Advertisement

ಕೋವಿಡ್ ಪ್ರಕರಣ :MITಯಲ್ಲಿ ಆನ್‌ಲೈನ್‌ ತರಗತಿ ನಡೆಸಲು ನಿರ್ಧಾರ, ಪರೀಕ್ಷೆ ಮುಂದೂಡಿಕೆ

01:59 AM Mar 18, 2021 | Team Udayavani |

ಉಡುಪಿ: ಮಣಿಪಾಲ ಕ್ಯಾಂಪಸ್‌ನಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಕಾರಣ ಆನ್‌ಲೈನ್‌ನಲ್ಲಿ ಥಿಯರಿ ತರಗತಿಗಳನ್ನು ನಡೆಸಲು ಮಾಹೆ ಆಡಳಿತ ನಿರ್ಧರಿಸಿದೆ.

Advertisement

ಪ್ರಯೋಗಾಲಯ, ಪ್ರಾಕ್ಟಿಕಲ್‌ ತರಗತಿ, ಸಂಪರ್ಕ ತರಗತಿಗಳನ್ನು ಮುಂದೂಡಲಾಗಿದೆ. ಬಿಟೆಕ್‌ನ ಮೊದಲ ಸೆಮಿಸ್ಟರ್‌ನ ಪೆಂಡಿಂಗ್‌ ಎಂಡ್‌ ಸೆಮಿಸ್ಟರ್‌ ಪರೀಕ್ಷೆಗಳನ್ನು ಮುಂದಿನ ದಿನಾಂಕಗಳಿಗೆ ಪರಿಷ್ಕರಿಸ ಲಾಗುವುದು ಎಂದು ಎಂಐಟಿ ನಿರ್ದೇಶಕರು ತಿಳಿಸಿದ್ದಾರೆ.

ಜಿಲ್ಲಾಡಳಿತದ ಸೂಚನೆಯಂತೆ ಹಲವು ಕ್ರಮಗಳನ್ನು ತೆಗೆದುಕೊಳ್ಳ ಲಾಗುತ್ತಿದೆ. ಮಣಿಪಾಲದಲ್ಲಿ ವಿದ್ಯಾರ್ಥಿಗಳ ಚಲನವಲನಗಳನ್ನು ಅದರಲ್ಲೂ ವಿಶೇಷವಾಗಿ ಎಂಐಟಿ ಕ್ಯಾಂಪಸ್‌ನಲ್ಲಿ ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.

ಎಂಐಟಿ ಕಂಟೈನ್‌ಮೆಂಟ್‌ ವಲಯ
ಎಂಐಟಿ ಪರಿಸರದಲ್ಲಿ ತಪಾಸಣೆ ನಡೆಸಿದಾಗ ಕಳೆದ ನಾಲ್ಕೈದು ದಿನಗಳಲ್ಲಿ ಒಟ್ಟು 59 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಆದರೆ ಇವರಲ್ಲಿ ಹೆಚ್ಚಿನವರಿಗೆ ಕೊರೊನಾ ಸೋಂಕಿನ ಲಕ್ಷಣ ಇಲ್ಲ. ಸೋಂಕಿನ ಲಕ್ಷಣ ಇಲ್ಲದವರು ಹಾಸ್ಟೆಲ್‌ನಲ್ಲಿದ್ದಾರೆ. ಮಿಕ್ಕುಳಿದವರು ಹೋಂ ಐಶೋಲೇಶನ್‌ನಲ್ಲಿದ್ದಾರೆ. ಆದುದರಿಂದ ಈ ಪ್ರದೇಶವನ್ನು ಕಂಟೈನ್‌ಮೆಂಟ್‌ ವಲಯ ಎಂದು ಪರಿಗಣಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next