Advertisement
ಉದಯವಾಣಿಯೊಂದಿಗಿನ ಸಂದರ್ಶನದಲ್ಲಿ ಈ ವಿಷಯ ತಿಳಿಸಿದ ಅವರು, ಆಯೋಗಕ್ಕೆ ಸಲ್ಲಿಕೆಯಾಗುತ್ತಿರುವ ಪ್ರಕರಣಗಳು 2 ವರ್ಷಗಳಿಂದ ಹೆಚ್ಚುತ್ತಿವೆ. 1990ರಲ್ಲಿ ರಾಷ್ಟ್ರೀಯ ಆಯೋಗ ಆರಂಭಗೊಂಡಾಗ ಪ್ರಕರಣಗಳು ಹೆಚ್ಚಿದ್ದವು. ಮಧ್ಯ ದಲ್ಲಿ ಸ್ವಲ್ಪ ಕಡಿಮೆಯಾಯಿತು. ಈಗ ಮತ್ತೆ ಹೆಚ್ಚಿದೆ. ಅದರಲ್ಲೂ ಇತ್ತೀಚಿನ ವರ್ಷಗಳಲ್ಲಿ ಸೈಬರ್ ಅಪರಾಧ ಪ್ರಕರಣಗಳು ಹೆಚ್ಚುತ್ತಿವೆ. ನಮ್ಮ ಎನ್‌ಆರ್‌ಐ ಸೆಲ್‌ನಲ್ಲೂ ಪ್ರಕರಣಗಳು ಹೆಚ್ಚುತ್ತಿವೆ ಎಂದಿದ್ದಾರೆ.
Related Articles
Advertisement
ಕಿರುಕುಳವನ್ನು ತಡೆಗಟ್ಟಲು ಜಾಗೃತಿ ಮೂಡಿಸು ವುದು, ಸಂತ್ರಸ್ತ ಮಹಿಳೆಯರಿಗೆ ಬೇಕಾದ ಕಾನೂನು, ವೈದ್ಯಕೀಯ, ಶೈಕ್ಷಣಿಕ ಸಹಿತ ನೆರವು ಒದಗಿಸುವುದು, ಲೆಕ್ಕದಲ್ಲಿ ತೋರಿಸುವುದಕ್ಕಿಂತ ಕಡಿಮೆ ವೇತನ ನೀಡುವ ಕಾರ್ಖಾನೆಗಳ ವಿರುದ್ಧವೂ ಕ್ರಮ ಜರಗಿ ಸುವುದು ಇತ್ಯಾದಿ ನಮ್ಮ ಕೆಲಸ ಎಂದರು.
ರಾಷ್ಟ್ರೀಯ, ರಾಜ್ಯ ಮಹಿಳಾ ಆಯೋಗದ ವ್ಯಾಪ್ತಿಗಳ ಬಗ್ಗೆ ವಿವರಿಸಿ, ರಾಜ್ಯ ಆಯೋಗ ರಾಜ್ಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸಿದರೆ ನಮ್ಮದು ರಾಷ್ಟ್ರ ವ್ಯಾಪ್ತಿ. ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು, ಉತ್ತರ ಪ್ರದೇಶ ನನ್ನ ವ್ಯಾಪ್ತಿ. ಇತರ ರಾಜ್ಯಗಳಿಗೆ ಭೇಟಿ ಕೊಡುವ ಅಧಿಕಾರವೂ ಇದೆ ಎಂದರು. ಆಯೋಗದಲ್ಲಿ ವರ್ಷಕ್ಕೆ 35ರಿಂದ 40 ಸಾವಿರ, ಕರ್ನಾಟಕದಲ್ಲಿ ಸುಮಾರು 3 ಸಾವಿರ ಪ್ರಕರಣಗಳು ದಾಖಲಾಗುತ್ತಿವೆ. ಬಿಹಾರ, ಉತ್ತರ ಪ್ರದೇಶಗಳಲ್ಲಿ ಅತಿ ಹೆಚ್ಚು ಪ್ರಕರಣಗಳಿವೆ. ನಾವು ತೀರ್ಪು ಕೊಟ್ಟ ಬಳಿಕವೂ ನ್ಯಾಯಾಲಯಗಳಿಗೆ ಹೋಗಬಹುದು. ಆ ಸಂದರ್ಭಗಳಲ್ಲಿ ಕಾನೂನು ಸೇವಾ ಪ್ರಾಧಿಕಾರದ ಮೂಲಕ ನ್ಯಾಯವಾದಿಗಳ ಒದಗಣೆ ಮತ್ತಿತರ ಸಹಾಯ ನೀಡಲಾಗುವುದು ಎಂದರು. ಆಯೋಗದಲ್ಲಿ ಐವರು ಸದಸ್ಯರು ಮತ್ತು ಅಧ್ಯಕ್ಷರು ಇರಬೇಕು. ಆದರೆ ಇದುವರೆಗೆ ಪೂರ್ಣ ಪ್ರಮಾಣದಲ್ಲಿ ಆಗಿರಲಿಲ್ಲ. ಇದೇ ಮೊದಲ ಬಾರಿಗೆ ಪೂರ್ಣಪ್ರಮಾಣದಲ್ಲಿ ಆಯೋಗ ರಚನೆಯಾಗಿದೆ ಎನ್ನುತ್ತಾರೆ ಅವರು.
ಶ್ಯಾಮಲಾ ಕುಂದರ್ ಬಿಜೆಪಿಯಲ್ಲಿ ತಳಮಟ್ಟದಿಂದ ಬೆಳೆದವರು. ಉಡುಪಿ ಗ್ರಾಮಾಂತರ ಮಹಿಳಾ ಮೋರ್ಚಾ ಅಧ್ಯಕ್ಷೆ, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ, ರಾಜ್ಯ ಬಿಜೆಪಿ ಕಾರ್ಯದರ್ಶಿ, ರಾಜ್ಯ ಕಾರ್ಯಕಾರಿಣಿ ಸದಸ್ಯೆಯಾಗಿ ಹಲವು ಹೋರಾಟಗಳಲ್ಲಿ ತೊಡಗಿಕೊಂಡವರು. ಆಯೋಗದ ಸದಸ್ಯರಿಗೆ ಬಿಸಿನೆಸ್ ಕ್ಲಾಸ್ ಟಿಕೆಟ್‌ನಲ್ಲಿ ವಿಮಾನಯಾನ ನಡೆಸಬಹುದಾದರೂ ಅನಗತ್ಯ ದುಂದು ವೆಚ್ಚ ತಡೆಯಲು ಇಕಾನಮಿ ಕ್ಲಾಸ್ ನಲ್ಲೇ ಪ್ರಯಾಣಿಸುವುದಾಗಿ ತಿಳಿಸುತ್ತಾರೆ ಅವರು.