಂತರ ತರಬೇತಿ ನೀಡಿ, ಉದ್ಯಮಕ್ಕೆ ಪೂರಕ ವಾತಾವರಣ ಕಲ್ಪಿಸಲಾಗುವುದು. 

ದೇಶಾದ್ಯಂತ ಸಾಕಷ್ಟು ಇನ್‌ಕ್ಯುಬೇಶನ್‌  ಕೇಂದ್ರಗಳಿರಬಹುದು. ಆದರೆ,ಸಿರಿಧಾನ್ಯಗಳಿಗಾಗಿಯೇ ಪ್ರತ್ಯೇಕ ಇನ್‌ಕ್ಯುಬೇಶನ್‌  ಸೆಂಟರ್‌ ಆರಂಭಿಸುತ್ತಿರುವುದು ಇದೇ ಮೊದಲು. ಇದಕ್ಕಾಗಿ ಕೇಂದ್ರದಿಂದ ಹಣಕಾಸಿನ ನೆರವು ಕೂಡ ದೊರೆಯುತ್ತಿದೆ. ದೇಶದಲ್ಲಿ ನೂರಾರು ಕೋಟಿ ರೂ.ಸಿರಿಧಾನ್ಯಗಳ ವಹಿವಾಟು ನಡೆಯುತ್ತಿದೆ. ಇದರಲ್ಲಿ ಶೇ.50ರಷ್ಟು ಪಾಲು ಕರ್ನಾಟಕದ್ದೇ ಆಗಿದೆ. ಅಲ್ಲದೆ, ಐಟಿ-ಬಿಟಿ ಉದ್ಯಮಿಗಳು ಕೂಡ ಇದರತ್ತ ಮುಖಮಾಡುತ್ತಿರುವುದರಿಂದ ಅವರಿಗೆ ಇದು ಉತ್ತಮ ವೇದಿಕೆ ಆಗಲಿ ದೆ ಎಂದು ಐಐಎಂಆರ್‌ ನಿರ್ದೇಶಕ ವಿಲಾಸ ಎ. ಟೊಣಪಿ “ಉದಯವಾಣಿ’ಗೆ ತಿಳಿಸಿದರು.

Advertisement

ಎನ್‌ಸಿಬಿಎಸ್‌ ಜತೆ ಮಾತುಕತೆ
ರಾಜ್ಯದಲ್ಲೂ ಇನ್‌ಕ್ಯುಬೇಶನ್‌ ‌ಸೆಂಟರ್‌ ತೆರೆಯಲು ಸರ್ಕಾರ ಚಿಂತನೆ ನಡೆಸಿದೆ. ಈ ಸಂಬಂಧ ರಾಷ್ಟ್ರೀಯ ಜೈವಿಕ ವಿಜ್ಞಾನಗಳ ಕೇಂದ್ರ (ಎನ್‌ಸಿಬಿಎಸ್‌)ದ ಜತೆ ಮಾತುಕತೆ ನಡೆಸಿದೆ ಎಂದು ಕೃಷಿ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು. 

ನಗರದ ಅರಮನೆಯಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಸಾವಯವ-ಸಿರಿಧಾನ್ಯಗಳ ಅಂತರರಾಷ್ಟ್ರೀಯ ವಾಣಿಜ್ಯ ಮೇಳದಲ್ಲಿ ಶನಿವಾರ “ಸ್ಟಾರ್ಟ್‌ಅಪ್‌ ಮತ್ತು ಉದ್ಯಮಶೀಲತೆ’ ಕುರಿತ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡಿದರು. 

ಈಗಾಗಲೇ ಎನ್‌ಸಿಬಿಎಸ್‌ ಇನ್‌ಕ್ಯುಬೇಶನ್‌  ಸೆಂಟರ್‌ “ಸಿ-ಕ್ಯಾಂಪ್‌’ನ್ನು ಹೊಂದಿದೆ. ಅದೇ ರೀತಿ, ರಾಜ್ಯದಲ್ಲಿ ಇನ್‌ಕ್ಯುಬೇಶನ್‌ ಸೆಂಟರ್‌ ಸ್ಥಾಪಿಸಿ,ಆ ಮೂಲಕ ಅಗ್ರಿ ಸ್ಟಾರ್ಟ್‌ಅಪ್‌ಗ್ಳನ್ನು ತೆರೆಯಲು ಮುಂದೆ ಬರುವವರಿಗೆ ಸೂಕ್ತ ಮಾರ್ಗದರ್ಶನ ನೀಡಲಾಗುವುದು. ಅಷ್ಟೇ ಅಲ್ಲ, ಇದನ್ನು ಕೃಷಿ ವಿಶ್ವವಿದ್ಯಾಲಯಗಳೊಂದಿಗೆ ಲಿಂಕ್‌ ಮಾಡಲು ಉದ್ದೇಶಿಸಲಾಗಿದೆ. ಇದರಿಂದ ಉದ್ಯೋಗ ಸೃಷ್ಟಿ ಹೆಚ್ಚಳವಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next