Advertisement

ಕಾರಟಗಿಯಲ್ಲಿ ಹೆಚ್ಚುತ್ತಿದೆ ಸೋಂಕು

01:24 PM Aug 01, 2020 | Suhan S |

ಕಾರಟಗಿ: ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳ ಹಿನ್ನೆಲೆಯಲ್ಲಿ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ರ್ಯಾಪಿಡ್‌ ಆ್ಯಂಟೀಜೆನ್‌ ಟೆಸ್ಟ್‌ ಮಾಡಲಾಗುತ್ತಿದೆ. ಮೂರು ದಿನಗಳಿಂದ ಪಟ್ಟಣದ ವಿವಿಧ ವಾರ್ಡ್‌ಗಳಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ಆ್ಯಂಟೀಜೆನ್‌ ಟೆಸ್ಟ್‌ ಆರಂಭಿಸಿದೆ.

Advertisement

ಬುಧವಾರ ಮೊದಲ ದಿನ 5 ತಂಡಗಳಲ್ಲಿ 82 ಜನರ ಪರೀಕ್ಷೆ ನಡೆಸಲಾಗಿದ್ದು, 14 ಪಾಸಿಟಿವ್‌ ಪ್ರಕರಣಗಳು ಪತ್ತೆಯಾಗಿವೆ. ಎರಡನೇ ದಿನ 50 ಜನರನ್ನು ಪರೀಕ್ಷಿಸಲಾಗಿ 15 ಜನರಲ್ಲಿ ಸೋಂಕು ಇರುವುದು ಪತ್ತೆಯಾಗಿದೆ. ಈ ಎರಡು ದಿನಗಳಲ್ಲಿ 29 ಪಾಸಿಟಿವ್‌ ಪ್ರಕರಣಗಳು ಕಂಡು ಬಂದಿವೆ. ಶುಕ್ರವಾರ 9 ತಂಡ ರಚಿಸಿ ಪಟ್ಟಣದ ವಿವಿಧ ವಾರ್ಡ್‌ಗಳಿಗೆ ಕಳುಹಿಸಿದ್ದು 124 ಜನರನ್ನು ಪರೀಕ್ಷಿಸಲಾಗಿದ್ದು, ಒಟ್ಟು 17 ಪಾಸಿಟಿವ್‌ ಪ್ರಕರಣಗಳು ಕಂಡು ಬಂದಿವೆ.

ಅದರಲ್ಲಿ ಮೂವರಿಗೆ ಇತರೆ ಕಾಯಿಲೆಗಳು ಇರುವ ಕಾರಣಕ್ಕೆ ಅವರನ್ನು ಜಿಲ್ಲಾಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗೆ ಕಳುಹಿಸಿಕೊಡಲಾಗಿದೆ. ಇಲ್ಲಿವರೆಗೂ ಕಾರಟಗಿ ತಾಲೂಕಿನಲ್ಲಿ ಕೋವಿಡ್ ಪಾಸಿಟಿವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಮೃತಪಟ್ಟಿದ್ದಾರೆ. ಕಾರಟಗಿಯಲ್ಲೂ ಕೋವಿಡ್ ಪಾಸಿಟಿವ್‌ ಪ್ರಕರಣಗಳು ಹೆಚ್ಚಿದ ಹಿನ್ನೆಲೆಯಲ್ಲಿ ರ್ಯಾಪಿಡ್‌ ಆ್ಯಂಟೀಜೆನ್‌ ಪರೀಕ್ಷೆಗೆ ಮುಂದಾಗಿದ್ದೇವೆ. ಕೋವಿಡ್ ಸೋಂಕು ಇರುವ ವ್ಯಕ್ತಿಗಳನ್ನು ವೇಗವಾಗಿ ಪತ್ತೆ ಹಚ್ಚಲು ಈ ಟೆಸ್ಟ್‌ ಸಹಕಾರಿಯಾಗಿದೆ. ಅರ್ಧ ಗಂಟೆಯಲ್ಲೇ ಫಲಿತಾಂಶ ಬರುವುದರಿಂದ ಸೋಂಕಿತ ವ್ಯಕ್ತಿ ಬೇರೊಬ್ಬರಿಗೆ ಸೋಂಕು ಹರಡದಂತೆ ತಡೆಯಲು ಸಹಕಾರಿಯಾಗಿದೆ. ಅಲ್ಲದೇ ಕಾರಟಗಿಯಲ್ಲಿ ಸಂಚಾರಿ (ಮೊಬೈಲ್‌) ಆ್ಯಂಟೀಜೆನ್‌ ಪರೀಕ್ಷಾ ತಂಡವನ್ನು ಉಳಿಸಿಕೊಂಡು ಚಿಕಿತ್ಸೆ ಮುಂದುವರಿಸಲು ನಿರ್ಧರಿಸಲಾಗಿದೆ ಎಂದು ವೈದ್ಯಾಧಿಕಾರಿಗಳು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next