Advertisement
ತುಳಸಿ ಸಾಮಾನ್ಯ ಎಲ್ಲರ ಮನೆಯಲ್ಲೂ ಬೆಳೆಯುವ ಸಸ್ಯಗಳಲ್ಲಿ ಒಂದು. ಈ ಗಿಡವನ್ನು ಮನೆಯ ಮುಂದುಗಡೆ ಬೆಳೆಸುವುದರಿಂದ ಮನೆಯವರೆಲ್ಲರಿಗೂ ಒಳಿತಾಗುತ್ತದೆ ಎಂಬ ನಂಬಿಕೆ ಇದೆ. ಇದರ ಗಾಳಿಯೂ ದೇಹಕ್ಕೆ, ಆರೋಗ್ಯಕ್ಕೆ ಒಳ್ಳೆಯದು. ಆಯುರ್ವೇದದಲ್ಲಿ ತುಳಸಿಯನ್ನು ಹಲವಾರು ಸಮಸ್ಯೆಗಳಿಗೆ ಬೇರೆ ಬೇರೆ ಸಸ್ಯಗಳ ಜೊತೆ ಬೆರೆಸಿ ಔಷಧಿಗಳನ್ನು ತಯಾರಿಸುತ್ತಾರೆ. ಆಯುರ್ವೇದದ ಹಲವು ಕೆಮ್ಮಿನ ಔಷಧಗಳಲ್ಲಿ ತುಳಸಿ ಮುಖ್ಯವಾದುದು.
Related Articles
Advertisement
ಸಾಮಾನ್ಯ ಜ್ವರ ಹಾಗೂ ಶೀತ, ಕೆಮ್ಮು:
ಮಳೆಗಾಲದಲ್ಲಿ ಬರುವ ಜ್ವರ, ಕೆಮ್ಮು, ಶೀತಕ್ಕೆ ತುಳಸಿ ಎಲೆಗಳನ್ನು ಚಹಾದೊಂದಿಗೆ ಕುದಿಸಿ ಕುಡಿಯಬೇಕು. ಮಲೇರಿಯಾ, ಡೆಂಗ್ಯೂ ಜ್ವರವನ್ನು ಕೂಡಾ ನಿವಾರಿಸುತ್ತದೆ. ತುಳಸಿ ರಸ ಜ್ವರ ಕಡಿಮೆ ಮಾಡುವುದಕ್ಕೆ ಸಹಕಾರಿ. ಇದರ ಎಲೆ ಜಗಿಯುವುದರಿಂದ ಶೀತ ಹಾಗೂ ಕೆಮ್ಮು ನಿವಾರಣೆಯಾಗಲು ಸಹಾಯ ಮಾಡುತ್ತದೆ.
ತೀವ್ರವಾದ ಜ್ವರವಿದ್ದರೆ ತುಳಸಿ ಎಲೆಗಳು, ಏಲಕ್ಕಿ ಪುಡಿಯನ್ನು ಅರ್ಧ ಲೀಟರ್ ನೀರಿಗೆ ಹಾಕಿ ಕುದಿಸಿ ಅದರೊಂದಿಗೆ ಹಾಲು, ಸಕ್ಕರೆ ಸೇರಿಸಿ ಕುಡಿದರೆ ಜ್ವರ ಕಡಿಮೆಯಾಗುತ್ತದೆ.
ಹುರಿದ ಲವಂಗವನ್ನು ತುಳಸಿ ಎಲೆಯ ಜೊತೆ ಸೇವಿಸಿದರೆ ಎಲ್ಲ ತರಹದ ಕೆಮ್ಮು ನಿವಾರನೆಯಾಗುತ್ತದೆ.
ಗಂಟಲು ನೋವು:
ತುಳಸಿಯಿಂದ ತಯಾರಿಸಿದ ಕಷಾಯವನ್ನು ಕುಡಿಯಲು ಹಾಗೂ ಬಾಯಿ ಮುಕ್ಕಳಿಸಲು ಬಳಸುವುದರಿಂದ ಗಂಟಲು ನೋವು ಗುಣಮುಖವಾಗುತ್ತದೆ.
ಜ್ಞಾಪಕ ಶಕ್ತಿ ಹೆಚಿಸಲು:
ತುಳಸಿ ಎಲೆಗಳು ನರಗಳ ಟಾನಿಕ್ ನಂತೆ ಕೆಲಸ ಮಾಡುತ್ತದೆ. ಐದು ತುಳಸಿ ಎಲೆಯನ್ನು ಪ್ರತಿ ದಿನ ತಿಂದರೆ ಹಲವು ಸೋಂಕು ಮತ್ತು ರೋಗವನ್ನು ದೂರವಿರಿಸಬಹುದು. ಪ್ರತಿದಿನ ಇದರ ಸೇವನೆಯಿಂದ ಜ್ಞಾಪಕಶಕ್ತಿ ಹೆಚ್ಚಾಗಿ ಬುದ್ಧಿವಂತಿಕೆ ಚುರುಕುಗೊಳ್ಳುತ್ತದೆ. ವಯಸ್ಸಾದವರು ತುಳಸಿ ಸೇವಿಸಿದರೆ ಸುಸ್ತು ಕಡಿಮೆಯಾಗುತ್ತದೆ.
ತ್ವಚೆಯ ಸೌಂದರ್ಯ:
ಹೊಳೆಯುವ ತ್ವಚೆಗೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ತುಳಸಿ ರಸವನ್ನು ನೀರಿನೊಂದಿಗೆ ಬೆರೆಸಿ ಸೇವಿಸಬೇಕು. ತ್ವಚೆಯ ಸಾಂದ್ರತೆ ಹೆಚ್ಚಾಗುತ್ತದೆ. ತುಳಸಿ ಪುಡಿಯನ್ನು ಮುಖಕ್ಕೆ ಫೇಶಿಯಲ್ ನಂತೆಯೂ ಬಳಸುತ್ತಾರೆ. ಇದರಿಂದ ಕಪ್ಪುಕಲೆ, ಸುಕ್ಕು ಕಡಿಮೆಯಾಗಿ ಚರ್ಮ ತಾಜಾತನದಿಂದ ಹೊಳೆಯುತ್ತದೆ.
ಒತ್ತಡ ನಿಯಂತ್ರಣ:
ತುಳಸಿ ಎಲೆ ಸೇವನೆ ಒತ್ತಡ ಕಡಿಮೆಗೊಳಿಸುತ್ತದೆ. ಇದು ರಕ್ತದೊತ್ತಡ ಹಾಗೂ ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುತ್ತದೆ.
ರೋಗನಿರೋಧಕ ಶಕ್ತಿ ಹೆಚ್ಚಳ:
ಆರೋಗ್ಯವಂತರೂ ಕೂಡಾ ನಿತ್ಯ ತುಳಸಿ ಎಲೆಗಳನ್ನು ದಿನಕ್ಕೆರಡು ಬಾರಿ ಸೇವಿಸಬೇಕು. ಇದು ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಸಹಾಯ ಮಾಡುತ್ತದೆ.
ಚಿಕ್ಕ ಮಕ್ಕಳ ಆರೋಗ್ಯ ಸಮಸ್ಯೆಗೆ:
ಚಿಕ್ಕಮಕ್ಕಳಲ್ಲಿ ಪದೆ ಪದೆ ಕಾಣಿಸಿಕೊಳ್ಳುವ ನೆಗಡಿ, ಜ್ವರ, ವಾಂತಿ, ಭೇದಿ ಎಲ್ಲದಕ್ಕೂ ತುಳಸಿ ರಸ ಸಹಾಯಕವಾಗಿದೆ.