ದುಬಾೖ: ಭಾರತ ಮತ್ತು ದುಬಾೖ ನಡುವೆ ಇತ್ತೀಚಿನ ದಿನಗಳಲ್ಲಿ ವಾಣಿಜ್ಯಿಕ ಬಾಂಧವ್ಯ ಬಲಗೊಳ್ಳುತ್ತಿದೆ. ಅದಕ್ಕೆ ಪೂರಕವೆಂಬಂತೆ ಭಾರತ ಅದರ ಎರಡನೇ ಅತಿದೊಡ್ಡ ವಾಣಿಜ್ಯಿಕ ಸಹಭಾಗಿತ್ವ ಹೊಂದಿರುವ ರಾಷ್ಟ್ರವಾಗಿದೆ.
ಪ್ರಸಕ್ತ ಸಾಲಿನಲ್ಲಿ 38.5 ಬಿಲಿಯನ್ ದಿರ್‌ಹಮ್‌ನಷ್ಟು ವಹಿವಾಟು ಹೊಂದಿದೆ. ಮೊದಲ ಸ್ಥಾನದಲ್ಲಿ ಚೀನ ಇದ್ದು, 86.7 ಬಿಲಿಯನ್ ದಿರ್‌ಹಮ್ ಗಳಷ್ಟು ವಹಿವಾಟು ಹೊಂದಿದೆ ಎಂದು ಅಲ್ಲಿನ ಸರಕಾರ ಬಿಡುಗಡೆ ಮಾಡಿರುವ ಮಾಹಿತಿಯಲ್ಲಿ ಉಲ್ಲೇಖವಾಗಿದೆ.
ಅ.1ರಂದು “ಎಕ್ಸ್ ಪೋ 2020 ದುಬಾೖ’ ಶುರುವಾಗಲಿದ್ದು, ಅದಕ್ಕೆ ಪೂರಕವಾಗಿ ಈ ಮಾಹಿತಿ ಬಿಡುಗಡೆಯಾಗಿದೆ. ಕಳೆದ ವರ್ಷ ಮತ್ತು ಈ ವರ್ಷದ ಅವಧಿಯಲ್ಲಿ ಭಾರತ- ದುಬಾೖ ನಡುವಿನ ವಾಣಿಜ್ಯ ಚಟುವಟಿಕೆಗಳು ಶೇ.74.5ರಷ್ಟು ಬೆಳವಣಿಗೆಯಾಗಿವೆ.
ಇದನ್ನೂ ಓದಿ:ಎರಡು ಗುಂಪುಗಳ ಗಲಾಟೆಯಲ್ಲಿ ʼಬಸವʼ ಬಡವಾಯ್ತು
ಗೋಯಲ್ ಉದ್ಘಾಟನೆ: “ಎಕ್ಸ್ ಪೋ 2020 ದುಬಾೖ’ ಕಾರ್ಯಕ್ರಮದಲ್ಲಿ “ಇಂಡಿಯಾ ಪೆವಿಲಿಯನ್’ ಅನ್ನು ಕೇಂದ್ರ ಸಚಿವ ಪಿಯೂಷ್ ಗೋಯಲ್ ಉದ್ಘಾಟಿಸಲಿದ್ದಾರೆ. ಅದರಲ್ಲಿ ಹವಾಮಾನ, ಜೀವ ವೈವಿಧ್ಯ, ನಗರ, ಗ್ರಾಮೀಣಾಭಿವೃದ್ಧಿ ಸೇರಿದಂತೆ 11 ಪ್ರಮುಖ ಸಂದೇಶ ಸಾರುವ ವಿಭಾಗಗಳು ಇರಲಿವೆ . 183 ದಿನಗಳ ಕಾರ್ಯಕ್ರಮ 2022 ಮಾ.31ರಂದು ಮುಕ್ತಾಯಗೊಳ್ಳಲಿದೆ.