Advertisement

ಹೆಚ್ಚುತ್ತಿರುವ ಸೋಲಾರ್‌ ದೀಪದ ಬ್ಯಾಟರಿ ಕಳ್ಳತನ

01:00 AM Mar 13, 2019 | Team Udayavani |

ಹೆಬ್ರಿ: ಕುಚ್ಚಾರು  ಸುತ್ತಮುತ್ತಲಿನ ಪ್ರದೇಶದಲ್ಲಿ ರಸ್ತೆಬದಿಯ ಸೋಲಾರ್‌ ದೀಪಗಳ ಬ್ಯಾಟರಿ ಕಳ್ಳತನ ಹೆಚ್ಚುತ್ತಿದ್ದು ತಂಡದಿಂದ ಈ ಕೃತ್ಯ ನಡೆಯುತ್ತಿದೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.

Advertisement

ಪಂ. ವ್ಯಾಪ್ತಿಯ ಹಾಲಿಕೋಡ್ಲು ಶಾಲೆಯ ಬಳಿ ರಸ್ತೆ ಬದಿಯಲ್ಲಿ ಹಾಕಲಾಗಿದ್ದ  ಸೋಲಾರ್‌ ದೀಪದ ಬ್ಯಾಟರಿ ಹಾಗೂ ಹಾಲಿಕೊಡ್ಲು ಸಮೀಪ ಕೆಲವೊಂದು ಬ್ಯಾಟರಿ ಕಳ್ಳತನವಾಗಿದೆ.

ಈ ಹಿಂದೆ ಅಜೆಕಾರು ಸುತ್ತಮುತ್ತಲಿನ ಪ್ರದೇಶದಲ್ಲಿ ಬ್ಯಾಟರಿ ಕಳ್ಳತನವಾಗುವ ಬಗ್ಗೆ  ಪೊಲೀಸರು ತನಿಖೆ ನಡೆಸಿ ಕಳ್ಳರನ್ನು ಬಂಧಿಸಿದ್ದು, ಈಗ ಮತ್ತೆ ಅದೇ ತಂಡ ಈ ಭಾಗದಲ್ಲಿಯೂ  ಕಳ್ಳತನ ಮಾಡುತ್ತಿದೆ ಎಂಬ ಸಂಶಯ ಸ್ಥಳೀಯರಿಂದ ವ್ಯಕ್ತವಾಗಿದೆ.

ತಂಡದ ಕೃತ್ಯ 
ಉಡುಪಿ, ಕಾರ್ಕಳ ಹಾಗೂ ಹೆಬ್ರಿ ತಾಲೂಕು ವ್ಯಾಪ್ತಿಯ ಎಲ್ಲಾ ಪಂಚಾಯತ್‌ ಪ್ರದೇಶಗಳಲ್ಲಿ ಅಳವಡಿಸಲಾದ ಬ್ಯಾಟರಿಗಳ ಕಳ್ಳತನ ನಿರಂತರವಾಗಿದೆ. ಈ ಬಗ್ಗೆ ಸ್ಥಳೀಯರು, ಪಂಚಾಯತ್‌ ಹಾಗೂ ಪೊಲೀಸ್‌ ಇಲಾಖೆಗೆ ವಿಶೇಷ ಗಮನ ನೀಡಿ ಕಳ್ಳರನ್ನು ಬಂಧಿಸುವಂತೆ ತಿಳಿಸಿದ್ದಾರೆ.

ಸೋಲಾರ್‌ ಬ್ಯಾಟರಿಯನ್ನು ಅಳವಡಿಸಿರುವವರೇ ಈ ಕೃತ್ಯ ಎಸಗಿರಬಹುದೇ ಎಂಬ ಸಂಶಯವೂ ಗ್ರಾಮಸ್ಥರಲ್ಲಿ ವ್ಯಕ್ತವಾಗಿದೆ. 

Advertisement

ಈ ಬಗ್ಗೆ ಪೊಲೀಸ್‌  ಇಲಾಖೆ ಸಮಗ್ರವಾಗಿ ತನಿಖೆ ನಡೆಸುವಂತೆ ಗ್ರಾಮಸ್ಥರು ಮನವಿ ಸಲ್ಲಿಸಿದ್ದಾರೆ.

ಬಂಧಿಸಿ
ಈ ಭಾಗದಲ್ಲಿ ಬ್ಯಾಟರಿ ಕಳ್ಳತನ ಮಾಡುವ ಜಾಲಹೆಚ್ಚಾಗುತ್ತಿದ್ದು ಇಲಾಖೆ ಈ ಬಗ್ಗೆ ಗಮನಿಸಿ ತನಿಖೆ ನಡೆಸುವಂತೆ ಪಂಚಾಯತ್‌ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಗಿದೆ. ಈ ಬಗ್ಗೆ ಹೆಬ್ರಿ ಠಾಣೆಗೆ ದೂರು ನೀಡಲಾಗಿದ್ದು ಕಳ್ಳರನ್ನು ಪತ್ತೆ ಹಚ್ಚಿ ಬಂಧಿಸುವಂತೆ ತಿಳಿಸಲಾಗಿದೆ.
-ರಾಮಣ್ಣ ಪೂಜಾರಿ,  ಅಧ್ಯಕ್ಷರು,ಗ್ರಾ.ಪಂ.ಕುಚ್ಚಾರು

ಕಾರ್ಯಾಚರಣೆ
ಕುಚ್ಚಾರು  ಪ್ರದೇಶದಲ್ಲಿ ಬ್ಯಾಟರಿ ಕಳ್ಳತನವಾಗುವ ಬಗ್ಗೆ ಮಾಹಿತಿಯಿದ್ದು  ರಾತ್ರಿ ಹೊತ್ತು ವಿಶೇಷ ತನಿಖಾ ತಂಡದೊಂದಿಗೆ ಕಾರ್ಯಾಚರಣೆ ಮಾಡಲಾಗುತ್ತದೆ.

-ಸತೀಶ್‌ ಬಲ್ಲಾಳ್‌,  ಠಾಣಾಧಿಕಾರಿ ,ಹೆಬ್ರಿ ಪೊಲೀಸ್‌ ಠಾಣೆ

Advertisement

Udayavani is now on Telegram. Click here to join our channel and stay updated with the latest news.

Next