Advertisement

ಹೆಚ್ಚುತ್ತಿದೆ ರಸ್ತೆ ಅಪಘಾತಗಳು

01:11 AM Nov 09, 2020 | mahesh |

ಮಣಿಪಾಲ: ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ 2019ರ ರಸ್ತೆ ಅಪಘಾತಗಳ ವರದಿ ಬಿಡುಗಡೆ ಮಾಡಿದೆ. ಭಾರತದಲ್ಲಿ ವರ್ಷಕ್ಕೆ ಸರಾಸರಿ 4.5 ಲಕ್ಷಕ್ಕೂ ಅಧಿಕ ಅಪಘಾತಗಳು ಸಂಭವಿಸುತ್ತಿವೆ. ಅತೀ ಹೆಚ್ಚು ರಸ್ತೆ ಅಪಘಾತಗಳು ಸಂಭವಿಸುವ ದೇಶಗಳ ಪೈಕಿ ಭಾರತ ಮೂರನೇ ಸ್ಥಾನದಲ್ಲಿದ್ದು, ಅಪಘಾತಗಳಲ್ಲಿ ಸಾವನ್ನಪ್ಪುತ್ತಿರುವವರ ಪ್ರಮಾಣ ಮಾತ್ರ ಇತರೆಲ್ಲ ದೇಶಗಳಿಗಿಂತ ನಾಲ್ಕು ಪಟ್ಟು ಹೆಚ್ಚಾಗಿದ್ದು ವಿಶ್ವದಲ್ಲೇ ಗರಿಷ್ಠವಾಗಿದೆ.

Advertisement

ಪ್ರತೀ ಗಂಟೆಗೆ 17 ಸಾವು
ವಿಶ್ವದ ಇತರ ದೇಶಗಳಿಗೆ ಹೋಲಿಸಿದಲ್ಲಿ ಭಾರತದಲ್ಲಿನ ರಸ್ತೆಗಳು ಕಳಪೆ ಮಟ್ಟದ್ದಾಗಿವೆ. ರಸ್ತೆಗಳ ದುರವ ಸ್ಥೆಯಿಂದಾಗಿ ಪ್ರತೀ ಗಂಟೆಗೆ 17 ಮಂದಿ ಸಾವಿಗೀಡಾಗುತ್ತಿದ್ದಾರೆ. ದೇಶ ದಲ್ಲಿ ಪ್ರತೀ ದಿನ 1,230 ಅಪಘಾ ತಗಳು ಸಂಭವಿಸುತ್ತಿದ್ದು, ಅವು ಗಳಲ್ಲಿ 414 ಮಂದಿ ಸಾವನ್ನಪ್ಪುತ್ತಿದ್ದಾರೆ. ಈ ಪೈಕಿ ಪ್ರತೀ 5 ಮಂದಿಯಲ್ಲಿ ನಾಲ್ವರು ಪುರುಷರಾಗಿದ್ದಾರೆ.

4 ಪಟ್ಟು ಹೆಚ್ಚು
2019ರಲ್ಲಿ ಶೇ.71.1ರಷ್ಟು ಅಪಘಾತಗಳಿಗೆ ಅತಿಯಾದ ವೇಗ ಕಾರಣವಾಗಿದ್ದು, ಆ ಪೈಕಿ ಶೇ.67.3ರಷ್ಟು ಸಾವು ದಾಖಲಾಗಿದೆ. ಅಮೆರಿಕ ಮತ್ತು ಜಪಾನ್‌ಗಿಂತ ಭಾರತದಲ್ಲಿ ಅಪ ಘಾತ ಪ್ರಮಾಣ ಕಡಿಮೆ ಇದೆ. ಆದರೆ ಮರಣ ಪ್ರಮಾಣ ಮಾತ್ರ ನಾಲ್ಕು ಪಟ್ಟು ಹೆಚ್ಚಾಗಿದೆ. ಅತೀ ವೇಗ ಮತ್ತು ಚಾಲಕರು ವಾಹನ ಚಾಲನೆ ಸಂದರ್ಭದಲ್ಲಿ ಮೊಬೈಲ್‌ ಬಳಸುತ್ತಿರುವುದು ಅತೀ ಹೆಚ್ಚು ಅಪಘಾತಗಳು ಸಂಭವಿಸಲು ಪ್ರಮುಖ ಕಾರಣಗಳಾಗಿವೆ. ಇಂಡೀಕೇಟರ್‌ಗಳನ್ನು ಬಳಸಿ ಹೆಚ್ಚುತ್ತಿರುವ ಅಪಘಾತಗಳಿಗೆ ಸಂಚಾರ ನಿಯಮಗಳನ್ನು ಸರಿಯಾಗಿ ಪಾಲಿಸದೇ ಇರು ವುದು ಕಾರಣವಾಗಿದೆ. ಮುಖ್ಯವಾಗಿ ಇಂಡೀಕೇಟರ್‌ಗಳನ್ನು ಸರಿಯಾಗಿ ಬಳಸದೇ ಇರುವ ಕಾರಣ ಗೊಂದಲಗಳು ಉಂಟಾಗಿ ಅಪಘಾತಗಳಿಗೆ ಎಡೆಮಾಡಿಕೊಡುತ್ತಿವೆ. ಹೆದ್ದಾರಿಗಳಲ್ಲಿ ಮತ್ತು ಇತರ ರಸ್ತೆಗಳಲ್ಲಿ ಚಲಿಸುವ ಸಂದರ್ಭ ಇಂಡಿಕೇಟರ್‌ಗಳನ್ನು ತಪ್ಪದೇ ಬಳಸಿ. ಯಾಕೆಂದರೆ ಇತರ ವಾಹನಗ ಳಿಗೆ ನಿಮ್ಮ ಚಾಲನೆ ಗೊಂದಲವನ್ನುಂಟು ಮಾಡುತ್ತದೆ.

ನಿಯಂತ್ರಣಕ್ಕೆ ಏನು ಕ್ರಮ?
ವೇಗ ನಿಯಂತ್ರಣ, ಚಾಲನೆ ಸಂದರ್ಭ ಹೆಚ್ಚು ಲಕ್ಷ್ಯ ವಹಿಸುವುದು.
ನಿದ್ದೆಯ ಮಂಪರಿನಲ್ಲಿ ಡ್ರೈವಿಂಗ್‌ ಮಾಡದಿರುವುದು.
ಅಮಲು ಪದಾರ್ಥ ಸೇವಿಸಿ ಚಾಲನೆ ನಿಷೇಧ.
ವಾಹನಗಳನ್ನು ಸುಸ್ಥಿತಿ ಯಲ್ಲಿಟ್ಟುಕೊಳ್ಳುವುದು.
ರಸ್ತೆ ನಿಯಮಗಳನ್ನು ಪಾಲಿಸುವುದು.
ಸ್ಥಳೀಯಾಡಳಿತ ಸಂಸ್ಥೆಗಳು ಸೂಕ್ತ ಮೂಲ ಸೌಕರ್ಯ ಒದಗಿಸುವುದು.
ಪಾದಚಾರಿಗಳ ಬಗ್ಗೆ ಗಮನ.
ಪ್ರತಿಯೊಬ್ಬರ ಜೀವ ಅಮೂಲ್ಯ ಎಂಬ ಚಿಂತನೆ ಬೆಳೆಸಿಕೊಳ್ಳುವುದು.

Advertisement

Udayavani is now on Telegram. Click here to join our channel and stay updated with the latest news.

Next