Advertisement
ಯಾವುದೇ ರೀತಿಯ ಮುಂಜಾಗ್ರತೆಗಳನ್ನು ಪಾಲಿಸದೆ ಬಾವಿಗಿಳಿಯುವುದೇ ಇಂತಹ ದುರಂತಗಳಿಗೆ ಪ್ರಮುಖ ಕಾರಣವಾಗುತ್ತಿದೆ ಎಂದು ಪೊಲೀಸ್ ಮತ್ತು ಅಗ್ನಿಶಾಮಕ ದಳ ಹೇಳುತ್ತಿದೆ. ಈ ಹಿಂದೆ ರಾಟೆ ಮತ್ತು ಹಗ್ಗ ಬಳಸಿ ಬಾವಿಯಿಂದ ನೀರು ಸೇದಲಾಗುತ್ತಿತ್ತು.
Related Articles
Advertisement
ಈಗ ಹೆಚ್ಚಿನ ಬಾವಿಗಳಲ್ಲಿ ಮೋಟಾರು ಪಂಪು ಇರಿಸಿ ತೆಗೆಯುವುದರಿಂದಾಗಿ ಬಾವಿ ನೀರಿನಲ್ಲಿ ಸಂಚಲನ ಉಂಟಾಗದೆ ಅಡಿ ಭಾಗದಿಂದ ಬರುವ ವಿಷ ವಾಯು ಹೊರ ಹೋಗದೆ ಬಾವಿಯೊಳಗೆ ಉಳಿದುಕೊಳ್ಳುತ್ತದೆ.
ಅದರಿಂದಾಗಿ ಬಾವಿಯೊಳಗೆ ಪ್ರಾಣವಾಯುವಾದ ಆಮ್ಲಜನಕ ಉತ್ಪತ್ತಿಯಾಗದ ಸ್ಥಿತಿಯೂ ಉಂಟಾಗುತ್ತಿದೆ. ಅತೀ ಹೆಚ್ಚು ಆಳದ ಬಾವಿಗಳಲ್ಲಿ ಅತೀ ಹೆಚ್ಚು ವಿಷ ವಾಯು ಉತ್ಪತ್ತಿಯಾಗಿ ಅದು ಆಮ್ಲಜನಕದ ಕೊರತೆ ಸೃಷ್ಟಿಸುತ್ತಿದೆ. ಅದನ್ನು ಮನಗಾಣದೆ ಮತ್ತು ಅಗತ್ಯದ ಯಾವುದೇ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಪಾಲಿಸದೆ ಅಂತಹ ಬಾವಿಗೆ ಇಳಿಯುವವರನ್ನು ಒಂದೆಡೆ ಆಮ್ಲಜನಕದ ಕೊರತೆ ಮತ್ತು ಇನ್ನೊಂದೆಡೆ ವಿಷವಾಯು ಮಧ್ಯೆ ಸಿಲುಕಿ ಪ್ರಾಣಾಪಾಯಕ್ಕೂ ದಾರಿ ಮಾಡಿಕೊಡುತ್ತದೆ. ನೀರಿನ ಮೇಲೆ ಎತ್ತಿ ನಿಲ್ಲುವ ರೀತಿಯ ಮೋಟಾರುಗಳನ್ನು ಉಪಯೋಗಿಸುವುದರಿಂದ ಬಾವಿಗಳಲ್ಲಿ ವಿಷಕಾರಿಯಾದ ಕಾರ್ಬನ್ ಮೋನೋಕ್ಸೈಡ್ ಉತ್ಪತ್ತಿಯಾಗುತ್ತದೆ.
ಅಂತಹ ಬಾವಿಗೆ ಇಳಿದಲ್ಲಿ ಅದು ಪ್ರಾಣಾಪಾಯಕ್ಕೂ ದಾರಿ ಮಾಡಿಕೊಡುತ್ತದೆ. ಅದರಿಂದಾಗಿ ಬಾವಿಗೆ ಇಳಿಯುವ ಮೊದಲು ಅದರೊಳಗೆ ಆಮ್ಲಜನಕ ಸಾನಿಧ್ಯ ಇದೆಯೇ ಮತ್ತು ವಿಷಕಾರಿಯಾದ ಕಾರ್ಬನ್ ಮೋನೋಕ್ಸೈಡ್ ಹರಡಿದೆಯೇ ಎಂಬುವುದನ್ನು ಮೊದಲು ಖಾತರಿಪಡಿಸಿದ ಬಳಿಕವಷ್ಟೇ ಬಾವಿಗಿಳಿಯಬೇಕು.ಎಂದು ಪೊಲೀಸ್ ಇಲಾ ಖೆಯ ಫೇಸ್‌ಬುಕ್ ಪೇಜ್ ನಲ್ಲಿ ೆ ವಿವರಿಸಿದೆ.
