ಬೆಂಗಳೂರು: ರಾಜ್ಯದ ವಿವಿಧ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ 504 ಗುತ್ತಿಗೆ ವೈದ್ಯರ ವೇತನವನ್ನು 45,000 ರೂ.ಗಳಿಂದ 60,000 ರೂ.ಗಳಿಗೆ ಹೆಚ್ಚಿಸಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ.
ವೇತನ ಹೆಚ್ಚಳದೊಂದಿಗೆ ಸೇವೆ ಖಾಯಂಗೊಳಿಸಬೇಕು ಎಂದು ಆಗ್ರಹಿಸಿ ಅನೇಕ ದಿನಗಳಿಂದ ಗುತ್ತಿಗೆ ವೈದ್ಯರು ಪ್ರತಿಭಟನೆ ಮಾಡುತ್ತಿದ್ದರು.
ಸರಕಾರವು ಸ್ಪಂದಿಸದ ಹಿನ್ನೆಲೆ ಯಲ್ಲಿ ಜು.1ರಂದು ಸರಕಾರಿ ಆರೋಗ್ಯ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದ 507 ಗುತ್ತಿಗೆ ವೈದ್ಯರು ಜಿಲ್ಲಾಧಿ ಕಾರಿಗಳಿಗೆ ಸಾಮೂಹಿಕ ರಾಜೀನಾಮೆ ಸಲ್ಲಿಸಿದ್ದರು.
ಜು.8ರಿಂದ ಕೆಲಸ ಬಹಿಷ್ಕರಿಸುವುದಾಗಿ ಹೇಳಿದ್ದರು. ಸದ್ಯ ಸರಕಾರ ವೇತನ ಹೆಚ್ಚಿಸಿ ಆದೇಶ ಹೊರಡಿಸಿದೆ.
ಇನ್ನೊಂದೆಡೆ ಸರಕಾರ ಕೇವಲ ವೇತನ ಹೆಚ್ಚಿಸಿದ್ದು, ಸೇವಾ ಭದ್ರತೆ ನೀಡಿಲ್ಲ.ಸಾವಿರಾರು ಹುದ್ದೆಗಳು ಖಾಲಿ ಇದ್ದರೂ ನಮ್ಮನ್ನು ಖಾಯಂ ಮಾಡಿಕೊಂಡಿಲ್ಲ.
ವೇತನಕ್ಕಿಂತ ಸೇವಾಭದ್ರತೆಯಾಗಬೇಕಿದೆ ಎಂದು ಹಾಸನದ ವೈದ್ಯರೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.