Advertisement

ರಾಜ್ಯದಲ್ಲಿ ಹೆಚ್ಚುತ್ತಿರುವ ವಾಹನ ಅಪಘಾತ ; 6 ತಿಂಗಳಲ್ಲಿ 2,464 ಪ್ರಾಣ ಹಾನಿ

10:36 PM Nov 03, 2019 | Team Udayavani |

ಕಾಸರಗೋಡು: ವಾಹನ ಚಲಾಯಿಸುವ ವೇಳೆ ಪಾಲಿಸಬೇಕಾದ ಸಾರಿಗೆ ಕಾನೂನುಗಳು ಧಾರಾಳವಿದ್ದರೂ ಅದನ್ನು ಪಾಲಿಸಲು ಕೆಲವರು ನಿರಾಸಕ್ತಿ ತೋರುವಂತಿದೆ. ಅದರ ಪರಿಣಾಮವಾಗಿ ರಾಜ್ಯದಲ್ಲಿ ವಾಹನ ಅಪಘಾತಗಳು ಯಾವುದೇ ರೀತಿಯ ಮಿತಿ ಇಲ್ಲದೆ ಪ್ರತಿ ವರ್ಷ ಹೆಚ್ಚುತ್ತಾ ಸಾಗುತ್ತಿವೆ. ಅಪಘಾತಗಳಲ್ಲಿ ಸಾವನ್ನಪ್ಪುವವರಲ್ಲಿ ಹೆಚ್ಚಿನವರು ಯುವಕರೇ ಆಗಿದ್ದಾರೆ. ಜೂನ್‌ ತಿಂಗಳ ತನಕದ ಲೆಕ್ಕಾಚಾರ ಪ್ರಕಾರ ರಾಜ್ಯದಲ್ಲಿ 21,509ರಷ್ಟು ವಾಹನ ಅಪಘಾತಗಳು ನಡೆದಿವೆ. ಅದರಲ್ಲಿ 2,464 ಮಂದಿ ಸಾವನ್ನಪ್ಪಿದ್ದಾರೆ. 26,559 ಮಂದಿ ಗಾಯಗೊಂಡಿದ್ದರು.

Advertisement

ಈ ವರ್ಷವನ್ನು ಹೊರತು ಪಡಿಸಿದರೆ ಕಳೆದ 9 ವರ್ಷಗಳಲ್ಲಿ ರಾಜ್ಯದಲ್ಲಿ ನಡೆದ ಅಪಘಾತಗಳು, ಅದರಲ್ಲಿ ಸಾವನ್ನಪ್ಪಿದವರು ಮತ್ತು ಗಾಯಗೊಂಡವರ ಸಂಖ್ಯೆ ಅನುಕ್ರಮವಾಗಿ ಈ ರೀತಿ ಇದೆ.

2001ರಲ್ಲಿ 38,361 ಅಪಘಾತಗಳು ನಡೆದರೆ ಅದರಲ್ಲಿ 2,674 ಮಂದಿ ಸಾವನ್ನಪ್ಪಿದ್ದಾರೆ. 49,675 ಮಂದಿ ಗಾಯಗೊಂಡಿದ್ದಾರೆ.

2004ರಲ್ಲಿ 41,219 ಅಪಘಾತ ಗಳಲ್ಲಾಗಿ 3,059 ಮಂದಿ ಸಾವನ್ನಪ್ಪಿದ್ದಾರೆ. 54,228 ಮಂದಿ ಗಾಯಗೊಂಡಿದ್ದಾರೆ. 2005ರಲ್ಲಿ 42,363 ಅಪಘಾತಗಳು ನಡೆದರೆ ಅದರಲ್ಲಿ 3203 ಮಂದಿ ಸಾವನ್ನಪ್ಪಿದ್ದಾರೆ. 51,124 ಮಂದಿ ಗಾಯಗೊಂಡಿದ್ದಾರೆ. 2009ರಲ್ಲಿ 34,433 ಅಪಘಾತಗಳು ನಡೆದಿದ್ದು, ಅದರಲ್ಲಿ 3,831 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

41401 ಮಂದಿ ಗಾಯಗೊಂಡಿದ್ದಾರೆ. 2010ರಲ್ಲಿ 35,082 ಅಪಘಾತಗಳು ನಡೆದಿದ್ದು, 3,950 ಮಂದಿ ಸಾವನ್ನಪ್ಪಿದ್ದಾರೆ. 41,473 ಮಂದಿ ಗಾಯಗೊಂಡಿದ್ದರು. 2015ರಲ್ಲಿ 39,014 ಅಪಘಾತಗಳು ನಡೆದಿದ್ದು, 4196 ಮಂದಿ ಸಾವನ್ನಪ್ಪಿದ್ದಾರೆ. 43,735 ಮಂದಿ ಗಾಯಗೊಂಡಿದ್ದರು. 2016ರಲ್ಲಿ 39,420 ಅಪಘಾತಗಳು ಸಂಭವಿಸಿದ್ದು, 4,287 ಮಂದಿ ಸಾವನ್ನಪ್ಪಿದ್ದಾರೆ. 44,108 ಮಂದಿ ಗಾಯಗೊಂಡಿದ್ದರು. 2017ರಲ್ಲಿ 38,470 ಅಪಘಾತಗಳು ಸಂಭವಿಸಿದ್ದು, 4,131 ಮಂದಿ ಸಾವನ್ನಪ್ಪಿದ್ದಾರೆ. 42,671 ಮಂದಿ ಗಾಯಗೊಂಡಿದ್ದರು. 2018ರಲ್ಲಿ 40,181 ವಾಹನ ಅಪಘಾತಗಳು ಸಂಭವಿಸಿದ್ದು, 4,303 ಮಂದಿಯ ಪ್ರಾಣ ಅಪಹರಿಸಿತ್ತು. 45,458 ಮಂದಿ ಗಾಯಗೊಂಡಿದ್ದರು.

Advertisement

15,702 ಅಪಘಾತ
ಕಾಸರಗೋಡು ಜಿಲ್ಲೆಯಲ್ಲಿ ಈ ಅವಧಿಯಲ್ಲಿ 535 ಅಪಘಾತಗಳು ನಡೆದರೆ 73 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಅಮಿತ ವೇಗದಿಂದ ವಾಹನ ಚಲಾಯಿಸಿದ ಕಾರಣ ರಾಜ್ಯದಲ್ಲಿ ಈ ವರ್ಷದ ಆರು ತಿಂಗಳೊಳಗೆ 15,702 ಅಪಘಾತಗಳು ನಡೆದು 1,651 ಮಂದಿ ಸಾವನ್ನಪ್ಪಿದ್ದಾರೆ. 19,567 ಮಂದಿ ಗಾಯಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next