ಗಮನಿಸಬೇಕಾದ ಅಂಶಗಳು ಬಾವಿಗೆ ಇಳಿಯುವ ಮೊದಲು ಕಾಗದ ಅಥವಾ ಮೇಣದ ಬತ್ತಿ ಉರಿಸಿ ಹಗ್ಗದ ಸಹಾಯದಿಂದ ಅದನ್ನು ಬಾವಿಗಿಳಿಸಬೇಕು. ಬೆಂಕಿ ನಂದದೆ ಬಾವಿಯ ನೀರಿನ ಮಟ್ಟದ ತನಕ ತಲುಪಿದಲ್ಲಿ ಆ ಬಾವಿಯಲ್ಲಿ ಆಮ್ಲಜನಕವಿದೆ ಎಂಬುದನ್ನು ಖಾತರಿಪಡಿಸುತ್ತದೆ. ಉರಿಯುತ್ತಿರುವ ಮೇಣದ ಬತ್ತಿಯನ್ನು ಬಾವಿಗೆ ಇಳಿಸುತ್ತಿರುವಂತೆಯೇ ನಂದಿ ಹೋದಲ್ಲಿ ಆ ಭಾಗದಿಂದ ಕೆಳಭಾಗದಲ್ಲಿ ಆಮ್ಲಜನಕ ವಿಲ್ಲ ಎಂಬುದನ್ನು ಖಾತರಿಪಡಿಸಬಹುದು. ಬಾವಿಗೆ ಯಾರಾದರೂ ಪ್ರಜ್ಞೆ ತಪ್ಪಿ ಬಿದ್ದಲ್ಲಿಮೇಲ್ಗಡೆಯಿಂದ ಅವರ ಮೇಲೆ ನಿರಂತರವಾಗಿ ನೀರು ಸಿಂಪಡಿಸಬೇಕೆಂದು ಪೊಲೀಸ್ ಇಲಾಖೆ ಸಲಹೆ ನೀಡಿದೆ. ಬಾವಿಯೊಳಗೆ ಕಾರ್ಬನ್ ಮೋನೋಕ್ಸೈಡ್ ಅಂಶವಿದ್ದು ಅದು ಉಸಿರಾಟದ ವೇಳೆ ಶ್ವಾಸಕೋಶದೊಳಗೆ ಪ್ರವೇಶಿಸಿದ್ದಲ್ಲಿ ಪ್ರಜ್ಞೆ ಕಳೆದು ಕುಸಿದು ಬೀಳುವ ಸಾಧ್ಯತೆ ಉಂಟಾಗುತ್ತದೆ. ಬಾವಿಯೊಳಗೆ ಆಮ್ಲಜನಕ
ಬಾವಿಯೊಳಗೆ ಆಮ್ಲಜನಕ ಲಭಿಸಬೇಕಾಗಿದ್ದಲ್ಲಿ ನೀರನ್ನು ಹಗ್ಗದ ಸಹಾಯದಿಂದ ಸೇದುವ ಮೂಲಕ ತೆಗೆಯಬೇಕು. ಹೀಗೆ ನೀರು ಸೇದುವ ವೇಳೆ ನೀರು ತುಂಬಿದ ಕೊಡವನ್ನು ಹಲವು ಬಾರಿ ನೀರಿನ ಮೇಲೆ ಕೆಳಗೆ ಮಾಡಿ ನೀರಿನಲ್ಲಿ ಸಂಚಲನ ಸೃಷ್ಟಿಸಬೇಕು. ಅಥವಾ ಸೇದಿದ ನೀರನ್ನು ಹಲವು ಬಾರಿ ಬಾವಿಗೆ ಒಯ್ಯಬೇಕು. ಅಥವಾ ಮರದ ಕೊಂಬೆ ಬಳಸಿ ಅದನ್ನು ಹಲವು ಬಾರಿ ನೀರಿನೊಳಗೆ ಇಳಿಸಿ ಮೇಲೆ ಕೆಳಗೆ ನೀರಿನ ಸಂಚಲನ ಸೃಷ್ಟಿಸಬೇಕು. ಅದರಿಂದ ಬಾವಿಯೊಳಗೆ ಆಮ್ಲಜನಕ ಸಾನಿಧ್ಯ ಹೆಚ್ಚಾಗುತ್ತದೆ. ಸೀಮೆ ಎಣ್ಣೆ ಚಾಲಿತ ಮೋಟಾರುಗಳನ್ನು ನೀರಿಗಾಗಿ ಮತ್ತು ಬಾವಿಗಳಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಬಳಸಬಾರದು.ಕುಸಿದು ಬಿದ್ದ ವ್ಯಕ್ತಿಯನ್ನು ತತ್‌ಕ್ಷಣ ಮೇಲಕ್ಕೆತ್ತಿ ಅವರಿಗೆ ಚಿಕಿತ್ಸೆ ನೀಡದಿದ್ದಲ್ಲಿ ಪ್ರಾಣ ಹೋಗಬಹುದು ಎಂದು ಪೊಲೀಸ್ ಇಲಾ ಖೆಯ ಫೇಸ್‌ಬುಕ್ ಪೇಜ್ ಮುನ್ನೆಚ್ಚರಿಕೆ ನೀಡಿದೆ. – ಪ್ರದೀಪ್ ಬೇಕಲ್