Advertisement

ಅಂಪಾರು: ಹೆಚ್ಚುತ್ತಿರುವ ರಾಜ್ಯ ಹೆದ್ದಾರಿ ಬದಿ ಬರೆ ಕುಸಿತ

12:15 PM Sep 13, 2022 | Team Udayavani |

ಅಂಪಾರು: ಕುಂದಾಪುರ- ಸಿದ್ದಾಪುರ – ತೀರ್ಥಹಳ್ಳಿ ರಾಜ್ಯ ಹೆದ್ದಾರಿಯ ಅಂಪಾರು ಸಮೀಪದ ಜಂಕ್ಷನ್‌ಗಿಂತ ತುಸು ದೂರದಲ್ಲಿ ಬರೆಯೊಂದು ಕಳೆದ ತಿಂಗಳ ಮಳೆಗೆ ಕುಸಿಯಲು ಆರಂಭವಾಗಿದ್ದು, ದಿನೇ ದಿನೇ ಕುಸಿಯುತ್ತಿದೆ. ಆದಷ್ಟು ಬೇಗ ಎಚ್ಚೆತ್ತುಕೊಂಡು ದುರಸ್ತಿಗೆ ಮುಂದಾಗದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯ ಹೆದ್ದಾರಿಗೆ ಆಪತ್ತು ಎದುರಾಗುವ ಸಾಧ್ಯತೆಗಳು ಇಲ್ಲಿದಿಲ್ಲ.

Advertisement

ಅಂಪಾರು ಜಂಕ್ಷನ್‌ನ ಅನತಿ ದೂರದಲ್ಲಿಯೇ ಸಿದ್ದಾಪುರ ಕಡೆಗೆ ಸಂಚರಿಸುವ ಮಾರ್ಗದ ಬದಿ ಬರೆ ಭಾರೀ ಪ್ರಮಾಣದಲ್ಲಿ ಕುಸಿಯುತ್ತಿದೆ. ಕಳೆದ ಆಗಸ್ಟ್‌ನಲ್ಲಿ ಸುರಿದ ಮಳೆಗೆ ಈ ಬರೆ ಕುಸಿಯಲು ಆರಂಭವಾಗಿದೆ.

ಈವರೆಗೆ ಕುಸಿತ ತಡೆಯಲು ಸರಿಯಾದ ಮಾರ್ಗೋಪಾಯಗಳನ್ನು ಕಂಡುಕೊಳ್ಳದ ಕಾರಣ, ಮತ್ತಷ್ಟು ಕುಸಿಯುತ್ತಿದೆ.

ಪ್ರಮುಖ ಹೆದ್ದಾರಿ

ಕುಂದಾಪುರದಿಂದ ಮಲೆನಾಡಿಗೆ ಸಂಪರ್ಕಿಸುವ ಪ್ರಮುಖ ಕೊಂಡಿಯಾಗಿದೆ. ಸಿದ್ದಾಪುರ, ಹೊಸಂಗಡಿ, ತೀರ್ಥಹಳ್ಳಿ, ಶಿವಮೊಗ್ಗ ಕಡೆಗೆ ಈ ಮಾರ್ಗದಲ್ಲಿ ನಿತ್ಯ ಸಾವಿರಾರು ವಾಹನಗಳು ಸಂಚರಿಸುತ್ತವೆ. ಕುಂದಾಪುರ – ಸಿದ್ದಾಪುರ, ಕುಂದಾಪುರ – ತೀರ್ಥಹಳ್ಳಿ ಕಡೆಗೆ ದಿನಕ್ಕೆ ಹತ್ತಾರು ಬಸ್‌ಗಳು ಸಂಚರಿಸುತ್ತವೆ.

Advertisement

ಸೈಡ್‌ವಾಲ್‌ಗ‌ೂ ಅಪಾಯ

ಸುಮಾರು 50 ಮೀ. ದೂರದವರೆಗೆ ಉದ್ದಕ್ಕೂ ಬರೆ ಕುಸಿದಿದೆ. ಈ ಹಿಂದೆ ಜಂಕ್ಷನ್‌ ಕಾಮಗಾರಿ ವೇಳೆ ಬರೆ ಕುಸಿಯದಿರಲೆಂದು ನಿರ್ಮಿಸಿದ ಸೈಡ್‌ವಾಲ್‌ ಮೇಲೂ ಭಾರೀ ಪ್ರಮಾಣದಲ್ಲಿ ಬರೆಯ ಮಣ್ಣು ಕುಸಿದಿದೆ. ಅದಲ್ಲದೆ ಒಂದೆಡೆ ಸೈಡ್‌ವಾಲ್‌ ಕೂಡ ವಾಲಿಕೊಂಡಿದೆ. ಹೀಗೆ ಮುಂದುವರಿದರೆ ಭವಿಷ್ಯದಲ್ಲಿ ಸೈಡ್‌ವಾಲ್‌ಗ‌ೂ ಅಪಾಯ ಎದುರಾಗುವ ಸಾಧ್ಯತೆಗಳಿವೆ.

ದುರಸ್ತಿಗೆ ಮನವಿ: ನಾವು ಅಂಪಾರು ಗ್ರಾ.ಪಂ.ನಿಂದ ಈಗಾಗಲೇ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಿಗೆ ಬರೆ ಕುಸಿಯುತ್ತಿರುವ ಬಗ್ಗೆ, ದುರಸ್ತಿ ಮಾಡುವಂತೆ ಮನವಿ ಮಾಡಿಕೊಂಡಿದ್ದೇವೆ. ಅದಲ್ಲದೆ ಹೆದ್ದಾರಿಗೆ ಕುಸಿಯುವ ಭೀತಿಯಲ್ಲಿದ್ದ ಒಂದೆರಡು ಅಪಾಯಕಾರಿ ಮರಗಳನ್ನು ತೆಗೆಯಲು ಅರಣ್ಯ ಇಲಾಖೆಯವರಿಗೆ ಮನವಿ ಮಾಡಿದ್ದೆವು. – ಅಶೋಕ ಕೆ., ಅಂಪಾರು ಗ್ರಾ.ಪಂ. ಮಾಜಿ ಉಪಾಧ್ಯಕ್ಷ

ಶೀಘ್ರ ದುರಸ್ತಿಗೆ ಕ್ರಮ: ಅಂಪಾರಿನ ಹೆದ್ದಾರಿ ಬದಿ ಬರೆ ಕುಸಿದಿರುವ ಬಗ್ಗೆ ಈಗಾಗಲೇ ಭೇಟಿ ನೀಡಿ, ಪರಿಶೀಲಿಸಿದ್ದೇವೆ. ಪ್ರಾಕೃತಿಕ ವಿಕೋಪದಡಿ ದುರಸ್ತಿ ಮಾಡಲು ಕ್ರಮ ಕೈಗೊಂಡಿದ್ದು, ಮಳೆ ಕಡಿಮೆಯಾದ ಕೂಡಲೇ ಕಾಮಗಾರಿ ಕೈಗೊಳ್ಳಲಾಗುವುದು. – ದುರ್ಗಾದಾಸ್‌, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌, ಲೋಕೋಪಯೋಗಿ ಇಲಾಖೆ ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next